ಪುಟ:ಕಥಾಸಂಗ್ರಹ ಸಂಪುಟ ೨.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತಾಪಹಾರದ ಕಥೆ 65 ಕೊಂಡು ಬಂದರೆ ಸರಿ. ಇಲ್ಲದಿದ್ದರೆ ಈಕ್ಷಣವೇ ಪ್ರಾಣವನ್ನು ಬಿಡುವೆನೆಂದು ಹೇಳಿ ಲಕ್ಷ್ಮಣನನ್ನು ಕಳುಹಿಸಲು ಆತನು ಕಾಡಿನಲ್ಲಿ ರಾಮನನ್ನು ಹುಡುಕುತ್ತ ಹೋಗು ತ್ತಿದ್ದನು. ಇತ್ತಲಾ ದುಷ್ಟನಾದ ರಾವಣನು ಸನ್ಯಾಸಿ ವೇಷವನ್ನು ತಾಳಿಕೊಂಡು ಬಂದು ರಾಮನ ಎಲೆವನೆಯನ್ನು ಹೊಕ್ಕು ಸೀತೆಯನ್ನು ಬಲಾತ್ಕಾರದಿಂದ ಹಿಡಿದೆತ್ತಿ ರಥದ ಮೇಲೆ ಕೂರಿಸಿಕೊಂಡು ಆಕಾಶಮಾರ್ಗದಲ್ಲಿ ಬರುತ್ತಿರುವಾಗ ಸೀತೆಯು ಹಾ ರಾಮಾ ! ಹಾ ಲಕ್ಷಣಾ ! ನೀವಿಲ್ಲದ ವೇಳೆಯಲ್ಲಿ ದುರಾತ್ಮನಾದ ಈ ರಕ್ಕಸನು ಮ೦ದಭಾಗ್ಯಳಾದ ನನ್ನನ್ನು ಹಿಡಿದೆತ್ತಿಕೊಂಡು ಹೋಗುತ್ತಿರುವನು. ದಿಕ್ಕಿಲ್ಲವಲ್ಲಾ! ಅಯ್ಯೋ ! ಎಂದು ಮೊರೆಯಿಟ್ಟು ರೋದಿಸುತ್ತಿರುವ ಶಬ್ದವನ್ನು ಜಟಾಯುವೆಂಬ ಗೃಧ್ರರಾಜನು ಕೇಳಿ ಅತಿ ಕೋಪದಿಂದ -ಎಲೈ ನೀಚನಾದ ರಾವಣನೇ ! ಜಗದಲ್ಲಿ ರಾಮನಾದ ರಾಮನ ರಮಣಿಯಾದ ಸೀತೆಯನ್ನು ಅಪಹರಿಸಿಕೊಂಡು ಎಲ್ಲಿಗೆ ಹೋಗು ತಿರುವೆ ? ನಿಲ್ಲು ! ನಿಲ್ಲು! ಲೋಕಮಾತೃವಾದ ಜನಕಜೆಯನ್ನು ಬೇಗ ಬಿಟ್ಟರೆ ಸರಿ. ಇಲ್ಲವಾದರೆ ನಿನ್ನನ್ನು ಹಿಂಡಿ ಪ್ರಾಣಗಳನ್ನು ತೆಗೆಯುವೆನೆಂದು ಆಕಾಶಕ್ಕೆ ಹಾರಿ ತನ್ನ ಮಹಾ ಪಕ್ಷಗಳಿಂದ ರಾವಣನ ರಥಾಶ್ವ ಕೇತು ದಂಡಗಳನ್ನು ಮುರಿಬಡಿದು ನೆಲಕ್ಕೆ ಕೆಡಹಿ ಕೊಕ್ಕುಗಳಿಂದ ರಾವಣನ ಮೈಯ್ಯನ್ನು ಕಚ್ಚಿ ಮಾಂಸಖಂಡಗಳನ್ನು ಕಿತ್ತು ರಕ್ತದ ಕೋಡಿಯನ್ನು ಹರಿಸಲು ಆಗ ರಾವಣನು ಮಾಯೆಯನ್ನವಲಂಬಿಸಿ ಆ ಜಟಾಯುವನ್ನು ಹೊಡೆದು ಮರ್ಧೆಗೊಳಿಸಿ ಭೂಮಿಗುರುಳಿಸಿ ಮೊದಲು ತುಂಡು ತುಂಡಾಗಿ ಬಿದ್ದಿದ ರಥವನ್ನೇ ಸರಿಯಾಗಿ ಜೋಡಿಸಿ ತಿರಿಗಿ ಅದರ ಮೇಲೆ ಸೀತೆಯನ್ನು ಕುಳ್ಳಿರಿಸಿಕೊಂಡು ಗಗನಮಾರ್ಗದಲ್ಲಿ ಹೋಗುತ್ತಿರಲು ಆಗ ಸೀತೆಯು ಲೋಕೈಕ ವೀರರಾದ ರಾಮ ಲಕ್ಷ್ಮಣರೇ ! ಎಂದು ಬಾರಿಬಾರಿಗೂ ಹಂಬಲಿಸುತ್ತ ಎಲ್ಲಾ ದಿಕ್ಕು ಗಳನ್ನು ನೋಡಿ ಬಾಯ್ತಿಡುತ್ತ ಕಡೆಗೆ ಋಷ್ಯಮಕವೆಂಬ ಪರೈತ ಶಿಖರದಲ್ಲಿ ನಳ ನೀಲ ಹನುಮಂತರೇ ಮೊದಲಾದ ಕಪಿನಾಯಕರೊಡನೆ ಕುಳಿತಿದ್ದ ಸುಗ್ರೀವನೆಂಬ ಕಪಿ ರಾಜನನ್ನು ನೋಡಿ ತಾನು ಉಟ್ಟಿದ್ದ ಸೀರೆಯ ಶರಗನ್ನು ಸ್ವಲ್ಪ ಮಾತ್ರ ಹರಿದು ತಾನು ತೊಟ್ಟಿದ್ದ ತೊಡವುಗಳನ್ನು ತೆಗೆದು ಅದರಲ್ಲಿಟ್ಟು ಗಂಟು ಕಟ್ಟಿ ರಾಮನು ತನ್ನನ್ನು ಹುಡುಕುತ್ತ ಬಂದರೆ ಇವರು ಆತನಿಗೆ ಇವುಗಳನ್ನು ಕೊಡುವರೆಂಬ ಯೋಚನೆ ಯಿಂದ ರಾವಣನು ಕಾಣದ ಹಾಗೆ ಅವರ ಬಳಿಗೆಸೆದಳು. ರಾವಣನು ಯಾವಾಗ ರಾಮನು ಹಿಂದೆ ಬರುವನೋ ಎಂಬ ಭಯದಿಂದ ಕೂಡಿದವನಾಗಿ ಪ್ರತಿಕ್ಷಣದಲ್ಲಿಯ ಹಿಂದಿರುಗಿ ನೋಡುತ್ತ ತೇರನ್ನು ಬೇಗಬೇಗ ನಡಿಸುತ್ತ ಕಡಲನ್ನು ದಾಟಿ ಲಂಕಾ ನಗರವನ್ನು ಸೇರಿ ತನ್ನ ಅಂತಃಪುರನಾರೀಜನವಿ ಹಾರೋಚಿತವಾದ ಅಶೋಕೊದ್ಯಾನದಲ್ಲಿ ಶಿಂಶುಪವೆಂಬ ವೃಕ್ಷದ ಕೆಳಗೆ ಸೀತೆಯನ್ನಿ ರಿಸಿ ಅಲ್ಲಿ ತ್ರಿಜಟೆ ಸರಮೆ ಎಂಬವರೇ ಮೊದಲಾವ ರಾಕ್ಷ ಸಸ್ತ್ರೀಯರನ್ನು ಕಾವಲಿಟ್ಟು ತನ್ನ ಕುಲಗೋತ್ರಗಳನ್ನೆಲ್ಲಾ ನಿರ್ಮಲಮಾಡುವುದರಲ್ಲಿ ಮೃತ್ಯು ಪ್ರಾಯಳಾಗಿರುವವ ಳನ್ನು ತಂದು ತನ್ನ ಮನೆಯಲ್ಲಿ ಇಟ್ಟು ಕೊಂಡೆನೆಂದು ತಿಳಿಯದೆ ಉದ್ಭಮೆಯಿಂದ