ಪುಟ:ಕಥಾಸಂಗ್ರಹ ಸಂಪುಟ ೨.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ 43 43 ಮಾತ್ರದಿಂದಲೇ ಪ್ರಸನ್ನ ವದನನಾಗುತ್ತಿದ್ದನು. ಅಂಥವನು ಈಗ ನನ್ನನ್ನು ನೋಡಿ ಏತಕ್ಕಾಗಿ ಇಷ್ಟು ದುಃಖವನ್ನೂ ಸಂಕಟವನ್ನೂ ಅನುಭವಿಸುತ್ತಿರುವನು ? ಎಳೆಯ ದಾದ ಮಾವಿನ ಚಿಗುರು ಬೇಸಿಗೆಯ ಉರಿಬಿಸಿಲಿನಿಂದ ಕಂದಿರುವಂತೆ ಈತನ ಕೋಮಲ ವಾದ ಮುಖವು ಕಂದಿರುವುದಕ್ಕೆ ಕಾರಣವೇನು ? ನಾನೇನಾದರೂ ಅರಿಯದೆ ಅಪರಾಧ ಮಾಡಿದುದರಿಂದ ಇಷ್ಟು ಕೋಪಿಷ ನಾಗಿರಬಹುದೋ? ಹಾಗೇನಾದರೂ ಇದ್ದರೆ ನೀನು ನನ್ನಲ್ಲಿ ಕನಿಕರವನ್ನಿಟ್ಟು ನನಗೊನ್ನೆರ ಪ್ರಸನ್ನನಾಗುವಂತೆ ಮಾಡಬೇಕೆಂದು ಕೈಮು ಗಿದು ಬೇಡಿಕೊಳ್ಳುತ್ತಿರುವ ರಾಮನನ್ನು ನೋಡಿ ಕರಾತ್ಮಳಾದ ಕೈಕೇಯಿಯು ಅಜ್ಜಿ ಯನ್ನು ತೊರೆದು ತನ್ನ ಆಲೋಚನೆಗೆ ಅನುಕೂಲವಾದ ಮಾತುಗಳನ್ನು ಹೇಳಲುದ್ಯುಕ್ತ ೪ಾಗಿ---ಎಲೆ ರಾಮನೇ ! ನಿನ ಮೇಲೆ ಅರಸಿಗೆ ಸ್ವಲ್ಪವಾದರೂ ಕೋಪವಿಲ್ಲ, ಆತನ ಮನೋಗತವೊಂದುಂಟು. ಅದು ಅತಿಕ್ರಮಿಸುವುದಕ್ಕೆ ಅಸಾಧ್ಯವಾದುದು. ನೀನು ಏನು ಹೇಳುವಿಯೋ ಎಂಬ ಭಯದಿಂದ ಆತನು ಅದನ್ನು ಹೇಳಲಾರದೆ ಮನೋವ್ಯಥೆ ಯನ್ನನುಭವಿಸುತ್ತ ಇದ್ದಾನೆ ಪ್ರಿಯನಾದ ನಿನಗೆ ಆಪ್ರಿಯವಾದ ಮಾತನ್ನು ಹೇಗೆ ಹೇಳಿಯಾನು ? ಪೂರ್ವದಲ್ಲಿ ಪ್ರತಿಜ್ಞಾ ಪೂರ್ವಕವಾಗಿ ನನಗೆ ಎರಡು ವರಗಳನ್ನು ಕೊಟ್ಟು ಈಗ ಅವುಗಳನ್ನು ನಡಿಸಿಕೊಡುವ ವಿಷಯದಲ್ಲಿ ಸಾಧಾರಣ ಜನರಂತೆ ಈ ರೀತಿಯಾಗಿ ಸಂಕಟಪಟ್ಟು ಪೇಚಾಡುತ್ತಿರುವನು. ಸತ್ಯಸಂಧನಾದ ಈತನು ನನಗೆ ಕೊಟ್ಟ ಭಾಷೆಯನ್ನು ನೀನಾದರೂ ನಡಿಸಿ ಆತನನ್ನು