ಪುಟ:ಕಥಾಸಂಗ್ರಹ ಸಂಪುಟ ೨.djvu/೭೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


60 ಕಥಾಸಂಗ್ರಹ-೪ ನೆಯ ಭಾಗ ವುದು. ದಿಕ್ಕುಗಳೆಂಬ ಸ್ತ್ರೀಯರು ಹಿಮವೆಂಬ ಶುಭಾಂಬರದಿಂದ ಅಲಂಕರಿಸಿಕೊ೦ ಡಿರುವಂತೆ ಕಾಣುತ್ತದೆ. ಈ ಕಾಡಿನಲ್ಲಿ ಜನರು ಪಚ್ಚಕರ್ಪೂರದಿಂದ ಮಿಶ್ರವಾದ ಗಂಧವನ್ನು ಮೈಗೆ ಲೇಪಿಸಿಕೊಳ್ಳುವುದರಲ್ಲಿಯ ತಾವರೆ ಕನ್ನೈದಿಲೆ ಆವಲ ಮುಂ ತಾದ ಹೂವುಗಳಿಂದ ಕೂಡಿ ರಮಣೀಯವಾದ ಕೊಳಗಳ ಮೆಟ್ಟಲುಗಳಲ್ಲಿ ಕುಳಿತು ಶೈತ್ಯಸೌರಭ್ಯ ಮಾಂದ್ಯ ವಿಶಿಷ್ಟವಾದ ವಾಯುವಿನ ಸ್ಪರ್ಶಸುಖವನ್ನು ಅನುಭವಿಸುವುದರ ಲ್ಲಿಯ ಉಪ್ಪರಿಗೆಗಳ ಕಿಟಿಕಿಗಳಲ್ಲಿದ್ದು ಮೊಗಗಳನ್ನು ಹೊರಗೆ ಚಾಚುವುದರಲ್ಲಿಯ ತಣ್ಣೀರುಗಳ ಮನದಲ್ಲಿಯ ವಿಮುಖರಾಗಿ ಶಶೋದರದಂತೆ ನಯವಾಗಿರುವ ಕಂಬಳಿಗಳನ್ನು ಹೊಡೆದುಕೊಳ್ಳುವುದರಲ್ಲಿಯ ಅರಳೆಗಳನ್ನು ಹಾಕಿ ಹೊಲಿದಿರುವ ದಪ್ಪಂಗಿಗಳನ್ನು ತೊಟ್ಟು ಕೊಳ್ಳುವುದರಲ್ಲಿಯ ಮಧುರಾಹಾರಗಳನ್ನು ಭುಂಜಿಸುವು ದರಲ್ಲಿಯೂ ಕಸ್ತೂರೀಘನಸಾರ ಮಿಶ್ರವಾದ ತಾಂಬೂಲವನ್ನು ತಿನ್ನುವುದರಲ್ಲಿಯ ಹೊಗೆಯಿಲ್ಲದೆ ಬರಿಗೆಂಡಳಿಂದ ತುಂಬಲ್ಪಟ್ಟಿರುವ ಅಗ್ಗಿಷ್ಟಿಗೆಯಲ್ಲಿ ಕಾಸಿಕೊಳ್ಳುವುದ ರಲ್ಲಿಯೂ ಇಟ್ಟಿಗೆಗಳಿಂದ ಕಟ್ಟಲ್ಪಟ್ಟ ಗೃಹಗಳ ಮಧ್ಯದಲ್ಲಿ ವಾಸಿಸುವುದರಲ್ಲಿಯ ಆಲದ ಮರದ ನೆಳಲಿನಲ್ಲಿ ಕೂತು ಕೊಳ್ಳುವುದರಲ್ಲಿಯ ಸೇದುವ ಬಾವಿಯ ನೀರಿನಿಂದ ವಾಯುವುದರಲ್ಲಿಯೂ ಅಗಿಲು ಗಂಧ ಇವುಗಳನ್ನು ತೊಡೆದು ಕೊಳ್ಳುವುದರಲ್ಲಿಯ ಅತ್ಯಾಶೆಯುಳ್ಳವರಾಗಿರುವರು. ಮತ್ತು ಈ ಕಾಲದಲ್ಲಿ ಪಕ್ಷಿಗಳು ತಮ್ಮ ತಮ್ಮ ಗೂಡುಗಳನ್ನು ಬಿಟ್ಟು ಹೊರಗೆ ಹೊರಡದೆ ಮರಿಗಳನ್ನು ರಕೆಗಳಲ್ಲಿ ಹುದುಗಿಸಿಕೊಂಡು ಇರುತ್ತಿರುವುವು. ಗದ್ದೆಗಳಲ್ಲಿ ಬತ್ತದ ಪೈರುಗಳು ಹೊಂಬಣ್ಣವಾದ ತೆನೆಗಳನ್ನು ಜೋಲಾಡಿಸುತ್ತ ಚೆಲು ವಾಗಿರುವುವು. ದಾರಿದಾರಿಗಳಲ್ಲೆಲ್ಲಾ ಅರವಟಿಗೆಯ ಮನೆಗಳು ಪಾಳುಬಿದ್ದಿರುವುವು. ಪ್ರಾತಃಕಾಲದಲ್ಲಿದ್ದು ಹೊಳೆಗಳ ಶೀತಲೋದಕದಲ್ಲಿ ಸ್ನಾನಮಾಡುವುದರಿಂದುಂಟಾದ ದ್ವಿಗುಣಿತವಾದ ಚಳಿಯಿಂದ ಗಡಗಡನೆ ನಡುಗುತ್ತಿರುವ ಮುನಿಜನಗಳ ತುಟಿಗಳು ಸರ್ವಲೋಕವನ್ನೂ ಹಿಡಿದು ಬಾಧಿಸುತ್ತಿರುವ ಶೀತವೆಂಬ ಪಿಶಾಚಿಯನ್ನು ನಿವಾರಿಸು ವುದಕ್ಕೋಸ್ಕರ ಉಚ್ಚಾಟನ ಮಂತ್ರಜಪವನ್ನು ಮಾಡುತ್ತಿರುವ ಒಂದು ಬಗೆಯೋ ಎಂಬಂತೆ ಕಾಣುತ್ತಿರುವುವು. ಈ ಕಾಲದಲ್ಲಿ ಎಲೆಗಳೆಲ್ಲಾ ಉದುರಿಹೋಗಿ ಬೆತ್ತಲೆ ಯಿರುವ ವೃಕ್ಷಗಳನ್ನು ನೋಡಿದರೆ ಇವು ಶೀತವೆಂಬ ಜಾಡ್ಯದಿಂದ ಅ೦ಗಲೋಪವನ್ನು ಹೊಂದಿದುವೋ ಎಂಬಂತೆ ಇರುತ್ತಿರುವುವು. ದನಗಳು ಯಥೇಚ್ಛವಾಗಿ ಬೆಳೆದಿರುವ ಹುಲ್ಲನ್ನು ಮೇಯ್ತು ಕೊಬ್ಬಿ ಉಬ್ಬಿ ಹಿಮರಾಕ್ಷಸನ ದಂಡಿನಂತಿರುವುವು. ಕಮಲ ಗಳೆಲ್ಲಾ ಉದುರಿಹೋಗಿರುವುದರಿಂದ ಹಿಮವೆಂಬ ಅಪಮಾನಕಾರಿಯ ಕಾಟದಿಂದ ಪದ್ಧಿ ನಿಯರೆಂಬ ನಾರಿಯರು ತಮ್ಮ ಮುಖವನ್ನು ಹೊರಗೆ ತೋರಿಸದೆ ಮರೆಯಾಗಿ ರುವರೋ ಎಂಬಂತೆ ಕೊಳಗಳಲ್ಲಿ ತಾವರೆದಂಟು ಮಾತ್ರ ಇರುವುದು. ಕೋಗಿಲೆಗ. ಳೆಲ್ಲಾ ಪೀಡಾಕಾರಿಯಾದ ಈ ಹಿಮಕಾಲವು ಬೇಗ ಹೋಗಿ ಸಂತೋಷದಾಯಕ ವಾದ ವಸಂತಕಾಲವು ಬಂದು ವನಗಳೆಲ್ಲಾ ಪಲ್ಲವ ಪುಷ್ಪಭರಿತವಾಗಿ ವಿರಾಜಿಸ ಲೆಂಬ ಉದ್ದೇಶದಿಂದ ನಿಯಮವನ್ನು ಕೈಕೊಂಡು ಮೌನವ್ರತವನ್ನು ಧರಿಸಿರುವುವೋ