ಪುಟ:ಕಥಾಸಂಗ್ರಹ ಸಂಪುಟ ೨.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ 39 ನೋಡಿ ಒಂದು ಕಣಕಾಲವಾದರೂ ಸಹಿಸಲಾರೆನು, ವಿಶೇಷವೇಕೆ ? ರಾಮನ ವನ ವಾಸ ಹೊರತಾಗಿ ಇನ್ನು ಯಾವುದರಿಂದಲೂ ನನಗೆ ಸಂತೋಷವೂ ಬದುಕುವಿಕೆಯ ಇಲ್ಲ ಎಂದು ಬಿರುನುಡಿಗಳಿ೦ದ ಹೇಳಿಬಿಟ್ಟಳು. ಆಗ ದಶರಥನು ಸಿಡಿಲಿನಂತೆ ಭಯಂಕರವಾದ ಕೈಕೇಯಿಯ ಮಾತುಗಳನ್ನು ಕೇಳಿ ಆಕೆಯ ಅನಿವಾರ್ಯವಾದ ಮನೋನಿಷ್ಕರ್ಷೆಯನ್ನು ನೆನೆನೆನೆದು ಬುಡವನ್ನು ಕಡಿದುರುಳಿಸಲ್ಪಟ್ಟ ಮರದಂತೆ ಭೂಮಿಯಲ್ಲಿ ಬಿದ್ದು ಹುಚ್ಚನಂತೆಯ ಸನ್ನಿ ಪಾತ ಜ್ವರಪೀಡಿತನಂತೆಯ ಗಾರುಡದಿಂದ ತಡೆಗಟ್ಟಿದ ಕರವಿಷಸರ್ಪದಂತೆಯೂ ಇರು ವವನಾಗಿ-ಹಾ ರಾಮಾ ! ಎಂದು ಪುನಃ ಚೇತರಿಸಿಕೊಂಡು ದುಷ್ಟಳಾದ ಕೈಕೇ ಯಿಯನ್ನು ಕುರಿತು- ಎಲೇ ಪಾಪೋತ್ಪಾದಿನಿಯೇ ! ಅನಾದಿಸಂಸಿದ್ಧವಾದ ನಮ್ಮ ಸೂರ್ಯವಂಶದಲ್ಲಿ ಹುಟ್ಟಿದವರಾದ ಹಿಂದಿನವರೆಲ್ಲಾ ಜೇಷ್ಠ ಪುತ್ರನಿಗೇ ರಾಜ್ಯಾಭಿ ಷೇಕವನ್ನು ಮಾಡಿದರೇ ಹೊರತು ಈ ವರೆಗೂ ಯಾರೂ 'ಕಿರಿಯ ಮಕ್ಕಳಿಗೆ ರಾಜ್ಯಾ ಭೀಷೆಕವನ್ನು ಮಾಡಲಿಲ್ಲ. ಈಗ ನೀನು ಯೋಚಿಸಿರುವ ಇಂಥ ಈರಕಾರ್ಯವು ನಿನ್ನ ಮಗನಾದ ಭರತನಿಗೆ ಎಷ್ಟು ಮಾತ್ರವೂ ಪ್ರಿಯವಾಗಲಾರದು. ಮತ್ತು ಕಿರಿಯ ಹೆಂಡತಿಯ ಮಾತುಗಳನ್ನು ಕೇಳಿಕೊಂಡು ಗುಣದೋಷವಿಚಾರಶೂನ್ಯನಾಗಿ ಗುಣ ಶಾಲಿಯ ರಾಜಾರ್ಹನೂ ಜೋಷ ಕುಮಾರನೂ ಆದ ರಾಮನನ್ನು ಅನ್ಯಾಯವಾಗಿ ಅರಣ್ಯಕ್ಕೆ ಅಟ್ಟಿದನೆಂದು ಲೋಕದಲ್ಲಿ ಜನರೆಲ್ಲರೂ ನನ್ನನ್ನು ಹೀಯಾಳಿಸುವರು. ಅಲ್ಲದೆ ಧರ್ಮಮಾರ್ಗವನ್ನು