ಪುಟ:ಕಥಾಸಂಗ್ರಹ ಸಂಪುಟ ೨.djvu/೭೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


64 ಕಥಾಸಂಗ್ರಹ-೪ ನೆಯ ಭಾಗ ಖರದೂಷಣಾದಿಗಳನ್ನು ಕೊಂದುಹಾಕಿದ ಸುದ್ದಿಯನ್ನೂ ತಾನು ರಾಮನ ಹೆಂಡತಿ ಯನ್ನು ಅಪಹರಿಸಿಕೊಂಡು ಬರಬೇಕೆಂಬ ಉದ್ದೇಶದಿಂದ ಬಂದಿರುವುದನ್ನೂ ಹೇಳಿ ಒಡಂಬಡಿಸಿ ಪಂಚವಟಿಯಲ್ಲಿ ಮಾಡಬೇಕಾದ ಉಪಾಯಗಳನ್ನು ಅವನಿಗೆ ಹೇಳಿ ಕೊಟ್ಟು ಆತನೊಡನೆ ಹೊರಟು ಪಂಚವಟಿಗೆ ಬಂದು ತಾನೊಂದೆಡೆಯಲ್ಲಿ ಗೋವಾ ಗಿದ್ದುಕೊಂಡು ಮಾರೀಚನನ್ನು ಮುಂಚಿತವಾಗಿ ರಾಮಾಶ್ರಮಕ್ಕೆ ಕಳುಹಿಸಿದನು. ಆಗ ಮಾಯಾವಿಯಾದ ಮಾರೀಚನು ಪಂಚರತ್ನ ಪ್ರಕಾಶಮಯವಾದ ಜಿಂಕೆಯ ಆಕಾರವನ್ನು ಧರಿಸಿ ರಾಮಾಶ್ರಮದ ಬಳಿಗೈತಂದು ಸೀತಾರಾಮರ ಮುಂದೆ ಸುಳಿ ದಾಡುತ್ತಿಲು ಸೀತೆಯು ಆ ಮಾಯಾಮೃಗದ ರಮ್ಯಾಕಾರವನ್ನು ನೋಡಿ ಮೋಹಿ ತಳಾಗಿ ರಾಮನನ್ನು ಕುರಿತು-ಎಲೈ ಪ್ರಾಣೇಶನೇ ! ನಾನು ಇಂಥ ಚೆಲುವಾದ ಹುಲ್ಲೆಯನ್ನು ಮೊದಲೆಂದೂ ನೋಡಿದುದಿಲ್ಲ. ಯಾವ ಪ್ರಯತ್ನದಿಂದಾದರೂ ಇದನ್ನು ಹಿಡಿದು ತಂದರೆ ನಾವು ಈ ವನದಲ್ಲಿರುವ ವರೆಗೂ ಇದರ ಸಂಗಡ ಆಡುತ್ತ ಸುಖವಾಗಿ ಕಾಲವನ್ನು ಕಳೆಯಬಹುದು. ಆ ಮೇಲೆ ಆಯೋಧ್ಯೆಗೆ ತೆಗೆದು ಕೊಂಡು ಹೋಗಿ ನಮ್ಮ ಅಂತಃಪುರದಲ್ಲಿ ಇಟ್ಟುಕೊಳ್ಳಬಹುದು ಎಂದು ದೈನ್ಯದಿಂದ ಬಹು ವಿಧವಾಗಿ ಹೇಳಿಕೊಂಡಳು. ಆಗ ರಾಮನು ಸೀತಾರಕ್ಷಣಾರ್ಥವಾಗಿ ಲಕ್ಷ್ಮಣನನ್ನು ಅಲ್ಲೇ ಬಿಟ್ಟು ಧನುರ್ಬಾಣಗಳನ್ನು ತೆಗೆದು ಕೊಂಡು ಆ ಮೃಗದ ಹಿಂದೆಯೇ ಹೋದನು. ಆ ಮಾಯಾಮೃಗವು ದೂರದಲ್ಲಿ ಮಿಂಚಿನಂತೆ ಕಂಡು ಮರೆಯಾಗುತ್ತ ಆ ಮೇಲೆ ದಾರಿ ತಪ್ಪಿದು