ಪುಟ:ಕಥಾಸಂಗ್ರಹ ಸಂಪುಟ ೨.djvu/೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


46 ಕಥಾಸಂಗ್ರಹ-೪ ನೆಯ ಭಾಗ ನವಾದ ನಿನ್ನ ಮುಖವನ್ನು ನೋಡದೆ ನಾನು ಜೀವಿಸುವುದು ಹೇಗೆ ? ಪತಿಯ ಪ್ರೀತಿಯ ಇಲ್ಲದೆ ನಿನ್ನ ನ್ನು ತೊರೆದು ಕೃಪಣಳಾಗಿ ನಾನು ಬಾಳುವುದುಂಟೇ? ನೀನು ಚನ್ನಾಗಿ ಬದುಕ ಬೇಕೆಂಬ ಉದ್ದೇಶದಿಂದ ನಾನು ಮಾಡಿದ ದೇವತಾಪ್ರಾರ್ಥನೆಗಳೂ ವ್ರ ತೋಪವಾಸಗಳೂ ದಾನಧರ್ಮಗಳೂ ಇವೆಲ್ಲವೂ ಬೂದಿಯಲ್ಲಿ ಮಾಡಿದ ಹೋಮ ದಂತೆ ನಿಷ್ಪಲವಾದವು. ನಿನ್ನ ಅರಣ್ಯವಾಸದ ಸುದ್ದಿಯನ್ನು ಕೇಳಿದರೂ ನನ್ನ ಎದೆಯು ಸೀಳಿಹೋಗದೆ ಇರುವುದರಿಂದ ಪಾಪಿಯಾದ ವಿಧಿಯು ನನ್ನ ಹೃದಯವನ್ನು ವಜ್ರದಿಂದ ಮಾಡಿರಬಹುದೆಂದು ನೆನಸುತ್ತೇನೆ. ಅರಣ್ಯದಲ್ಲಿ ಸಿಂಹವು ಹೆಣ್ಣು ಹುಲ್ಲೆ ಯನ್ನು ಎಳೆ ದೊಯ್ಕಂತೆ ಯಮನು ನನ್ನನ್ನು ತನ್ನ ಪಟ್ಟಣಕ್ಕೆ ಏತಕ್ಕಾಗಿ ಎಳದೊಯ್ಯುವುದಿ ಲ್ಲವೋ ? ದುಃಖಕಾಲದಲ್ಲಿ ಮರಣವುಂಟಾಗುವುದಿಲ್ಲವೆಂದು ಹಿರಿಯರು ಹೇಳುವ ಮಾತು ಈಗ ನನ್ನಲ್ಲೇ ನಿದರ್ಶನಕ್ಕೆ ಬಂದಿತು. ಮುದ್ದಾದ ಕರುವನ್ನು ಕಾಣದ ಎಳ ಗಂದಿಯೋಪಾದಿಯಲ್ಲಿ ಸಂಕಟವನ್ನನುಭವಿಸುತ್ತ ಪಾಪಿಯಾದ ನಾನು ಬದುಕಿರುವದ ಕ್ಕಿಂತ ಸಾಯುವುದೇ ಒಳ್ಳೆಯದು. ಅಥವಾ ನಾನು ನಿನ್ನೊಡನೆ ವನಕ್ಕೆ ಬರುವೆನು, ಕರೆ ದುಕೊಂಡು ಹೋಗೆಂದು ಮೊರೆಯಿಟ್ಟು ಹಂಬಲಿಸಿ ಕಣ್ಣೀರುಗಳನ್ನು ಸುರಿಸುತ್ತ ಅನಾ ಥೆಯಂತೆ ಪ್ರಲಾಪಿಸುತ್ತಿರಲು ಆಗ ಲಕ್ಷಣನು ಕೌಸಲೈಯನ್ನು ಕುರಿತು ಹೆಂಗಸಿಗೆ ಅಧೀನನೂ ಮುದುಕನೂ ಬುದ್ದಿ ಯಿಲ್ಲದವನೂ ಆದ ತಂದೆಯ ಮಾತನ್ನು ಕೇಳಿ ಈ ರಾಮನು ರಾಜಶ್ರೀಯನ್ನು ಬಿಟ್ಟು ವನವಾಸಕ್ಕೆ ಹೋಗುವುದು ಯಾವ ಧರ್ಮವು? ರಾಜ್ಯಾಭಿಷೇಕಕ್ಕೆ ಯೋಗ್ಯನಾದ ಜೈಷ್ಣಕುಮಾರನನ್ನು ವನವಾಸಕ್ಕೆ ಕಳುಹಿಸುವು. ದಾದರೆ ಈತನಲ್ಲಿ ಯಾವದೋಷವನ್ನೂ ಅಪರಾಧವನ್ನೂ ಕಂಡಿದ್ದಾನೆ ? ತೋರಿಸಿಕೊ ಡಲಿ, ಇಲ್ಲದಿದ್ದರೆ ಅವನ ಮಾತನ್ನು ನಂಬುವದು ಹೇಗೆ ? ಲೋಕದಲ್ಲಿ ಬುದ್ದಿ ಶೂನ್ಯ ರಾದ ವೃದ್ದರೂ ಸ್ವೀಪರವಶರೂ ಎಷ್ಟು ವಿಧವಾದ ಅನಾಹುತಗಳನ್ನು ಮಾಡಿ ಆರು ? ಇಂಥವರು ಪರಾಧೀನದಲ್ಲಿರುವುದಕ್ಕೆ ಅರ್ಹರೇ ಹೊರತು ಸ್ವಾತಂತ್ರ್ಯಕ್ಕೆ ಯೋಗ್ಯರಲ್ಲ ವು. ಅದು ಕಾರಣ ಬುದ್ದಿ ಶೂನ್ಯನಾದ ದಶರಥನು ಇನ್ನೂ ವಿಪರೀತವಾಗಿ ಹರಟುವುದಾದರೆ ಅವನನ್ನು ಸಂಹರಿಸದೆ ಬಿಡುವುದಿಲ್ಲ ವು. ನನ್ನೊಡನೆ ಕೂಡಿ ರಾಜ್ಯ ಭಾರವನ್ನು ಮಾಡುವಂಥ ಈ ರಾಮನಿಗೆ ಅಪ್ರಿಯವನ್ನು ಆಚರಿಸುವುದಕ್ಕೆ ಸಮರ್ಥನು ಯಾವನು ? ಒಂದು ವೇಳೆ ಕೈಕೇಯಿಯ ದುರ್ಬೋಧನೆಗೆ ಒಳಗಾಗಿ ಭರತನೇನಾದರೂ ನನಗೆ ಅಹಿತವನ್ನು ಮಾಡಿದರೆ ನಿಮಿಷಮಾತ್ರದಲ್ಲಿ ಅವನನ್ನೂ ಕೊಂದು ಬಿಡುವೆನು. ಗರ್ವದಿಂದ ಕಾರ್ಯಾ ಕಾರ್ಯವಿವೇಕಹೀನನಾಗಿ ದುರ್ಮಾರ್ಗಪ್ರವರ್ತಕನಾದ ಗುರು ವನ್ನಾದರೂ ಶಿಕ್ಷಿಸಬೇಕೆಂದು ಶಾಸ್ತ್ರವಚನವಿರುವುದು. ಲೋಕದಲ್ಲಿ ಯಾವ ಮನು ಹೈನು ಮೃದುಭಾವಿಯಾಗಿರುವನೋ ಅವನು ಜನರಿಂದ ಹೆಚ್ಚಾಗಿ ಬಾಧಿಸಲ್ಪಡುವ ನೆಂದಿರುವಲ್ಲಿ ಇಂಥವನು ಮೂಢಾತ್ಮರಾದವರಲ್ಲಿದ್ದರೆ ಹೇಳತಕ್ಕುದೇನು ? ಎಂದು ಕೋಪೋದ್ರೇಕದಿಂದ ಕಠಿಣವಾಗಿ ಮಾತಾಡುತ್ತಿರುವ ಲಕ್ಷ್ಮಣನನ್ನು ನೋಡಿ ರಾಮನು - ಎಲೈ ತಮ್ಮನೇ ! ಅವಿಚಾರದಿಂದ ನೀನು ಇಂಥ ಮಾತುಗಳನ್ನು ಆಡಬ ಹುದೇ ? ಒಳ್ಳೆಯದು, ನೀನು ಹೀಗೆ ಆಡಿದುದು ನಿನ್ನ ಸ್ವಭಾವದಿಂದಲ್ಲ. ನಿನಗಿರುವ