ಅತಿಕ್ರಮಿಸಿ ಪತಿಯ ಪ್ರೇಮಕ್ಕೆ ಪಾತ್ರನಾದ ಮಗ ನನ್ನು ಕಾಡಿಗಟ್ರಿ ಪತಿಯನ್ನು ಕೊಂದುಹಾಕಿದ ಮಹಾ ಘಾತುಕಳೆಂಬ ಅಪಕೀರ್ತಿಯು ಸೂರ್ಯಚಂದ್ರರಿರುವ ವರೆಗೂ ನಿನಗೆ ತಪ್ಪುವುದಿಲ್ಲ . ಮಹಾನುಭಾವನೂ ಕೇಕ ಯರಾಜನೂ ಆದ ನಿನ್ನ ತಂದೆಯ ನೀತಿವಂತನೂ ನಿನ್ನ ತಮ್ಮನೂ ಆದ ಯುಧಾ ಚಿತ್ತೂ ಈ ವಿಧವಾದ ನಿನ್ನ ದುಸ್ಸ೦ಕಲ್ಪಸ್ಥಿತಿಯನ್ನು ಕೇಳಿದ ಕ್ಷಣದಲ್ಲಿಯೇ ಉತ್ತಮ ವಾದ ನಮ್ಮ ಕುಲದಲ್ಲಿ ಹುಟ್ಟಿ ಅಪಕೀರ್ತಿಯನ್ನು ತರತಕ್ಕವಳೆಂದು ತಿಳಿದು ನಿನ್ನನ್ನು ಪರಿತ್ಯಜಿಸುವರು. ಅದು ಕಾರಣ ತಂದೆತಮ್ಮಂದಿರಿಗೂ ನಿಜಪತಿಗೂ ಬಂಧು ಮಿತ್ರ ರಿಗೂ ಅಸಹ್ಯಕರವಾದ ಭರತಪಟ್ಟಾಭಿಷೇಕದಲ್ಲಿಯ ರಾಮನ ವನವಾಸದಲ್ಲಿಯೂ ಉಂಟಾಗಿರುವ ನಿನ್ನ ಪಾಪಸಂಕಲ್ಪವನ್ನು ಬಿಟ್ಟು ಬಿಡು. ಬಾಲ್ಯದಲ್ಲಿ ವಿವಿಧ ವಿದ್ಯಾಭ್ಯಾಸವನ್ನು ಮಾಡಿ ಯೌವನದಲ್ಲಿ ಧರ್ಮದಿಂದ ರಾಜ್ಯವನ್ನು ಪರಿಪಾಲಿಸಿ ಮುದಿತನದಲ್ಲಿ ಶೂರರಾದ ಮಕ್ಕಳಿಗೆ ರಾಜ್ಯಾಭಿಷೇಕವನ್ನು ಮಾಡಿ ಆ ಮೇಲೆ ನಮ್ಮ ಹಿರಿಯರೆಲ್ಲರೂ ಮಾಡಿದ ವನವಾಸಕ್ಕಾಗಿ ತರುಣನಾದ ರಾಮನನ್ನು ಮುದುಕನಾದ ನಾನು ಹೇಗೆ ಕಳುಹಿಸಬಹುದು ? ನನಗೆ ಹೊರಗಣ ಪಾಣವೇ ರಾಮನು, ಆತನು ವನವಾಸಕ್ಕೆ ಹೋದ ಕ್ಷಣದಲ್ಲೇ ನಾನು ಸತ್ತು ಹೋಗುವೆನು. ಹೀಗೆ ರಾಮನನ್ನು ಕಾಡಿಗಟ್ಟಿ ನನ್ನನ್ನು ಕೊಂದು ನೀನು ವಿಧವೆಯಾಗಿ ಭರತನೊಡನೆ ಸುಖವಾಗಿ ಬಾಳು ವೆನೆಂದು ಯೋಚಿಸಿರುತ್ತೀಯೆ. ಇದೋ, ಈಗ ನಿಜವಾಗಿ ಹೇಳುವೆನು. ಕೇಳು. ನೀನು ನನಗೆ ಹೆಂಡತಿಯ ಅಲ್ಲ. ನಾನು ನಿನಗೆ ಗಂಡನೂ ಅಲ್ಲ. ಈ ನಿನ್ನ ದಾರುಣ