ದರಂತೆ ಹಿಂದಿರುಗಿ ರಾಮನ ಬಳಿಗೆ ಬರುತ್ತ ಕೈಗೆ ಸಿಕ್ಕಿತೆಂಬ ಷ್ಟರಲ್ಲಿ ಚಕ್ಕನೆ ಹಾರಿ ಸ್ವಲ್ಪ ದೂರದಲ್ಲಿ ನಿಲ್ಲುತ್ತ ತನ್ನ ನಡತೆಯಿ೦ದ ರಾಮನಿಗೆ ಆಶೆ ಯನ್ನು ಹೆಚ್ಚಿಸುವುದಾಗಿ ಹೋಗುತ್ತ ಇದೇ ಮೇರೆಗೆ ಆಶ್ರಮಕ್ಕೆ ಬಹು ದೂರವಾಗಿ ಕಾಡಿನಲ್ಲಿ ಅವನನ್ನು ಸೆಳೆದುಕೊಂಡು ಹೋಯಿತು. ರಾಮನು ನಡುವಗಲ ಮಾರ್ತಾಂಡನ ಬಲು ಬಿಸಿಲಿನಲ್ಲಿ ತಿರುತಿರುಗಿ ಬಾಯಾರಿ ಬೆಂಡಾಗಿ ಬೇಸತ್ತು ಬಸವಳಿದು ಕಡೆಗೆ-ಈ ಮೃಗವಂತು ನನ್ನ ಕೈಗೆ ಸಿಕ್ಕುವುದಿಲ್ಲ. ಇದನ್ನು ಕೊಂದು ಇದರ ತೊಗಲನ್ನಾದರೂ ತೆಗೆದುಕೊಂಡು ಹೋಗಿ ಜಾನಕಿಗೆ ಕೊಡುವೆನೆಂದು ತನ್ನ ಮನಸ್ಸಿನಲ್ಲಿ ನಿರ್ಧರಿಸಿದವನಾಗಿ ಬಿಲ್ಲಿಗೆ ನಾರಿಯನ್ನೇರಿಸಿ ಅಲ ಗನ್ನು ಹೂಡಿ ಗುರಿಗಟ್ಟಿ ಮೃಗವನ್ನು ಹೊಡೆಯಲು ಆಗ ಮಾರೀಚನು ಮೊದಲಿದ್ದ ಜಿಂಕೆಯ ರೂಪನ್ನು ಬಿಟ್ಟು ಕೂಗಿಕೊಳ್ಳುವ ರಾಮನ ಧ್ವನಿಯಂತೆ.-ಹಾ ಸೀತೇ ! ಹಾ ಲಕ್ಷ್ಮಣಾ! ಎಂದು ಗಟ್ಟಿ ಯಾಗಿ ಆರ್ತಧ್ವನಿ ಮಾಡುತ್ತ ಪ್ರಾಣಗಳನ್ನು ಬಿಟ್ಟನು. ಇತ್ಯ ಎಲೆವನೆಯಲ್ಲಿದ್ದ ಜನಕಜೆಯು ಆ ಧ್ವನಿಯನ್ನು ಕೇಳಿ ಕೂಡಲೆ ಬಹು ದುಃಖಿತ ಳಾಗಿ ಮಹಾವ್ಯಥೆಯಿಂದ ಲಕ್ಷ್ಮಣನನ್ನು ಕುರಿತು-ಎಲ್ಲೆ ಮೈದುನನೇ ! ನಿನಗೆ ಪ್ರಿಯನಾದ ಅಣ್ಣನ ದುಃಖಧ್ವನಿಯನ್ನು ಕೇಳಿದೆಯಾ ? ಆ ಮೃಗವು ಮಾಯಾವಿ ಯಾದ ರಾಕ್ಷಸನೋ ? ಏನೋ ? ನಾನು ತಿಳಿಯದೆ ದುರಾಶಾವಶಳಾಗಿ ನನ್ನ ಪ್ರಿಯ ನನ್ನು ಅಟ್ಟಿ ಕೆಟ್ಟೆನು. ನನ್ನ ಮನೋವಲ್ಲಭನು ಏನಾಗಿರುವನೋ ? ನಡೆ ! ಬೇಗ ಹೋಗು ! ನಿಮ್ಮಣ್ಣನಿಗೆ ಸಹಾಯವನ್ನು ಮಾಡಿ ಆತನನ್ನು ಬೇಗ ಇಲ್ಲಿಗೆ ಕರೆದು