ಪುಟ:ಕಥಾಸಂಗ್ರಹ ಸಂಪುಟ ೨.djvu/೪೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ ಬೇಕು. ಎರಡನೆಯ ವರಕ್ಕೆ ಭರತನಿಗೆ ಈ ರಾಜ್ಯದ ಪಟ್ಟಾಭಿಷೇಕವನ್ನು ಮಾಡಿಸ ಬೇಕು ಎಂದು ಹೇಳಲು ಆಗ ದಶರಥರಾಜನು ಪ್ರಚಂಡವಾದ ವಾಯುವಿನಿಂದ ನಡು ಗುವ ವೃಕ್ಷದಂತೆ ಗಡಗಡನೆ ನಡುಗುತ್ತ ಕೂರವಾದ ಆಕೆಯ ಮಾತುಗಳು ಶ್ರುತಿ ಪಥವನ್ನೆ ದಿದ ಕೂಡಲೆ ಕೆಂಪಗೆ ಕಾದ ಉಕ್ಕಿನ ಶಲಾಕೆಯಿಂದ ಕಿವಿಯಲ್ಲಿ ಇರಿಯ ಲ್ಪಟ್ಟವನಂತೆ ನೆಲದಲ್ಲಿ ಬಿದ್ದು ಮರ್ಧೆ ಹೊಂದಿದನು. ಅನಂತರದಲ್ಲಿ ಬಲು ಹೊತ್ತಿನ ಮೇಲೆ ಸ್ವಲ್ಪ ಚೇತರಿಸಿಕೊಂಡು--ಇದೇನು ? ಕನಸೋ ? ಮನೋವಿಕ್ರಮ ಣೆಯೋ ? ಅಥವಾ ಎದೆಯ ಉಪದ್ರವೋ? ನನ್ನ ಶರೀರದಲ್ಲಿ ಇಂಥ ಭಯಂಕರವಾದ ತೀವ್ರವೇದನೆಯು ಏತಕುಂಟಾಯಿತು ? ಎಂದು ಆಲೋಚಿಸುತ್ತ ಸ್ವಲ್ಪ ವಿಶ್ರಾಂತಿ ಯನ್ನು ಹೊಂದಿದವನಾಗಿ ನೆಲದ ಮೇಲೆ ಬಿದ್ದು ಕೊಂಡು ಬಹು ದೀರ್ಘವಾದ ನಿಟ್ಟು ಸಿರುಗಳನ್ನು ಬಿಡುತ್ತ ಅಹಿತುಂಡಿಕನ ಮ೦ತ್ರದಿಂದ ತಡೆಯಲ್ಪಟ್ಟ ಮಹಾ ವಿಷವುಳ್ಳ ನಾಗರಹಾವಿನೋಪಾದಿಯಲ್ಲಿ ಭೋರ್ಗರೆಯುತ್ತಹಾ ರಾಮ ! ರಾಮಚ೦ದ್ರನೇ ! ನನ್ನ ಮೋಹದ ಕಂದನೇ ! ಎಂದು ಹಂಬಲಿಸುತ್ತ ದುಃಖಾಗ್ನಿಯಿಂದ ಸುಟ್ಟು ಕರಿ ಮುರಿಯಾದ ಮೈಯುಳ್ಳವನಾಗಿ ಪುನಃ ಮರ್ಧೆಯನ್ನು ಹೊಂದಿ ಬಲುಹೊತ್ತಿಗೆ ಎಚ್ಚೆತ್ತು ಬಹು ದುಃಖಿತನಾಗಿ ಕೋಪದಿಂದ ಕೂಡಿ ಕೆಂಪಾದ ಕಣ್ಣಳಿಂದ ಸುಡುವ ವನೋಪಾದಿಯಲ್ಲಿ ಕೈಕೇಯಿ ಯನ್ನು ದುರದುರನೆ ನೋಡಿ-ಎಲೇ ಘಾತುಕಳೇ ! ದುಪ್ಪಭಾವವುಳ್ಳವಳೇ! ಕುಲವಿನಾಶಿನಿಯೇ ! ಪಾಷ ಛೇ! ರಾಮನು ನಿನಗೇನು ಆಪ ರಾಧವನ್ನು ಮಾಡಿದನು ? ರಾಮನು ನಿನ್ನಲ್ಲಿ ನಿಜಮಾತೃವಿಗಿಂತಲೂ ಅಧಿಕವಾದ ಗೌರವವನಿ ಟ್ಟಿರುವನೆಲ್ಲಾ ! ಅಂಥ ರಾಮನ ಅನರ್ಥಕ್ಕೋಸ್ಕರ ನೀನು ಈ ರೀತಿ ಯಾಗಿ ಉದ್ಯುಕ್ತಳಾಗಬಹುದೇ ? ಅತಿಕರವಾದ ವಿಷವೊಳ ಮಹೋರಗಿಯೆಂದರಿ ಯದೆ ರಾಜಕುಮಾರಿ ಎಂದು ನಾನು ನಿನ್ನನ್ನು ಮದುವೆಯಾಗಿ ನನ್ನ ಮನೆಗೆ ಕರೆದು ತಂದು ನನಗೆ ಅಂತ್ಯ ಕಾಲವನ್ನು ತಂದು ಕೊಂಡೆನಲ್ಲಾ! ಜೀವಲೋಕವೆಲ್ಲ ವೂ ಏಕಪ್ರ ಕಾರವಾಗಿ ರಾಮನ ಗುಣಸ್ತೋತ್ರವನ್ನು ಮಾಡುತ್ತಿರುವುದು. ಪ್ರಿಯ ಕುಮಾರ ನಾದ ರಾಮನಲ್ಲಿ ಯಾವ ತಪ್ಪನ್ನು ಕಂಡು ಕಾಡಿಗಟ್ಟು ವೆನು ? ಕೌಸಿಯನ್ನಾದರೂ ಸುಮಿತ್ರೆಯನ್ನಾದರೂ ಮತ್ತು ಐಶ್ವರ್ಯಕಿಯನ್ನಾದರೂ ಕಡೆಗೆ ಸಾಣಗಳನ್ನಾ ದರೂ ಬಿಡಬಲ್ಲೆನು. ಸುಗುಣಾರಾಮನಾಗಿ ಪಿತೃವತ್ಸಲನಾದ ರಾಮನನ್ನು ಬಿಡಲಾ ರೆನು, ಹಿರಿಯ ಮಗನಾದ ರಾಮನನ್ನು ನೋಡುವುದರಿಂದ ನನ್ನ ಸಂತೋಷವು ಚಂದ್ರ ನನ್ನು ನೋಡಿದ ಸಮುದ್ರದಂತೆ ಹೆಚ್ಚು ತ್ತಿರುವುದು. ರಾಮನನ್ನು ನೋಡದೆ ಒಂದು ನಿಮೇಷ ಮಾತ್ರವಿದ್ದರೆ ನನ್ನ ಚೇತನಾ ಹಾರಿಹೋಗುವುದು. ಸೂರ್ಯನಿಲ್ಲದೆ ಲೋಕ ವೂ ನೀರಿಲ್ಲದೆ ಸಸ್ಯವೂ ನಿಂತರೂ ನಿಲ್ಲಬಹುದು. ರಾಮನಿಲ್ಲದಿದ್ದರೆ ನನ್ನ ಜೀವವು ನಿಲ್ಲ ಲಾರದು. ಎಲೇ ಪಾಪಕಾರಿಣಿಯೇ ! ಸಾಕು ಈ ಮೌರ್ಖ್ಯವನ್ನು ಬಿಡು. ನಿನ್ನ ಕಾಲೆ ಡೆಗೆ ನನ್ನ ತಲೆಯನ್ನು ಚಾಚುವೆನು ನನಗೆ ಪ್ರಸನ್ನಳಾಗು. ಅಯ್ಯೋ ! ಮಹಾದಾರು ಣವಾದ ಇಂಥ ದುಷ್ಕಾರ್ಯವನ್ನು ಏಕೆ ಚಿಂತಿಸಿದೆ ? ಕೇಕಯ ವಂಶದಲ್ಲಿ ಹುಟ್ಟಿ ಇಕ್ಷಾಕು ಕುಲವನ್ನು ಹೊಕ್ಕಂಥ ನಿನಗೆ ಇಂಥ ದುರ್ಬುದ್ದಿಯು ಹುಟ್ಟಬಹುದೇ ?