ಪುಟ:ಕಥಾಸಂಗ್ರಹ ಸಂಪುಟ ೨.djvu/೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


52 ಕಥಾಸಂಗ್ರಹ-೪ ನೆಯ ಭಾಗ ದಿಂದಲೂ ಯಾವ ಧರ್ಮವನ್ನು ಕಾಪಾಡುವೆಯೋ ಆ ಧರ್ಮವು ವನದಲ್ಲಿ ನಿನ್ನನ್ನು ಸುಖವಾಗಿ ರಕ್ಷಿಸಲಿ, ನೀನು ಪ್ರತಿನಿತ್ಯವೂ ಚೈತ್ಯದಲ್ಲಿಯೂ ದೇವಾಲಯಗಳಲ್ಲಿಯೂ ಮಹಾತ್ಮರಾದ ಯಾವ ದೇವತೆಗಳಿಗೆ ಭಕ್ತಿಯಿಂದ ನಮಸ್ಕರಿಸುತ್ತಿದ್ದೆಯೋ ಅವರೆಲ್ಲ ರೂ ನಿನ್ನನ್ನು ಕಾಡಿನಲ್ಲಿ ಕಾಪಾಡಲಿ. ಮತ್ತು ನೀನು ಮಹನೀಯರಾದ ಯಾವ ಯಾವ ಋಷಿಗಳನ್ನು ಪೂಜಿಸಿರುವೆಯೋ ಅವರೆಲ್ಲರ ಆಶೀರ್ವಾದವು ಅಡವಿಯಲ್ಲಿ ನಿನ್ನನ್ನು ಕಾಯಲಿ. ಪಾರ್ವತೀ ಸಮೇತನಾದ ಪರಮೇಶ್ವರನೂ ಷಣ್ಮುಖನೂ ಬೃಹ ಸ್ಪತಿಯ ಚಂದ್ರನೂ ಶುಕ್ರನೂ ಇಂದ್ರಾದಿ ಸಕಲ ದೇವತೆಗಳೂ ಆದಿಶೇಷನೇ ಮೊದ ಲಾದ ಉರಗೇಂದ್ರರೂ ಬ್ರಹ್ಮನೂ ವಿಷ್ಣವೂ ಇವರೆಲ್ಲರೂ ಮಹಾರಣ್ಯದಲ್ಲಿ ನಿನ್ನನ್ನು ರಕ್ಷಿಸಲಿ. ವೃತ್ರಾಸುರಸಂಹಾರೋದ್ಯುಕ್ತನಾದಂಥ ತನ್ನ ಮಗನಾದ ಇಂದ್ರನಿಗೆ ಅದಿ ತಿಯು ಸಫಲವಾದ ಯಾವ ಮ೦ಗಳವನ್ನು ಮಾಡಿದಳೋ ಆ ಮಂಗಳವು ಅರಣ್ಯದಲ್ಲಿ ನಿನಗೆ ಕ್ಷೇಮ ದಾಯಕವಾಗಲಿ, ಅಮೃತವನ್ನು ತರುವುದಕ್ಕಾಗಿ ಸನ್ನದ ನಾದ ಗರು ಡನೆಂಬ ತನ್ನ ಮಗನಿಗೆ ವಿನತೆಯು ಯಾವ ಮಹಾ ಮಂಗಳವನ್ನು ಮಾಡಿದಳೋ ಆ ಮ೦ಗಳವು ಅರಣ್ಯದಲ್ಲಿ ನಿನಗೆ ಕಾರ್ಯ ಜಯವನ್ನುಂಟುಮಾಡಲಿ ಎಂದು ರಾಮನಿಗೆ ಮಂಗಳಾಶಾಸನವನ್ನು ಮಾಡಿ ಅವನನ್ನು ಆಲಿಂಗಿಸಿಕೊಂಡು ನೀನು ಅರಣ್ಯದಲ್ಲಿ ಅರೋ ಗದೃಢಕಾಯನಾಗಿದ್ದು ಶೀಘ್ರವಾಗಿ ಇಲ್ಲಿಗೆ ಬರುವವನಾಗು. ಸೂರ್ಯವಂಶೀಯ ಮಹಾರಾಜ ಪರಂಪರಾಕ್ರಮಾರೋಹಿತವಾದ ಅಯೋಧ್ಯಾ ಸಿಂಹಾಸನದಲ್ಲಿ ಕುಳಿತು ಸೀತಾಸಮೇತನಾಗಿ ಪಟ್ಟಾಭಿಷಿಕ್ತನಾದಂಥ ನಿನ್ನನ್ನು ಪರಮಾನಂದದಿಂದ ನೋಡು ವೆನು, ಈಗ ಸಂತೋಷದಿಂದ ಹೋಗಿ ಬರುವವನಾಗು ಎಂದು ಅಪ್ಪಣೆಯನ್ನು ಕೊಟ್ಟಳು. ಆಗ ರಾಮನು ಕಣ್ಣೀರುಗಳನ್ನು ಸುರಿಸುತ್ತ ತಾಯಿಗೆ ಪ್ರದಕ್ಷಿಣ ನಮಸ್ಕಾ ರಗಳನ್ನು ಮಾಡಿ ಹಿಂದೆ ಬರುತ್ತಿರುವ ಲಕ್ಷ್ಮಣನೊಡನೆ ಅಲ್ಲಿಂದ ಹೊರಟು ತನ್ನ ಮನೆಗೆ ಬಂದು ಈ ವರ್ತಮಾನಗಳೊಂದನ್ನೂ ತಿಳಿಯದೆ ನಿಜಪತಿಗೆ ಪಟ್ಟಾಭಿಷೇಕ ವಾಗುವುದೆಂಬ ಸಂತೋಷಾತಿಶಯದಿಂದ ದೇವತಾ ಪೂಜೆಗಳನ್ನು ಮಾಡುತ್ತ ಮುತ್ತೆ ದೆಯರಿಗೆ ಬಾಗಿನಗಳನ್ನು ಕೊಡುತ್ತಾ ವೃದ್ದ ದಂಪತಿಗಳನ್ನು ಪೂಜಿಸುತ್ತ ಬಡವರಿಗೆ ಬೇಕಾದ ವಸ್ತುಗಳನ್ನು ಉಚಿತವಾಗಿ ಕೊಡುತ್ತ ಕುರುಡ ಕುಂಟ ಗೂನ ಮೊದಲಾದ ಅ೦ಗಹೀನರಿಗೆ ದಾನಗಳನ್ನು ಮಾಡುತ್ತ ಅತುಲಾ ಸದಿಂದ ಕೂಡಿರುವ ಸೀತೆಯ ಮುಂದೆ ಬಹು ಲಜ್ಞಾ ವ್ಯಥೆಗಳಿ೦ದ ತಲೆಯನ್ನು ಬೊಗ್ಗಿಸಿಕೊಂಡು ಶೋಕವನ್ನು ಸಹಿ ಸಲಾರದೆ ದುಃಖಕ್ಕೆ ವಶನಾಗಿ ಕಣ್ಣೀರುಗಳನ್ನು ಸುರಿಸುತ್ತ ಜಡೀಭೂತನಾಗಿ ನಿಂತಿ ರು ಆಗ ಸೀತೆಯು ಅಪಾರ ವ್ಯಸನಾಕ್ರಾಂತನಾಗಿರುವ ನಿಜಕಾಂತನಾದ ರಾಮ ನನ್ನು ನಿರೀಕ್ಷಿಸಿ ಅವನನ್ನು ಕುರಿತು-ಇದೇನ್ಯ ಜೀವಿತೇಶನೇ ! ಇಂಥ ಸಂತೋಷ ದಾಯಕವಾದ ಪಟ್ಟಾಭಿಷೇಕ ಮಹೋತ್ಸವ ಕಾಲದಲ್ಲೂ ನೀನು ಈ ರೀತಿಯಾಗಿ ದುಃಖಿಸುತ್ತಿರುವುದಕ್ಕೆ ಕಾರಣವೇನು ? ಇದರಿಂದ ನನಗೆ ಆಶ್ಚರ್ಯವೂ ಭಯವೂ ಸಂದೇಹವೂ ಉಂಟಾಗಿರುವುವಲ್ಲಾ. ನನ್ನಲ್ಲಿ ಕೃಪೆಮಾಡಿ ಇದಕ್ಕೆ ಕಾರಣವನ್ನು ಬೇಗ