ಪುಟ:ಕಥಾಸಂಗ್ರಹ ಸಂಪುಟ ೨.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

62 ಕಥಾಸಂಗ್ರಹ-೪ ನೆಯ ಭಾಗ ನಿಮ್ಮ ಹೆಸರುಗಳು ಯಾವುವು ? ಎಂದು ಕೇಳಲು ರಾಮನು ನಾನು ಲೋಕಪ್ರಸಿದ್ದ ವಾದ ಸೂರ್ಯವಂಶದಲ್ಲಿ ಹುಟ್ಟಿದವನೂ ಸತ್ಯ ಪ್ರತಿಜ್ಞನೂ ಆದ ದಶರಥಭೂಪಾಲನ ಕುಮಾರನು. ನನ್ನನ್ನು ರಾಮನೆಂದು ಕರೆಯುವರು. ತಂದೆಯ ಆಜ್ಞಾನುಸಾರ ವಾಗಿ ಈ ದಂಡಕ ವನದಲ್ಲಿ ವಾಸಮಾಡುತ್ತಿರುವೆನು. ಈಕೆಯು ಮಹಾತ್ಮನಾದ ಜನಕರಾಜನ ಪುತ್ರಿಯು ಈಕೆಗೆ ಸೀತೆಯೆಂದು ನಾಮವು. ಈಕೆಯೇ ನನ್ನ ಪತ್ನಿಯು ಎಂದು ಹೇಳಲು ಅದಕ್ಕೆ ಶೂರ್ಪನಖಿಯು-ಎಲೈ ರಾಮನೇ ! ಕೇಳು. ನಾನು ಅ೦ದವಾದ ರೂಪನ್ನು ನೋಡಿ ನಿನ್ನನ್ನು ಮೋಹಿಸಿದವಳಾಗಿದ್ದೇನೆ. ಸಾಮಾನ್ಯಳಾದ ಈ ಮನುಷ್ಯ ಸ್ತ್ರೀಯನ್ನು ಪರಿತ್ಯಜಿಸಿ ನನ್ನನ್ನು ಮದುವೆಯಾಗು. ನಿನ್ನ ಸಕಲಾಭೀ ಪೂವ್ರ ಸಿದ್ಧಿಸುವುದು. ನಾನು ಕಾಮರೂಪಿಣಿಯು, ' ಮತ್ತು ಲೋಕದಲ್ಲಿ ಮಹಾ ವೀರನೆನಿಸಿದ ರಾವಣನ ತಂಗಿಯಾದ ಶೂರ್ಪನಖಿಯೆಂಬವಳು ನಾನೇ ಎಂದು ಹೇಳಿದಳು. ರಾಮನು ಆ ಮಾತುಗಳನ್ನು ಕೇಳಿ ಸೀತೆಯ ಮೊಗವನ್ನು ನೋಡಿ ನಸುನಕ್ಕು ಶೂರ್ಪನಖಿಯನ್ನು ಕುರಿತು-ಎಲೈ ಶೋಭನಾಂಗಿಯೇ! ಯಾವಾಗಲೂ ನಾನು ಏಕೆ ಪತ್ನಿವ್ರತಸ್ಥನು. ಅದು ಕಾರಣ ನನಗೆ ಈಕೆಯೊಬ್ಬಳೇ ಪತ್ನಿ ಯಾಗಿರುವಳು. ನಾನು ಇವಳ ಮೇಲೆ ಇನ್ನೊಬ್ಬಳನ್ನು ಮದುವೆಯಾಗಕೂಡದು. ಇದೊ ಆ ಕಡೆಯಲ್ಲಿ ನನಗಿಂತ ಚೆಲುವನೂ ನನ್ನ ತಮ್ಮನೂ ಆದ ಲಕ್ಷಣನು ಹೆಂಡತಿಯಿಲ್ಲದೆ ಒಬ್ಬನೇ ಇರುವನು. ನೀನು ಹೋಗಿ ಅವನನ್ನು ವರಿಸಿ ಮದುವೆಯಾದರೆ ನಿನಗೆ ಬಹಳ ಸುಖ ವುಂಟಾಗುವುದು ಎನ್ನಲು ಆಗ ಶೂರ್ಪನಖಿಯು ಲಕ್ಷ್ಮಣನ ಬಳಿಗೆ ಹೋಗಿ ಆತನ ಸೌಂದರ್ಯವನ್ನು ನೋಡಿ ಈತನು ಆತನಿಗಿಂತಲೂ ಚೆಲುವನಾಗಿರುವನಲ್ಲಾ, ಆತನು ಹೇಳಿದ ಮಾತು ನಿಜವೇ ಸು. ನಾನು ಇವನನ್ನು ಗಂಡನನ್ನಾಗಿ ಮಾಡಿಕೊಳ್ಳಬ ಹುದು ಎಂದು ಯೋಚಿಸಿ ಲಕ್ಷ್ಮಣನ ಬಳಿಗೆ ಹೋಗಿ ಅವನನ್ನು ಕುರಿತು-ಎಲೈ ಮೋಹನಾಂಗನೇ ! ನಿಮ್ಮ ಂಣನಾದ ರಾಮನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದನು. ನೀನು ಬೇಗ ನನ್ನನ್ನು ಮದುವೆಯಾಗು ಅಂದಳು. ಆಗ ಲಕ್ಷ್ಮಣನು ಅವಳ ಇಂಗಿತ ದಿಂದಲೂ ಚೇಷ್ಟೆಗಳಿಂದಲೂ ಇವಳು ರಾಕ್ಷಸಿಯೆಂದು ತಿಳಿದು ಅವಳನ್ನು ಕುರಿತು ಎಲೈ ಸ್ತ್ರೀಯೇ ! ನಾನು ರಾಮನ ದಾಸನು, ನಿರಂತರದ ಆತನ ಸೇವೆಯನೆ ಮಾಡಿಕೊಂಡು ಜೀವಿಸುತ್ತಿರುವೆನು, ಇಂಥ ಸ್ಪುರದ್ರೂಪಿಣಿಯಾದ ನೀನು ದಾಸ ನಾದ ನನ್ನನ್ನು ಮದುವೆಯಾದರೆ ದಾಸಿಯಾಗಿ ಅವರ ಸೇವೆಯನ್ನು ಮಾಡಿಕೊಂಡಿರ ಬೇಕಾಗುತ್ತದೆ. ನೀನು ಒಡೆಯನಾದ ರಾಮನನ್ನು ಮದುವೆಯಾದರೆ ನನಗೆ ಒಡತಿ ಯಾಗಿರುವೆಯಲ್ಲಾ, ನಿನ್ನಂಥ ಕುಲಸ್ತ್ರೀಯು ದಾಸನನ್ನು ಮದುವೆಯಾಗುವುದು ಧರ್ಮವೇ ? ಅಂದನು. ಆ ಮಾತುಗಳನ್ನು ಕೇಳಿ ಶೂರ್ಪನಖಿಯು-ಇವರು ನನ್ನನ್ನು ಅಪಹಾಸ್ಯಕ್ಕೆ ಈಡುಮಾಡಿ ಹೀಗೆ ತಿರುಗಿಸುತ್ತಿರುವರು. ಇದರಿಂದ ನನ್ನ ಕೋರಿಕೆಯು ನೆರವೇರು ವಂತೆ ಕಾಣುವುದಿಲ್ಲ. ಅದು ಕಾರಣ ರಾಮನ ಹೆಂಡತಿಯಾದ ಈ ಮನುಜ