ಪುಟ:ಕಥಾಸಂಗ್ರಹ ಸಂಪುಟ ೨.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

56. ಕಥಾಸಂಗ್ರಹ-೪ ನೆಯ ಭಾಗ ಸುಮಂತ್ರನನ್ನು ಕುರಿತು ಎಲೈ ಸಾರಥಿಯೇ ! ನಾನು ಬಂದಿರುವುದನ್ನು ಅರಸಿಗೆ ತಿಳಿಸೆನ್ನ ಲು ಸುಮಂತ್ರನು ಒಳಗೆ ಹೋಗಿ-ಹಾ ರಾಮಾ ! ಲೋಕಾಭಿರಾಮಾ ! ಎಂದು ಭೂಮಿಯಲ್ಲಿ ಬಿದ್ದು ಹೊರಳಾಡುತ್ತ ಅಪರಿಮಿತವಾಗಿ ಅಶ್ರುಧಾರೆಯನ್ನು ಹರಿಸುತ್ತ ಕೈಕೇಯಿಯನ್ನೂ ತನ್ನನ್ನೂ ಬಾರಿಬಾರಿಗೂ ನಿಂದಿಸಿಕೊಳ್ಳುವ ಗಳಿಗೆಗಳಿಗೆಗೆ ಮರ್ಿಹೊಂದಿ ಚೇತರಿಸಿಕೊಳ್ಳುತ್ತ ಏನು ಮಾಡಲಿ ? ಎಲ್ಲಿಗೆ ಹೋಗಲಿ ? ವಿಷವ ನ್ನಾದರೂ ಕುಡಿಯಲೇ ? ಪರ್ವತಾಗ್ರದಿಂದ ಕೆಳಗೆ ಬೀಳಲೇ ? ಕಾಯುಕ್ಕಿನ ಮುಳ್ಳ ಬಗಳನ್ನು ಹಾಯ್ದ ಡಗಲೇ ? ಅಯ್ಯೋ ! ನಯನಾಭಿರಾಮನಾದ ರಾಮನನ್ನು ಬಿಟ್ಟು ಬದುಕುವುದು ಹೇಗೆ ? ಎಂದು ಪ್ರಲಾಪಿಸುತ್ತ ಒಣಗಿದ ತುಟಿಬಾಯಳುಳ್ಳವನಾಗಿ ಗ್ರಹಗ್ರಸ್ತನಂತೆ ತಿರುತಿರುಗಿ ಭೂಮಿಯಲ್ಲಿ ಬಿದ್ದು ಹೊರಳಾಡುತ್ತ ಧೂಳಿಯಿಂದ ಲೇಪಿ ತವಾದ ಸರ್ವಾಂಗವುಳ್ಳವನಾಗಿ ನಿಟ್ಟುಸಿರುಗಳನ್ನು ಬಿಡುತ್ತಿರುವ ನಿಜಸ್ವಾಮಿಯಾದ ದಶರಥನನ್ನು ನೋಡಿ ಮಾತಾಡಿಸುವುದಕ್ಕೆ ಭಯಪಟ್ಟ ವನಾಗಿ ಮೆಲ್ಲ ಮೆಲ್ಲನೆ ಸವಿಾ ಪಕ್ಕೆ ಹೋಗಿ-ಎಲೈ ಮಹಾರಾಜನೇ ! ಶ್ರೀರಾಮನು ದೀನಾನಾಥವಿಪನ್ನರಿಗೆ ತನ್ನ ಸರ್ವಷಸ್ತುಗಳನ್ನೂ ದಾನಮಾಡಿ ಅರಣ್ಯಗಮನಕ್ಕೆ ಸಿದ್ಧನಾಗಿ ಹೊರಟು ನಿನ್ನ ದರ್ಶ ನಕ್ಕೊಸ್ಕರವಾಗಿ ಬಂದು ಬಾಗಿಲಲ್ಲಿ ಕಾದಿದ್ದಾನೆ. ಸರ್ವಗುಣಸಂಪನ್ನ ನೂ ಲೋಕ ಮಾನನೂ ನಿನ್ನ ಕುಮಾರನೂ ಆದ ರಾಮನನ್ನು ಒಳಗೆ ಕರಿಸಿ ಅಪ್ರಣೆಯನ್ನು ಕೊಟ್ಟು