ಪುಟ:ಕಥಾಸಂಗ್ರಹ ಸಂಪುಟ ೨.djvu/೫೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ 47 47. ನನ್ನ ಮೇಲಣ ವ್ಯಾಮೋಹವೆಂಬ ಹುಚ್ಚಿನಿಂದ ಕೂಡಿ ಆಡಿದವನಾಗಿದ್ದೀಯೆ. ಆದರೂ ನೀನಾಡಿದ ಮಾತು ಯುಕ್ತವಾದುದೇ ಸರಿ, ನಿನ್ನೊಡನೆಯ ನನ್ನೊ ಡನೆಯ ಹಗೆ ತನವನ್ನು ಸಂಪಾದಿಸಿಕೊಂಡು ಭರತನಿಗೆ ರಾಜ್ಯವನ್ನು ಕೊಡುವವರು ಯಾರುಂಟು ? ಆದರೆ ನಾನು ನನ್ನ ತಮ್ಮನಾದ ಭರತನಲ್ಲಿ ಬಹು ಪ್ರೀತಿಯುಳ್ಳವನಾಗಿದ್ದೇನೆ. ಆದು ದರಿಂದ ಭರತನು ಕೋಸಲರಾಜ್ಯವನ್ನಾಳುವುದು ನನಗೆ ಬಹುಸಂತೋಷಕರವಾದುದೇ. ಯಾಕಂದರೆ ಆತನು ಬೇರೆಯಲ್ಲ, ನಾವು ಬೇರೆ ಅಲ್ಲ. ನಮ್ಮೆಲ್ಲರ ದೇಹಗಳು. ಯಾರಿಂದುಂಟಾದುವು ? ತಂದೆಯಾದ ದಶರಥರಾಜನಿಂದಲ್ಲವೇ ? ಆತನು ತನ್ನ ಸೊತ್ತು ಗಳಾದ ಈ ನಮ್ಮ ದೇಹಗಳನ್ನು ಏನು ಮಾಡಿದರೂ ಮಾಡಬಹುದು. ಆ ಭಾಗದಲ್ಲಿ ಸ್ವಲ್ಪವಾದರೂ ಅಡ್ಡಿ ಮಾಡುವವರು ಯಾರುಂಟು ? ಲೋಕದಲ್ಲಿ ಸರ್ವರಿಗೂ ತಂದೆಯೇ ಪರದೇವತೆಯು. ಆದುದರಿಂದ ಆತನ ವಿಷಯದಲ್ಲಿ ನೀನು ಇಂಥ ಮಾತುಗಳನ್ನಾಡು ವುದು ಪಾಪಕರವೆಂದು ಹೇಳಿ ಲಕ್ಷ್ಮಣನನ್ನು ಸಮಾಧಾನಪಡಿಸುತ್ತಿರಲು ಆಗ ಕೌಸ ಲ್ಯಾದೇವಿಯು-ಎಲೈ ನನ್ನ ಮುದ್ದು ಮಗನಾದ ರಾಮನೇ ! ನಿನ್ನನ್ನು ಅಗಲಿದ ಮೇಲೆ ಸುಖದಿಂದಲೂ ಪ್ರಾಣಗಳಿಂದಲೂ ನನಗೆ ಪ್ರಯೋಜನವಿಲ್ಲ ವು. ಅದು ಕಾರಣ ನಾನು ನಿನ್ನೊಡನೆ ಇದ್ದುಕೊಂಡು ಗಡ್ಡೆಗೆಣಸುಗಳನ್ನು ತಿನ್ನುತ್ತ ಹುಲ್ಲಿನ ಹಾಸಿಗೆಯ ಮೇಲೆ ಮಲಗುತ್ತ ಕಾಲಕಳೆಯುವುದೇ ನನಗೆ ಪರಮ ಸುಖದಾಯಕವಾಗಿರುವುದು. ಅದು ಕಾರಣ ನಾನು ಕಷ್ಟಕ್ಕೂ ದುಃಖಕ್ಕೂ ಒಳಗಾಗದೆ ಸುಖದಿಂದಿರಲೆಂಬ ಕೃಪೆಯಿ೦ ದಲಾದರೂ ನನ್ನನ್ನೂ ವನಕ್ಕೆ ಕರೆದುಕೊಂಡು ಹೋಗು. ಹಾಗೆ ಮಾಡದಿದ್ದರೆ ನಿನ್ನ ತಂದೆಯಾದ ದಶರಥನು ತನ್ನ ಮೋಹದ ಪತ್ನಿ ಯಾದ ಕೈಕೇಯಿಯ ಮಗನಿಗೆ ರಾಜ್ಯ ವನ್ನು ಸಂತೋಷದಿಂದ ಕೊಟ್ಟು ಕೊಳ್ಳಲಿ. ನೀನು ವನಕ್ಕೆ ಹೋಗದೆ ಇಲ್ಲಿಯೇ ಇದ್ದು ಕೊಂಡು ಶೋಕಸಂತಪ್ತಳಾದ ನನ್ನನ್ನು ಉಪಚರಿಸುವವನಾಗು. ನೀನು ಈ ಕೆಲಸವ ನ್ನಾದರೂ ಮಾಡದೆ ನನ್ನ ಸವತಿಯ ಸಹಿಸಲಶಕ್ಯವಾದ ಕ್ರೂರವಚನಗಳನ್ನು ಕೇಳುವ ವಳಾಗಿ ದಾರುಣವಾದ ವ್ಯಥೆಯಿ೦ದ ಬಾಧಿಸಲ್ಪಡುತ್ತಿರುವ ನನ್ನನ್ನು ಇಲ್ಲಿ ಬಿಟ್ಟು ಹೋ ಗುವುದು ನಿನಗೆ ನಿಜವಾಗಿಯೂ ಧರ್ಮವಲ್ಲ ವು. ಲೋಕದಲ್ಲಿ ಪುತ್ರರಾದವರಿಗೆ ತಂದೆ ತಾಯಿಗಳಿಬ್ಬರೂ ಸಮಾನರಲ್ಲ ವೇ ? ಹೌದು ಹೀಗಿರುವಲ್ಲಿ ನೀನು ತಂದೆಯ ಮಾತನ್ನು ಮಾತ್ರ ಕೇಳಿ ತಾಯಿಯ ಮಾತನ್ನು ಅತಿಕ್ರಮಿಸುವುದು ಯುಕ್ತವಲ್ಲ ಇದರ ಮೇಲೂ ನೀನು ನನ್ನ ಮಾತನ್ನು ಮೀರಿ ನನ್ನನ್ನು ಇಲ್ಲೇ ಬಿಟ್ಟು ವನಕ್ಕೆ ಹೋದರೆ ನಾನು ಪ್ರಾಣ ಗಳನ್ನು ಬಿಡುವುದೇ ನಿಜವು ಎಂದು ಮೊರೆಯಿಟ್ಟು ದುಃಖಿಸುತ್ತಿರುವ ತಾಯಿಯನ್ನು ನೋಡಿ ರಾಮನು- ಎಲೈ ಪೂಜ್ಯಳಾದ ತಾಯಿಯೇ ! ತಂದೆಯ ಮಾತನ್ನು ಮಾರಿ ನಡೆಯುವುದಕ್ಕೆ ನನಗೆ ಎಷ್ಟು ಮಾತ್ರವೂ ಶಕ್ತಿ ಸಾಲದು. ನಾನು ಭಯಭಕ್ತಿಯಿಂದ ನಮಸ್ಕರಿಸಿ ನಿನ್ನನ್ನು ಬೇಡಿಕೊಳ್ಳುವೆನು. ನಾನು ವನಕ್ಕೆ ಹೋಗುವುದಕ್ಕಾಗಿ ಅಪೇಕ್ಷಿ ಸುತ್ತೇನೆ. ನಿನ್ನನ್ನು ದುಃಖಪಡಿಸುವುದರಿಂದ ಪಾಪಿಯಾದ ನನ್ನಲ್ಲಿ ದಯೆಯಿಟ್ಟು ಅಪ್ಪ ಣೆಯನ್ನು ದಯಪಾಲಿಸು. ಪೂರ್ವದಲ್ಲಿ ನಮ್ಮ ವಂಶೀಯನಾದ ಸಗರಚಕ್ರವರ್ತಿಯ ಮಕ್ಕಳಾದ ಅರವತ್ತು ಸಾವಿರ ಜನರು ತಂದೆಯ ಆಜ್ಞೆಯಿಂದ ಭೂಮಿಯನ್ನು ಅಗೆದು.