ಪುಟ:ಕಥಾಸಂಗ್ರಹ ಸಂಪುಟ ೨.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತಾಪಹಾರದ ಕಥೆ 59 ಕುರಿತು-ನೀನು ರಾಜ್ಯಾಭಿಷಿಕ್ತನಾಗೆಂದು ಹೇಳಿದರು. ಆಗ ಭರತನು ಅವರನ್ನು ನೋಡಿ-ದುರ್ಮಾರ್ಗಪ್ರವರ್ತಕಳೂ ನನ್ನ ತಾಯಿಯ ಆದ ಕೈಕೇಯಿಯು ತಂದೆ ಗಿಂತಲೂ ಹೆಚ್ಚಾಗಿ ಕಾಪಾಡುತ್ತಿದ್ದ ನನ್ನ ಅಣ್ಣನನ್ನು ಕಾಡಿಗಟ್ಟಿ ಮಹಾತ್ಮನಾದ ನನ್ನ ತಂದೆಯನ್ನು ಕೊಂದು ನನಗೆ ಕೊನೆಮೊದಲಿಲ್ಲದ ದುಃಖಸಂತಾಪಗಳನ್ನು ೦ಟು ಮಾಡಿದಳು. ಪಿತೃಸದೃಶನಾದ ಹಿರಿಯಣ್ಣನಿರುವಲ್ಲಿ ಅಶಾಶ್ವತವಾದ ಐಹಿಕಭೋಗಕ್ಕೆ ಳಸಿ ನಾನು ರಾಜ್ಯಾಭಿಷಿಕ್ತನಾಗಿ ಇವಳ ದುರಾಶೆಯನ್ನು ಎಂದಿಗೂ ನೆರವೇರಿಸಲಾ ರೆನು. ನಾನು ಈಗಲೇ ನಮ್ಮಣ್ಣನಿರುವ ಮಹಾರಣ್ಯವನ್ನು ಪ್ರವೇಶಿಸಿ ಆತನ ಕಾಲ ಳನ್ನು ಹಿಡಿದು ದೈನ್ಯದಿಂದ ಪ್ರಾರ್ಥಿಸಿ ಸಮ್ಮತಿಪಡಿಸಿ ತಿರಿಗಿ ಅಯೋಧ್ಯೆಗೆ ಕರೆದು ಕೊಂಡು ಬರುವೆನು. ಆತನೇ ರಾಜ್ಯಾಭಿಷೇಕಕ್ಕೆ ಯೋಗ್ಯನು. ನಾನು ಆತನ ದಾಸನು ಎಂದು ಹೇಳಿ ಸಕಲಪರಿವಾರಸಮೇತನಾಗಿ ಹೊರಟು ರಾಮನಿರುವ ಚಿತ್ರ ಕಟಾಚಲಕ್ಕೆ ಬಂದು ದುಃಖಿಸುತ್ತ ಆತನಿಗೆ ನಮಸ್ಕರಿಸಿ ತಂದೆಯು ಪರಲೋಕವಾಸಿ ಯಾದುದನ್ನು ತಿಳಿಸಿ ಆತನೊಡನೆಯ ಮಹಾ ದುಃಖವನ್ನನುಭವಿಸಿ ಆತನನ್ನು ಕುರಿತು-ನೀನು ಈಗಲೇ ಅಯೋಧ್ಯಾ ಪಟ್ಟಣಕ್ಕೆ ಬಂದು ಪಟ್ಟಾಭಿಷಿಕ್ತನಾಗ ಬೇಕೆಂದು ನಾನಾವಿಧವಾಗಿ ಪ್ರಾರ್ಥಿಸಿಕೊಂಡನು. ಅನಂತರದಲ್ಲಿ ರಾಮನು ಭರತನ ದೈನ್ನೋಕ್ತಿಗಳಿಂದ ಕೂಡಿದ ಪ್ರಾರ್ಥನೆಗೆ ಒಪ್ಪದೆ-ನಾನು ನನ್ನ ತಂದೆಯ ಆಜ್ಞೆಯನ್ನು ಎಂದಿಗೂ ಮಾರುವುದಿಲ್ಲ. ಆತನ ಅಪ್ಪಣೆಯ ಮೇರೆಗೆ ಹದಿನಾಲ್ಕು