ಸತ್ಯವಂತನನ್ನಾಗಿ ಮಾಡು. ಆ ಕೆಲಸವು ನಿನಗೆ ಪ್ರಿಯವಾಗಿದ್ದರೂ ಅಪ್ರಿಯವಾಗಿದ್ದರೂ ನೀನು ಅದನ್ನು ನಡಿಸಿಕೊ ಡುವುದಾದರೆ ಆ ಸಂಗತಿಯನ್ನು ವಿವರವಾಗಿ ಹೇಳುವೆನು ಎನಲು ರಾಮನು ಆ ಮಾತನ್ನು ಕೇಳಿ ತಂದೆಯ ಸನ್ನಿಧಾನದಲ್ಲಿ ಕೈಕೇಯಿಯನ್ನು ಕುರಿತು-ಎಲ್ಲೆ ತಾಯೇ ! ನೀನು ನನಗೆ ಈ ವಿಧವಾದ ಮಾತುಗಳನ್ನು ಹೇಳಬಹುದೇ ? ಪೂಜ್ಯನಾದ ನನ್ನ ತಂದೆಯ ಅಪ್ಪಣೆಯಾದರೆ ಉರಿಯುವ ಬೆಂಕಿಯಲ್ಲಾದರೂ ಬೀಳುವೆನು. ಪ್ರಾಣಾಪಹಾರಕವಾದ ವಿಷವನ್ನಾದರೂ ಪಾನಮಾಡುವೆನು. ಅಗಾಧವಾದ ಕಡಲಿ ನಲ್ಲಿಯಾದರೂ ಮುಳುಗುವೆನು. ಅಲ್ಲದೆ ನಾನು ಆ ವಿಷಯದಲ್ಲಿ ಬದಲು ಮಾತಾಡು ವವನಲ್ಲ, ಬೇಗ ನನ್ನ ತಂದೆಯ ಮನೋಭಿಪ್ರಾಯವನ್ನು ತಿಳಿಸು. ಸತ್ಯವಾಗಿ ನೆರವೇ ರಿಸುವೆನೆನು ಆಗ ದಯಾಶೂನ್ಯಳಾದ ಕೈಕೇಯಿಯು ರಾಮನನ್ನು ಕುರಿತು ಮೊದಲು ಪ್ರಾಪ್ತವಾಗಿದ್ದ ದೇವಾಸುರಯುದ್ದದಲ್ಲಿ ನಿಮ್ಮ ತಂದೆಗೆ ಸಂಭವಿಸಿದ್ದ ಕಷ್ಟ ವನ್ನು ನಾನು ಪರಿಹರಿಸಿದುದರಿಂದ ಆಗ ನನಗೆ ಎರಡು ವರಗಳನ್ನು ಕೊಟ್ಟಿದ್ದನು. ಈಗ ನಾನು ಆ ವರಗಳಿಗೆ ಫಲರೂಪವಾಗಿ ಭರತನಿಗೆ ಪಟ್ಟಾಭಿಷೇಕವನ್ನೂ ನೀನು ಜಡೆಯನ್ನೂ ನಾರ್ಮಡಿಯನ್ನೂ ಧರಿಸಿದವನಾಗಿ ಹದಿನಾಲ್ಕು ಸಂವತ್ಸರಗಳವರೆಗೂ ದಂಡಕಾರಣ್ಯದಲ್ಲಿ ವಾಸಮಾಡುವುದನ್ನೂ ಕೇಳಿಕೊಂಡೆನು. ಅದು ಕಾರಣ ಆತನು ನಿನ ಗೋಸ್ಕರ ಭಯಪಟ್ಟು ಹೀಗೆ ಪರಿತಪಿಸುತ್ತಿರುವನು. ನೀನು ತಂದೆಯನ್ನು ಸತ್ಯ ಪ್ರತಿ ಜ್ಞನನ್ನಾಗಿ ಮಾಡುವಂಥ ಸತ್ಪುತ್ರನಾಗಿದ್ದರೆ ಶಪಥವೂರ್ವಕವಾದ ಆತನ ವಾಗ್ತಾನೆ ವನ್ನು ನಡೆಸಿಕೊಡೆಂದು ಹೇಳಿದಳು. ಆಗ ರಾಮನು ಅಂಥ ಕ್ರೂರವಾದ ಮಾತು