ಪುಟ:ಕಥಾಸಂಗ್ರಹ ಸಂಪುಟ ೨.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ 45 45 4 ಬಲತಾಯಂದಿರೆಲ್ಲರನ್ನೂ ನನ್ನನ್ನು ಕಂಡಂತೆಯೇ ಕಾಣುತ್ತ ಅವರೆಲ್ಲರಿಗೂ ಪ್ರಿಯ ವಾಗುವಂತೆ ನಡೆಯುತ್ತ ಪ್ರಜಾಪರಿವಾರಗಳನ್ನು ನಿನ್ನ ಮಕ್ಕಳಿಗಿಂತಲೂ ಹೆಚ್ಚಾಗಿ ಕಾಪಾಡುತ್ತ ಗುರೂತ್ತಮರಾದ ವಸಿಷ್ಟಾದಿಗಳನ್ನು ಭಕ್ತಿಭಾವದಿಂದ ಕೂಡಿ ಪೂಜಿ ಸುತ್ತ ಅವರ ಆಜ್ಞೆಗಳನ್ನು ಸ್ವಲ್ಪವಾದರೂ ಊಾರದೆ ರಾಜನೀತಿಯನ್ನು ತಪ್ಪದೆ ಆಚಂದ್ರಾರ್ಕಸ್ಥಾಯಿಯಾಗಿ ಸಾಮ್ರಾಜ್ಯವನ್ನು ಅನುಭವಿಸುತ್ತಿರೆಂದು ಹೇಳಿ ಆಶೀ ರ್ವದಿಸಲು ಆಗ ರಾಮನು ಲಜ್ಞಾತನಾಗಿ-ಎಲೆ ಪೂಜ್ಯಳಾದ ತಾಯಿಯೇ ! ಈಗ ನಿನಗೆ ಒದಗಿರುವ ಮಹಾಭಯವನ್ನ ರಿಯದೆ ಹೀಗೆ ಹೇಳುತ್ತಿರುವೆಯಲ್ಲಾ! ಪಾಪಿಷ್ಠನಾದ ನಾನು ನಿನಗೂ ಸೀತೆಗೂ ಲಕ್ಷ್ಮಣನಿಗೂ ಮಹಾದುಃಖವನ್ನು ೦ಟು ಮಾಡುವುದಕ್ಕಾಗಿಯೇ ಹುಟ್ಟಿದೆನು. ನಾನು ಈಗ ದಂಡಕಾರಣ್ಯವನ್ನು ಕುರಿತು ಹೋಗುವೆನು. ನಾನು ಮಾಂಸಾದಿ ಶೇಷ ಭೋಜನಗಳನ್ನು ಬಿಟ್ಟು ಇನ್ನು ಮೇಲೆ ಮುನಿಜನೆಗಳಂತೆ ಗೆಡ್ಡೆಗೆಣಸುಗಳನ್ನು ತಿಂದು ಜೀವಿಸುತ್ತ ಹದಿನಾಲ್ಕು, ಸಂವತ್ಸರಗಳ ವರೆಗೂ ದಂಡಕವನದಲ್ಲಿ ವಾಸಮಾಡಬೇಕಾಗಿ ಬಂದಿದೆ. ಮಹಾರಾಜನು ಭರತನಿಗೆ ಪಟ್ಟಾಭಿಷೇಕವನ್ನು ಮಾಡುವನು. ವನವಾಸಕ್ಕಾಗಿ ನನಗೆ ಅಪ್ಪಣೆಯನ್ನಿತ್ಯನು ಎಂದು ಹೇಳಲು ಆಗ ಕೌಸಲ್ಯಾದೇವಿಯು ಆ ಮಾತುಗಳನ್ನು ಕೇಳಿ ಕೆಂಪಗೆ ಕಾಯಿಸಿದ ಉಕ್ಕಿನ ಶಲಾಕೆಗಳಿಂದ ಕಿವಿಯಲ್ಲಿ ತಿವಿಯಲ್ಪಟ್ರ೦ತಾಗಿ ಕರಿಯು ತನ್ನ ಕರದಿಂ ಬಿಸುಟ ಪುಷ್ಪಮಾಲಿಕೆಯಂತೆಯ ಸ್ವರ್ಗದಿಂದ ಭೂಮಿಗೆ ಬಿದ್ದ ದೇವತೆ ಯಂತೆಯ ಪ್ರಚಂಡಮಾರುತದಿಂದ ಮುರಿದುರುಳಿದ ಬಾಳೆಗಂಬದಂತೆಯ ನೆಲದ ಮೇಲೆ ಬಿದ್ದು ಮೂರ್ಛಿತಳಾಗಲು ರಾಮನು ಶೈತ್ಯೋಪಚಾರಗಳನ್ನು ಮಾಡಿ ಚೇತನಗೊಳಿಸಿ ಎಬ್ಬಿಸಿದನು. ಅನಂತರದಲ್ಲಿ ಆಕೆಯು ರಾಮನನ್ನು ನೋಡಿ ನಾನು ವ್ರತೋಪವಾಸಗ ಳನ್ನು ಆಚರಿಸಿ ಅನೇಕ ದೇವತಾಪ್ರಾರ್ಥನೆಗಳನ್ನು ಮಾಡಿ ಬಹು ಕಾಲಕ್ಕೆ ನಿನ್ನನ್ನು ಪಡೆದು ಇಂಥ ದುರಂತದುಃಖಕ್ಕೆ ಗುರಿಯಾದೆನು. ಲೋಕದಲ್ಲಿ ಮಕ್ಕಳನ್ನು ಹೆತ್ತು ಹೀಗೆ ವ್ಯಥೆಯನ್ನೂ ಮಹಾ ದುಃಖವನ್ನೂ ಅನುಭವಿಸುವುದಕ್ಕಿಂತ ಹೆಂಗಸರು ಬಂಜೆ ಯಾಗಿರುವುದೇ ಉತ್ತಮವು. ಇದರಿಂದ ಮಕ್ಕಳಿಲ್ಲ ವೆಂಬ ವಾರ್ತೆಯೊಂದೇ ಹೊರತು ಅನ್ಯಥಾ ಯಾವ ದುಃಖವೂ ಇರುವುದಿಲ್ಲ. ನನ್ನ ಸವತಿಯಾದ ಕೈಕೇ ಯಿಯು ತಾನು ಪತಿಯ ಪ್ರೀತಿಗೆ ಪಾತ್ರಳಾಗಿದ್ದೇನೆಂಬ ಗರ್ವದಿಂದ ಆಗಾಗ್ಗೆ ಕೆಟ್ಟ ಮಾತುಗಳನ್ನಾಡಿ ನನ್ನನ್ನು ಬಹುವಾಗಿ ನಿಂದಿಸುತ್ತಿರುವಳು. ಈ ವರೆಗೂ ನಿನ್ನನ್ನು ನೋಡುತ್ತಿದ್ದುದರಿಂದ ಮಹಾವ್ಯಸನವನ್ನು ಸಹಿಸಿಕೊಂಡಿದ್ದನು. ಇನ್ನು ಮೇಲೆ ನೀನು ಕಾಡಿಗೆ ಹೋಗಿ ಆಕೆಯ ಮಗನಿಗೆ ರಾಜ್ಯಾಭಿಷೇಕವಾಗುವದರಿಂದ ನಾನು ಅವಳ ಕೈ ಕೆಳಗೆ ಬಿದ್ದಿರಬೇಕಾಗಿ ಬಂದಿತು. ನನಗೆ ಇದಕ್ಕಿಂತಲೂ ಹೆಚ್ಚಾದ ಮತ್ತೊಂದು ದುಃಖವಿರುವುದೇ ? ಎಲೈ ತಂದೆಯೇ ! ರಾಮನೆ ! ನೀನು ಅರಣ್ಯ ವಾ ಸಕ್ಕೆ ಹೋದಕೂಡಲೆ ನನಗೆ ಮರಣವು ಸಿದ್ಧವಾಗಿರುವುದು. ಹದಿನಾಲ್ಕು ಸಂವತ್ನ ರಗಳ ಪರ್ಯ೦ತರವೂ ನಿನ್ನನ್ನ ಗಲಿ ನಾನೆಂತು ಬದುಕಲಿ ? ಚಂದ್ರಮಂಡಲಕ್ಕೆ ಸಮಾ