ವರುಷಗಳ ವರೆಗೂ ವನದಲ್ಲೇ ವಾಸಮಾಡಿಕೊಂ ಡಿದ್ದು ಆ ಮೇಲೆ ಆಯೋಧ್ಯೆಗೆ ಬಂದು ನಿನ್ನ ಮಾತಿನಂತೆ ಪಟ್ಟಾಭಿಷಿಕನಾಗುವೆ ನಲ್ಲದೆ ಈಗೆ ಒಂದು ಪಟ್ಟಾಭಿಷಿಕ್ತನಾಗುವುದು ಧರ್ಮವಿಹಿತವಲ್ಲವು ಎಂದು ಭರತ ನನ್ನು ಸಮ್ಮತಿಪಡಿಸಲು ಆಗ ಭರತನು-ಹಾಗಾದರೆ ನಾನು ರಾಜ್ಯಾಭಿಷಿಕನಾಗು ವುದೂ ಅಯುಕ್ತವಾದುದರಿಂದ ಈಗ ನಿನ್ನ ಪಾದುಕೆಗಳನ್ನು ನನಗೆ ಕೊಟ್ಟರೆ ಅವು ಗಳನ್ನು ಸಿಂಹಾಸನದ ಮೇಲಿಟ್ಟು ನಾನು ಅವುಗಳ ಸೇವಕನಾಗಿ ನೀನು ಬರುವ ವರೆಗೂ ರಾಜ್ಯಭಾರದ ಕೆಲಸಗಳನ್ನು ಮಾಡುತ್ತಿರುವೆನು ಎನ್ನಲು ರಾಮನು ಆ ಮಾತಿಗೆ ಸಮ್ಮತಿಪಟ್ಟು ತನ್ನ ಎರಡು ಆವುಗೆಗಳನ್ನೂ ಕೊಟ್ಟು ಅವನನ್ನು ಅಯೋ ಧ್ಯಾ ಪಟ್ಟಣಕ್ಕೆ ಕಳುಹಿಸಿ ಈ ಚಿತ್ರಕೂಟಪರ್ವತವು ಅಯೋಧ್ಯೆಗೆ ಹತ್ತಿರವಾಗಿರು ವುದರಿಂದ ಊರಜನರು ಆಗಾಗ್ಗೆ ಇಲ್ಲಿಗೆ ಬಂದು ನನಗೆ ತೊಂದರೆಯನ್ನು ಕೊಡುತ್ತಿರು ವರು. ಅದು ಕಾರಣ ಇನ್ನು ಇಲ್ಲಿರಕೂಡದು ಎಂದು ಮನಸ್ಸಿನಲ್ಲಿ ನಿಶ್ಚಯಿಸಿ ಸೀತಾ ಲಕ್ಷ್ಮಣರೊಡನೆ ಚಿತ್ರಕೂಟಸ್ಥಳದಿಂದ ಹೊರಟು ದಂಡಕಾರಣ್ಯವನ್ನು ಹೊಕ್ಕು ಲಂಕಾನಗರದ ಉಕ್ಕಡವಾದ ಜನಸ್ಥಾನವೆಂಬ ಪ್ರದೇಶಕ್ಕೆ ಸಮೀಪವಾಗಿ ಗೋದಾ ವರೀ ನದಿಯ ದಡದಲ್ಲಿರುವ ಪಂಚವಟಿಯೆಂಬ ಸ್ಥಳದಲ್ಲಿ ಸರ್ಣಶಾಲೆಯನ್ನು ಮಾಡಿ ಸಿಕೊಂಡು ಅಲ್ಲಿ ಸೀತಾಲಕ್ಷ್ಮಣರೊಡನೆಯ ತನ್ನ ತಂದೆಯ ಮಿತ್ರನಾದ ಜಟಾ' ಯುವೆಂಬ ಗೃಧ್ರರಾಜನೊಡನೆಯ ಕಡಿ ಸುಖವಾಗಿ ವಾಸಮಾಡಿಕೊಂಡಿದ್ದನು. ಹೀಗಿರುವಲ್ಲಿ ಭೂಲೋಕದಲ್ಲಿ ಹಿಮಂತರ್ತುವು ತಲೆದೋರಿತು. ಆಗ ಲಕ್ಷಣನು ರಾಮನನ್ನು ಕುರಿತು-ಎಲೈ ಅಣ್ಣನೇ ! ಈ ಹಿಮ ಕಾಲವು ಬಹಳ ವಿಚಿತ್ರವಾಗಿರು 2 M