ಪುಟ:ಕಥಾಸಂಗ್ರಹ ಸಂಪುಟ ೨.djvu/೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಥಾಸಂಗ್ರಹ-೪ ನೆಯ ಭಾಗ ಭನ್ನು ಉಡುವುದಕ್ಕೆ ಏನೂ ಕಾರಣವಿಲ್ಲವೆಂದು ಹೇಳಿ ಆಕೆಗೆ ಹದಿನಾಲ್ಕು ವರ್ಷಗಳ ವರೆಗೂ ಸಾಕಾಗುವಷ್ಟು ವಸ್ತ್ರಾಭರಣಗಳನ್ನು ಕೊಡಿಸಿದನು. ಆ ಬಳಿಕ ದಶರಥನು ಸುಮಂತ್ರನನ್ನು ನೋಡಿ-ಎಲೈ ಸಾರಥಿಯೇ! ನನ್ನ ರಥದಲ್ಲಿ ರಾಮನನ್ನು ಕುಳ್ಳಿರಿಸಿ ವನಕ್ಕೆ ಕರೆದು ಕೊಂಡು ಹೋಗಿ ಅಲ್ಲಿ ಬಿಟ್ಟು ಆತನು ಕಳುಹಿಸಿದರೆ ಹಿಂತಿರುಗಿ ಬರುವವನಾಗೆಂದು ಅಪ್ಪಣೆಯನ್ನೀಯಲು ಕೂಡಲೆ ಸುಮಂತ್ರನು ನಾಲ್ಕು ಉತ್ತಮಾಶ್ವಗಳಿಂದ ಕೂಡಿ ಶೋಭಾಯಮಾನವಾಗಿರುವ ದಿವ್ಯರಥವನ್ನು ತೆಗೆದು ಕೊಂಡು ಬಂದನು. ಆಗ ಸೀತೆಯು ಮೊದಲು ರಥವನ್ನು ಹತ್ತಿದಳು. ಆಮೇಲೆ ಲಕ್ಷ್ಮಣನೂ ಆ ಹಿಂದೆ ರಾಮನೂ ರಥಾರೋಹಣವನ್ನು ಮಾಡಿ ಹೊರಟರು. ಆಗ ದಶರಥನು ಅಂತಃಪುರ ಸೀಜನಸಮೇತನಾಗಿ ಹಿಂದೆಯೇ ಬಂದನು, ಮತ್ತು ಮಂತ್ರಿಗಳೂ ಸೇನಾಪತಿಗಳೂ ಪರಿವಾರಜನರೂ ಪಟ್ಟಣದ ಜನರೂ ಮುಂತಾದವರೆಲ್ಲಾ ರೋದಿಸುತ್ತ ಹಿಂದೆಯೇ ಬರುತ್ತಿದ್ದರು. ಆಗ ರಾಮನು ಆ ಜನರ ದುಃಖಾತಿಶಯವನ್ನು ನೋಡಿ ಸುಮ೦ತ್ರನಿಗೆ ಸಂಜ್ಞೆಯನ್ನು ಮಾಡಿ ತ್ವರಿತ ವಾಗಿ ರಥವನ್ನು ನಡೆಸುತ್ತ ಬಂದು ತಮಸಾ ನದಿಯನ್ನು ದಾಟಿ ಗಂಗಾ ತೀರದಲ್ಲಿ ವಾಸಮಾಡುತ್ತಿರುವ ಕಿರಾತನಾಯಕನೂ ತನ್ನ ಸ್ನೇಹಿತನೂ ಆದ ಗುಹನೆಂಬವನನ್ನು ಕಂಡು ಆತನು ಮಾಡಿದ ಆತಿಥ್ಯವನ್ನು ಸ್ವೀಕರಿಸಿ ಆತನಿಂದ ಆಲದ ಹಾಲನ್ನು ತರಿಸಿ ತಾನೂ ಲಕ್ಷಣನೂ ಜಡೆಯನ್ನು ಧರಿಸಿಕೊಂಡು ರಥದೊಡನೆ ಸುಮ೦ತ್ರನನ್ನು ಅಯೋಧ್ಯೆಗೆ ಸಾಗಕಳುಹಿಸಿ ಆ ಮೇಲೆ ಗುಹನ ಸಹಾಯದಿಂದ ಓಡೆಯ ಮೇಲೆ ಗಂಗಾನದಿಯನ್ನು ದಾಟಿ ಸೀತಾಲಕ್ಷ್ಮಣರೊಡನೆ ಹೊರಟು ಕಾಲ್ನಡಿಗೆಯಿಂದಲೇ ಪ್ರಯಾಗವೆಂಬ ಸ್ಥಳಕ್ಕೆ ಬಂದು ಅಲ್ಲಿರುವ ಭರದ್ವಾಜಮಹರ್ಷಿಯನ್ನು ಕಂಡು ವಂದಿಸಿ ಆತನು ಮಾಡಿದ ಆತಿಥ್ಯವನ್ನು ಸ್ವೀಕರಿಸಿ ಅನಂತರದಲ್ಲಿ ಆತನ ಅಪ್ಪಣೆಯನ್ನು ಹೊಂದಿ ಚಿತ್ರ ಕೂಟಪರ್ವತಕ್ಕೆ ಬಂದು ಅಲ್ಲಿ ಲಕ್ಷ್ಮಣನಿಂದ ನಿರ್ಮಿತವಾದ ಪರ್ಣಶಾಲೆಯಲ್ಲಿ ವಾಸಮಾಡಿಕೊಂಡಿದ್ದನು. 3. RAVANA SEIZES AND CARRIES OFF SITE TO LANKA ೩. ಸೀತಾಪಹಾರದ ಕಥೆ ರಾಮನು ಸೀತಾಲಕ್ಷ್ಮಣರೊಡನೆ ಕೂಡಿದವನಾಗಿ ಅರಣ್ಯ ಪ್ರವೇಶವನ್ನು ಮಾಡಿದುದರಿಂದ ಅಯೋಧ್ಯೆಯಲ್ಲಿ ದಶರಥನು ಪುತ್ರವಿಯೋಗದಿಂದುಂಟಾದ ಅಪಾರ ದುಃಖವನ್ನು ತಾಳಲಾರದೆ ರಾಮಾ ! ರಾಮಾ ಎಂದು ಹಂಬಲಿಸುತ್ತ ವೃಥಿತನಾಗಿ ಮೃತನಾದನು. ಆಗ ಸುಮಂತ್ರನೇ ಮೊದಲಾದ ಮಂತ್ರಿಗಳೂ ಪುರೋಹಿತನಾದ ವಸಿಷ್ಠ ಮಹರ್ಷಿಯ ಕೇಕಯರಾಜನ ಪಟ್ಟಣದಿಂದ ಭರತಶತ್ರುಘ್ನರನ್ನು ಕರಿಸಿ ಕೊಂಡು ಅವರಿಂದ ದಶರಥನ ಪ್ರೇತಕೃತ್ಯಗಳನ್ನು ಮಾಡಿಸಿ ಅನಂತರದಲ್ಲಿ ಭರತನನ್ನು