ಪುಟ:ಕಥಾಸಂಗ್ರಹ ಸಂಪುಟ ೨.djvu/೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸೀತಾಪಹಾರದ ಕಥೆ ಸ್ತ್ರೀಯನ್ನು ನಾನು ಕೊಂದು ತಿಂದುಬಿಟ್ಟರೆ ಆ ಮೇಲೆ ಇವನಿಗೆ ಪತ್ನಭಾವವುಂಟಾಗಿ ನನ್ನ ನೈ ಮದುವೆಯಾಗುವನು ಎಂದು ಯೋಚಿಸಿಕೊಂಡು ಹೊರಟು ಸೀತೆಯನ್ನು ನುಂಗುವುದಕ್ಕೆ ಮಹಾ ಮೃತ್ಯು ದೇವತೆಯಂತೆ ಬರುತ್ತಿರಲು ಆಗ ರಾಮನ ಅಪ್ಪ ಣೆಯ ಪ್ರಕಾರ ಲಕ್ಷ್ಮಣನು ಅವಳನ್ನು ಹಿಡಿದು ತನ್ನ ಕತ್ತಿಯಿಂದ ಅವಳ ಕಿವಿ ಮೂಗುಗಳನ್ನು ಕೊಯ್ದನು. ಆಗ ಅವಳು ಹರಕು ಮಗುಳ್ಳವಳೂ ಮಳಿಯ ಆಗಿ ಧಾರಾರೂಪವಾಗಿ ಸುರಿಯುತ್ತಿರುವ ರಕ್ತವುಳ್ಳವಳಾಗಿ ತನ್ನ ಣ್ಣನಾದ ಖರನ. ಬಳಿಗೆ ಬಂದು ಅವನೊಡನೆ ರಾಮ ಲಕ್ಷ್ಮಣರ ಮೇಲೆ ದೂರು ಹೇಳಿಕೊಳ್ಳಲು ತತ್ಕ್ಷ ಣದಲ್ಲೇ ಖರನು ರಾಕ್ಷಸ ಸೇನಾಯುಕ್ತನಾಗಿ ಹೊರಟು ರಾಮನೊಡನೆ ಯುಕ್ಕೆ ಬಂದನು. ರಾಮನೂ ಅಕ್ಷಣ ಸಮೇತನಾಗಿ ಯುದ್ಧಕ್ಕೆ ತೊಡಗಿ ಕಡೆಗೆ ಆ ಜನಸ್ಥಾನದಲ್ಲಿ ಒಬ್ಬ ರಾಕ್ಷಸನಾದರೂ ಉಳಿಯದಂತೆ ಎಲ್ಲರನ್ನೂ ಕೊಂದು ಆ ಪ್ರದೇ ಪದಲ್ಲಿ ರಾಕ್ಷಸರಿಂದುಂಟಾಗುತ್ತಿದ್ದ ತೊಂದರೆಯನ್ನು ನಿರ್ನಾಮಮಾಡಿದನು. ಆ ಮೇಲೆ ಶೂರ್ಪನಖಿಯು ಹತಾಶಳಾಗಿ ಲಂಕಾ ಪಟ್ಟಣಕ್ಕೆ ಬಂದು ತನ್ನಣ್ಣನಾದ ರಾವ ಣನ ಬಳಿಯಲ್ಲಿ ದುಃಖಿಸುತ್ತ ನಿಂತು ನಿದರ್ಶನಪೂರ್ವಕವಾಗಿ ವಿದ್ಯಮಾನವನ್ನೆಲ್ಲಾ ತಿಳಿಸಲು ಅವನು ಕೋಪ ಸಂತಾಪ ಪ್ರೇರಿತನಾಗಿ ರಾಮಲಕ್ಷ್ಮಣರೊಡನೆ ಯುದ್ದ ಕ್ಕೆ ಹೊರಡುವ ಸಮಯದಲ್ಲಿ ಶೂರ್ಪನಖಿಯು ಅವನನ್ನು ಕುರಿತು-ಎಲೈ ಅಣ್ಣನೇ ರಾಮಲಕ್ಷ ಣರನ್ನು ಜಗಳದಲ್ಲಿ ಜಯಿಸುವುದು ಪಿನಾಕಹಸ್ಯನಾದ ಶಿವನಿಗೂ ಸಾಧ್ಯ ವಲ್ಲ ವ. ಅದು ಕಾರಣ ನೀನು ಈ ರೀತಿಯಾಗಿ ಯುದ್ಧಕ್ಕೆ ಹೋಗುವುದರಿಂದ ಏನೂ ಪ್ರಯೋಜನವಿಲ್ಲ ವು. ಆದುದರಿಂದ ರಾಮಲಕ್ಷ್ಮಣರಿಬ್ಬರೂ ತಮ್ಮಿಂದ ತಾವೇ ಸಾಯುವಂತೆ ಒಂದು ಯುಕ್ತಿಯನ್ನು ಹೇಳುವೆನು ಕೇಳು. ಆ ರಾಮನಿಗೆ ಸರ್ವ ಲೋಕಸುಂದರಿಯಾಗಿ ಸೀತೆಯೆಂಬಭಿಧಾನದಿಂದ ಒಬ್ಬಳು ಹೆಂಡತಿ ಇರುವಳು. ನಿನ್ನ ಅd ತಃಪುರದಲ್ಲಿರುವ ದೇವ ದಾನವ ಯಕ್ಷ ರಾಕ್ಷ ಸಾದಿ ಕನ್ಯಕೆಯರಲ್ಲಿ ಒಬ್ಬಳಾದರೂ ಆಕೆಗೆ ಸಮಾನಳಾದ ಲಾವಣ್ಯವತಿಯಿಲ್ಲವು. ನೀನು ನಮ್ಮ ಸೋದರಮಾವನಾದ ಮಾ ರೀಚನನ್ನು ಸಹಾಯಕ್ಕೆ ಕರೆದುಕೊಂಡು ಈಗಲೇ ಪಂಚವಟಿಗೆ ಹೋಗಿ ರಾಮಲಕ್ಷ್ಯ ಣರನ್ನು ಸೀತೆಯ ಬಳಿಯಿಂದ ಅಗಲಿಸಿ ಆ ವೇಳೆಯಲ್ಲಿ ನೀನು ಬಲಾತ್ಕಾರದಿಂದ ಸೀತೆ ಯನ್ನು ಎತ್ತಿಕೊಂಡು ಲಂಕೆಗೆ ಬಂದು ಆಕೆಯನ್ನು ನಿನ್ನ ಪತ್ನಿಯನ್ನಾಗಿ ಮಾಡಿಕೊ೦ ಡರೆ ಮರು ಲೋಕದಲ್ಲಿಯ ನಿನ್ನ ಭಾಗ್ಯಕ್ಕೆ ಎಣೆಯಾದ ಭಾಗ್ಯವೇ ಇಲ್ಲ ವು. ಆ ಮೇಲೆ ರಾಮನು ಪ್ರಿಯಳಾದ ಹೆಂಡತಿಯ ವಿಯೋಗವನ್ನು ತಾಳಲಾರದೆ ಸಾಯು ವನು. ಅಣ್ಣ ಅತ್ತಿಗೆ ಇವರ ವಿಯೋಗ ದುಃಖತಾಪಗಳಿಂದ ಲಕ್ಷ ಣನೂ ವಿನಾಶ ವಾಗಿ ಹೋಗುವನು ಎಂದು ಹೇಳಿದಳು. ರಾವಣನು ಈ ಮಾತುಗಳನ್ನು ಕೇಳಿ ಇದು ಒಳ್ಳೆಯ ಸೂಚನೆಯೇ ಸರಿ. ಹೀಗೆಯೇ ಮಾಡಬೇಕೆಂದು ತನ್ನ ಮನಸ್ಸಿನಲ್ಲಿ ನಿಶ್ಚಯಿಸಿ ಕೂಡಲೆ ರಥಾರೂಢನಾಗಿ ಹೊರಟು ನಡುಗಡಲಲ್ಲಿರುವ ಮಾರೀಚನ ಆಶ್ರಮಕ್ಕೆ ಬಂದು ಅವನೊಡನೆ-ದಶರಥನ ಮಗನಾದ ರಾಮನು ಶೂರ್ಪನಖಿಯ ಕಿವಿ ಮೂಗುಗಳನ್ನು ಕೊಯ್ದು ಸಮರದಲ್ಲಿ

ಓ ಓ