ಪುಟ:ಕಥಾಸಂಗ್ರಹ ಸಂಪುಟ ೨.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ 49 ಯಲ್ಲಿ ಬಿದ್ದು ಮೂರ್ಛಿತಳಾದಳು. ಆಗ ಲಕ್ಷಣನೂ ರಾಮನ ಕಾಲುಗಳ ಮೇಲೆ ಬಿದ್ದು ಮರ್ಛಹೊಂದಿದನು. ಕೂಡಲೇ ಸುಮಿತ್ರೆಯೇ ಮೊದಲಾದ ದಶರಥನ ಅಂತಃಪುರದ ಸ್ತ್ರೀಯರೆಲ್ಲರೂ ಗುಂಪಾಗಿ ಬಂದುಹಾ ರಾಮಾ ! ರಾಮಾ ಎಂದು ಮೊರೆಯಿಟ್ಟು ದೀನಧ್ವನಿಯನ್ನು ಮಾಡುತ್ತ ನಮ್ಮೆಲ್ಲರಿಗೂ ಪ್ರಾಣಭೂತನಾಗಿದ್ದ ನೀನು ನಮ್ಮೆಲ್ಲರನ್ನೂ ಬಿಟ್ಟು ವನಕ್ಕೆ ಹೋಗುವೆಯಾ ? ನಿನ್ನ ತಾಯಿಯಾದ ಕೌಸಲ್ಯ ಯಲ್ಲಿಟ್ಟಿರುವಂತೆ ನಮ್ಮೆಲ್ಲರಲ್ಲೂ ಮಾತೃಭಕ್ತಿಯನ್ನಿಟ್ಟು ನಡೆದುಕೊಳ್ಳುತ್ತಿದ್ದೆಯಲ್ಲಾ! ನೀನು ಒಂದು ದಿನವಾದರೂ ನಮ್ಮಲ್ಲಿ ಅಪ್ರಿಯವನ್ನು ಮಾಡಿದವನಲ್ಲವಲ್ಲಾ! ಎಂದಾ ದರೂ ನೀನಾಡಿದ ಕರವಚನವನ್ನು ನಮ್ಮ ಕಿವಿಗಳಿ೦ದ ಕೇಳಿದುದಿಲ್ಲವಲ್ಲಾ ! ಏನಾ ದರೂ ಒಂದು ಕಾರಣದಿಂದ ನಾವು ಚಿಂತೆಪಡುತ್ತಿದ್ದರೆ ಶೀಘ್ರವಾಗಿ ನಮ್ಮ ಸಮಾ ಪಕ್ಕೆ ಬಂದು ನಿನ್ನ ಮೃದುವಚನಗಳಿಂದ ನಮ್ಮನ್ನು ಸಮಾಧಾನಮಾಡುತ್ತಿದ್ದೆಯಲ್ಲಾ! ಇಂಥ ವಿನೀತನಾದ ನೀನು ನಮ್ಮೆಲ್ಲರನ್ನೂ ಬಿಟ್ಟು ಕಾಡಿಗೆ ಹೋದರೆ ನಮಗೇನು ಗತಿ ? ವೃದ್ದರಿಗೆ ಬುದ್ಧಿ ಮಾಂದ್ಯವೆಂಬ ಲೋಕದ ಗಾದೆಗನುಸಾರವಾಗಿ ಮುದುಕನಾದ ಈ 'ದಶರಥನು "ವಿವೇಕವಿಲ್ಲದೆ ಸರ್ವಲೋಕಪ್ರಿಯನಾದ ನಿನ್ನನ್ನು ಅನ್ಯಾಯವಾಗಿ ವನಕ್ಕೆ ಕಳುಹಿಸುವನು ಎಂದು ರೋದನಧ್ವನಿಗಳನ್ನು ಮಾಡುತ್ತಾ ಅನಾಥೆಯರಂತೆ ರಾಮನ ಮುಂದೆ ಬಿದ್ದು ಮರ್ಧೆ ಹೊಂದಲು ಆಗ ರಾಮನು ಅವರನ್ನು ನೋಡಿ ಮಹಾದುಃಖದಿಂದ ಕೂಡಿದವನಾದಾಗ ಧೈರ್ಯಯುಕ್ತನಾಗಿ ತನ್ನ ದುಃಖವನ್ನು ಹೊರಗೆ ತೋರ್ಪಡಿಸದೆ ಹೃದಯದಲ್ಲಿ ಅಡಗಿಸಿಕೊಂಡು ತಾನು ಮಾಡಿದ ಶೈತ್ಯೋಪ ಚಾರದಿಂದ ಎಲ್ಲರನ್ನೂ ಚೇತರಿಸಿಕೊಳ್ಳುವಂತೆ ಮಾಡಿ ಎಲ್ಲರಿಗೂ ಕೈಮುಗಿದು ನಿಂ ತುಕೊ೦ಡು-ನೀವು ನನ್ನ ಮುಂದೆ ಪೂಜ್ಯನಾದ ನನ್ನ ತಂದೆಯನ್ನು ನಿಂದಿಸುವುದ ರಿಂದ ನನಗೂ ಮಹಾದುಃಖವುಂಟಾಗುವುದು. ಗುರುವೂ ತಂದೆಯ ಒಡೆಯನೂ ಮುದುಕನೂ ಆಗಿರುವ ದಶರಥರಾಜನು ಕೋಪದಿಂದಾದರೂ ಸಂತೋಷದಿಂದಲೇ ಆದರೂ ಅಧವಾ ಕಾಮದಿಂದಲೇ ಆದರೂ ಎಂಥ. ಕೆಟ್ಟ ಕೆಲಸವನ್ನು ಆಜ್ಞಾಪಿಸಿ ದಾಗ ನಾವೆಲ್ಲರೂ ಒಳ್ಳೆಯದು ಕೆಟ್ಟುದೆಂದು ಬದಲಾಡದೆ ಅದನ್ನು ಅವಶ್ಯಕವಾಗಿ ಮಾಡಲೇಬೇಕು. ನಮಗೆ ಇದಕ್ಕಿಂತಲೂ ಹೆಚ್ಚಾದಧರ್ಮಕಾರ್ಯವು ಬೇರೆ ಯಾವುದೂ ಇಲ್ಲ ವು. ಅದು ಕಾರಣ ನೀವೆಲ್ಲರೂ ನನ್ನಲ್ಲಿ ದಯೆಯಿಟ್ಟು ಆಶಿರ್ವದಿಸಿ ನನ್ನ ಅರಣ್ಯಗ. ಮನಕ್ಕೆ ಅನುಮತಿಸುವವರಾಗಬೇಕು. ನಾನು ಬಲುಬೇಗ ಬಂದು ನಿಮ್ಮ ಬಳಿಯನ್ನು ಸೇರುವೆನು. ಹದಿನಾಲ್ಕು ವರುಷಗಳು ಹದಿನಾಲ್ಕು ದಿನಗಳಂತೆ ಸುಲಭವಾಗಿ ಕಳೆದು ಹೋಗುವುವು. ನೀವೆಲ್ಲರೂ ನನ್ನ ವಿಯೋಗ ಪ್ರಾಪ್ತಿಗಾಗಿ ದುರಂತ ದುಃಖಸಮುದ್ರ ದಲ್ಲಿ ಬಿದ್ದಿರುವ ದಶರಥರಾಜನ ಕಿವಿಗಳಿಗೆ ಕ್ರೂರವಾದ ಮಾತುಗಳನ್ನಾಡದೆ ವಿಹಿತ ವಾದ ಮಾತುಗಳನ್ನೇ ಆಡುತ್ತ ಆತನಿಗೆ ಸಂತೋಷವಾಗುವಂತೆ ಶುಕ್ರೂಷೆಯನ್ನು ಮಾಡಿಕೊಂಡಿರಬೇಕೆಂದು ಬೇಡಿಕೊಳ್ಳುತ್ತೇನೆ. ಪಾಪಿಯಾದ ನನ್ನಲ್ಲಿ ಕೃಪೆಯಿಟ್ಟು ದುಃಖವನ್ನು ಸಹಿಸಿಕೊಳ್ಳಿರೆಂದು ಹೇಳಿಕೊಳ್ಳುತ್ತಿರುವ ರಾಮನ ಮೃದುವಚನಗಳನ್ನು ಕೇಳಿ ಎಲ್ಲರಿಗೂ ಮತ್ತೂ ಮಹಾ ದುಃಖವುಂಟಾಗಿ ಕೈಕೇಯಿಯನ್ನು ಬೈಯ್ದು ಶಪಿ ಸುತ್ತಿದ್ದರು. 4