ಕಳುಹಿಸುವವನಾಗು ಎಂದು ಹೇಳಲು ಆಗ ದಶರಥನು-ಎಲೈ ಸಾರ ಥಿಯೇ? ನಾನು ನನ್ನ ಎಲ್ಲಾ ಪತ್ನಿ ಯರೊಡನೆ ಕೂಡಿ ವನಪ್ರಯಾಣಕ್ಕೆ ಸಿದ್ಧನಾಗಿ ರುವ ರಾಮನನ್ನು ನೋಡಲಪೇಕ್ಷಿಸುತ್ತೇನೆ ಎನ್ನಲು ಆಗ ಸುಮಂತ್ರನು ಶೀಘ್ರವಾಗಿ ಅಂತಃಪುರಕ್ಕೆ ಹೋಗಿ ದಶರಥನ ಅಪೇಕ್ಷೆಯನ್ನು ತಿಳಿಸಲು ಕೂಡಲೇ ಪಟ್ಟಮಹಿಷಿ ಯರಾದ ಕೌಸಲ್ಯಾ ಸುಮಿತ್ರೆಯರೂ ಮತ್ತು ದಶರಥನ ಮುನ್ನೂರೈವತ್ತು ಜನ ಪ್ರೇಮ ಪತ್ನಿಯರೂ ಬಂದು ಸೇರಲು ಆಗ ದಶರಥನು ಸುಮಂತ್ರನನ್ನು ಕಳುಹಿಸಿ ರಾಮನನ್ನು ಒಳಗೆ ಕರಿಸಿಕೊಂಡನು. ರಾಮನು ಬಂದ ಕೂಡಲೇ ಸೀತಾಲಕ್ಷ್ಮಣರೊಡನೆ ಕೂಡಿ ದೂರದಲ್ಲಿಯೇ ತಂದೆಗೆ ನಮಸ್ಕರಿಸಿ ಕೈ ಮುಗಿದು ನಿಂತುಕೊಂಡಿರಲು ದಶರಥನು ಪರಮಸಾತ್ವಿಕನಾದ ಮಗನನ್ನು ನೋಡಿ-ಹಾ ರಾಮ ! ಎಂದು ನೆಲದ ಮೇಲೆ ಬಿದ್ದು ಮೂರ್ಛಹೊಂದಿದನು. ಕೂಡಲೇ ಕೌಸಿಯ ಸುಮಿತ್ರೆಯ ಉಳಿದ ಗಾಂಧರ್ವವಿವಾಹಿತೆಯರಾದ ಪತ್ನಿಯರೂ ರೋದಿಸುತ್ತ ಬಿದ್ದು ಮೈಮರೆತರು. ಆಗ ರಾಮನು ಲಕ್ಷ್ಮಣಸಮೇತನಾಗಿ ಹೋಗಿ ದಶರಥರಾಜನಿಗೆ ಶೈತ್ರೋಪ ಚಾರಗಳನ್ನು ಮಾಡಿ ಆತನನ್ನು ಎತ್ತಿಕೊಂಡು ಮಂಚದ ಮೇಲೆ ಮಲಗಿಸಿ ಕೈಗಳನ್ನು ಮುಗಿದು ನಿಂತುಕೊಂಡು-ಎಲೈ ಮಹಾರಾಜನೇ ! ನೀನು ಸರ್ವರಿಗೂ ಒಡೆಯನು. ಆದುದರಿಂದ ಈಗ ನಾನು ನಿನ್ನ ಅಪ್ಪಣೆಯನ್ನು ಕೇಳಿಕೊಳ್ಳುತ್ತೇನೆ. ದಂಡಕಾರಣ್ಯ ವನ್ನು ಕುರಿತು ಹೊರಟಿರುವ ನನ್ನನ್ನು ಕೃಪಾದೃಷ್ಟಿಯಿಂದ ಈಕ್ಷಿಸು. ನಾನು ಎಷ್ಟು ವಿಧವಾಗಿ ತಿಳಿಯ ಹೇಳಿದಾಗೂ ಕೇಳದೆ ಸೀತೆಯ ಲಕ್ಷಣನೂ ನನ್ನೊಡನೆಯೇ ಬರುವುದಕ್ಕೆ ಸಿದ್ದರಾಗಿದ್ದಾರೆ. ಅವರಿಗೂ ಅಪ್ಪಣೆಯನ್ನು ದಯಪಾಲಿಸಬೇಕೆಂದು ಕ್ರಿ