ಪುಟ:ಕಥಾಸಂಗ್ರಹ ಸಂಪುಟ ೨.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ಕಥಾಸಂಗ್ರಹ-೪ ನೆಯ ಭಾಗ ಮೃತರಾಗಲಿಲ್ಲ ವೇ ? ಮತ್ತು ಪರಶುರಾಮನು ತಂದೆಯಾದ ಜಮದಗ್ನಿಯ ಅಪ್ಪಣೆ ಯಿಂದ ತನ್ನ ತಾಯಿಯಾದ ರೇಣುಕೆಯನ್ನು ಕೊಡಲಿಯಿಂದ ಕಡಿಯಲಿಲ್ಲವೇ ? ಇ೦ ಥವರೆಲ್ಲಾ ತಮ್ಮ ತಮ್ಮ ಪಿತೃಗಳ ಆಜ್ಞೆಯನ್ನು ದಯಪಾಲಿಸುವುದಕ್ಕಾಗಿ ಎಷ್ಟೋ ಅಸಾಧ್ಯ ಕಾರ್ಯಗಳನ್ನು ಮಾಡಿದ್ದಾರೆಂಬುದನ್ನು ನೀನೇ ತಿಳಿದಿರುವೆಯಲ್ಲವೇ? ನಾನು ಮಾತ್ರ ನನ್ನ ತಂದೆಯ ಸಾಮಾನ್ಯವಾದ ಇಂಥ ಆಜ್ಞೆಯನ್ನು ನೆರವೇರಿಸುವುದು ಯುಕ್ತವಲ್ಲವೆಂದು ಹೇಳುವುದು ಯಾವ ಧರ್ಮವು ? ಪಿತೃಗಳ ಆಜ್ಞೆಯನ್ನು ಪರಿಪಾ ಲಿಸುವುದು ಪುತ್ರರಿಗೆ ಶ್ರೇಯಸ್ಕರವೆಂದು ಧರ್ಮಶಾಸ್ತ್ರವಚನವಿರುವುದು. ಅದು ಕಾರಣ ನಾನು ಈ ಕಾರ್ಯವನ್ನು ನೆರವೇರಿಸುವುದು ನಮ್ಮ ವಂಶಕ್ಕೆ ಭೂಷಣಪ್ರಾಯವಾಗಿ ರುವುದು. ಹೀಗಿರುವಲ್ಲಿ ತಂದೆಯು ಕ್ಷೇಮವಂತನಾಗಿ ಮಹೋನ್ನತ ಪದವಿಯಲ್ಲಿರು ವಾಗ ನಾನು ನಿನ್ನನ್ನು ವನಕ್ಕೆ ಕರೆದುಕೊಂಡು ಹೋಗುವುದೂ ನೀನು ನನ್ನ ಜತೆಯಲ್ಲಿ ಬರುವುದೂ ಕೂಡ ಬಹಳ ಅಯುಕ್ತವು. ಲೋಕದಲ್ಲಿ ಸ್ತ್ರೀಯರಿಗೆ ಪತಿಗಿಂತ ಪ್ರಿಯ ರಾದವರು ಯಾರೂ ಇಲ್ಲವು. ಮತ್ತು ಮಾನಿನಿಯರಿಗೆ ತಾಯಿ ತಂದೆ ಅಣ್ಣ ತಮ್ಮ ನೆಂಟರು ಇಷ್ಟರು ಮುಂತಾದವರೆಲ್ಲರಿಗಿಂತಲೂ ಪತಿಯೇ ಪರಮ ಪ್ರಿಯನೂ ಸೇವನೂ ಆಗಿದ್ದಾನೆ. ಇದೂ ಅಲ್ಲ ಈಗ ನನ್ನ ತಂದೆಯು ಕೈಕೇಯಿಯ ಮಾತುಗಳೆಂಬ ಸಂ ಕೋಲೆಯಲ್ಲಿ ಸಿಕ್ಕಿಬಿದ್ದವನಾಗಿ ಸತ್ಯವನ್ನು ಮಾರುವುದಕ್ಕೂ ನನ್ನನ್ನು ವನಕ್ಕೆ ಕಳುಹಿ ಸಿಬಿಡುವುದಕ್ಕೂ ಅಶಕ್ತನಾದುದರಿಂದ ಇತಿಕರ್ತವ್ಯ ತಾ ಮೂಢನಾಗಿ ಶೋಕಸಾಗರ ದಲ್ಲಿ ಮುಳುಗಿ ದಡವನ್ನು ಕಾಣದೆ ಪ್ರಾಣಗಳನ್ನೇ ಬಿಡುವುದಕ್ಕೆ ಯೋಗ್ಯವಾದ ದುರ ವಸ್ಥೆಯಲ್ಲಿದ್ದಾನೆ. ನಿನ್ನ ಪತಿಗೆ ಒದಗಿರುವ ಇಂಥ ವಿಪತ್ಕಾಲದಲ್ಲಿ ಹಿರಿಯ ಹೆಂಡತಿಯಾ ಗಿಯ ಹಿತಚಿಂತಕಳಾಗಿಯ ಸಕಲ ಧರ್ಮಗಳನ್ನೂ ತಿಳಿದವಳಾಗಿಯೂ ಇರುವ ನೀನು ಪುಣ್ಯಪ್ರದವಾದ ಪತಿಯ ಶುಶೂಷೆಯನ್ನು ಇಂಥ ಕಾಲದಲ್ಲಿ ಬಿಟ್ಟು ಅವಿಚಾರ ದಿಂದ ನನ್ನೊಡನೆ ಬಂದರೆ ಈ ಲೋಕದಲ್ಲಿ ಅಪಕೀರ್ತಿಯ ಪರಲೋಕದಲ್ಲಿ ಸದ್ದತಿಹಾ ನಿಯ ನಮ್ಮಿಬ್ಬರಿಗೂ ಸಂಭವಿಸುವುವೆಂಬುದನ್ನು ಪುತ್ರನಾದ ನಾನು ನಿನಗೆ ಹೇಳಬೇ ಕಾದುದಿಲ್ಲವಷ್ಟೆ ? ಅದು ಕಾರಣ ನನ್ನ ಅರಣ್ಯಪ್ರಯಾಣಕ್ಕಾಗಿ ಅಪ್ಪಣೆಯನ್ನು ಕೊಡು ವವಳಾಗು. ಇನ್ನು ಮೇಲೆ ನಾನು ಹೊರಡುವೆನು. ನನ್ನ ಪ್ರಾಣಸಾಕ್ಷಿಯಾಗಿ ನನ್ನ ಪ್ರಯಾಣಕ್ಕೆ ವಿಘ್ನು ಕರವಾದ ಮಾತುಗಳನ್ನಾಡಬೇಡ, ನಾನು ಹದಿನಾಲ್ಕು ಸಂವತ್ಸರ ಗಳವರೆಗೂ ವನದಲ್ಲಿದ್ದು ನನ್ನ ತಂದೆಯ ಆಜ್ಞೆಯನ್ನು ನೆರೆವೇರಿಸಿ ಆ ಮೇಲೆ ಬಂದು ನಿನ್ನ ಸನ್ನಿಧಾನವನ್ನು ಸೇರುವೆನು. ನಿನಗೂ ನನಗೂ ಸೀತೆಗೂ ಲಕ್ಷ್ಮಣನಿಗೂ ಸುಮಿ ತೆಗೂ ವೃದ್ಧನಾದ ದಶರಥನಪ್ಪಣೆಯ ಮೇರೆಗೆ ನಡೆಯತಕ್ಕುದೇ ಮುಖ್ಯವಾದ ಧರ್ಮವಾಗಿರುವುದು. ಆದುದರಿಂದ ವಿಚಾರಪರಳಾದ ನೀನು ಶೋಕವನ್ನು ಸಹಿಸಿ ಕೊಂಡು ಆಶೀರ್ವಾದವನ್ನು ಮಾಡಿ ಅಪ್ಪಣೆ ಕೊಟ್ಟು ನನ್ನನ್ನು ವನಕ್ಕೆ ಕಳುಹಿಸಿಕೊಡು ಎಂದು ಬೇಡಿಕೊಂಡನು. ಆಗ ಕೌಸಲ್ಯಯು ಆ ಮಾತುಗಳನ್ನು ಕೇಳಿ ತನಗೆ ಪ್ರಾಪ್ತವಾಗುವ ಪುತ್ರವಿ ಯೋಗ ದುಃಖವನ್ನು ಸಹಿಸಲಾರೆನೆಂಬ ಮಹಾವ್ಯಥೆಯಿಂದ ಬಾಧಿತಳಾಗಿ ಭೂಮಿ