ಪುಟ:ಕಥಾಸಂಗ್ರಹ ಸಂಪುಟ ೨.djvu/೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


66 ಕಥಾಸಂಗ್ರಹ-೪ ನೆಯ ಭಾಗ ಕೂಡಿದವನಾಗಿ ತನ್ನ ತಂಗಿಯಾದ ಶೂರ್ಪನಖಿಯನ್ನು ಕರತರಿಸಿ ಆಕೆಗೆ ಸೀತೆಯನ್ನು ತೋರಿಸಿ-ಇದೋ, ನೋಡು ನಿನ್ನ ಕಿವಿ ಮೂಗುಗಳನ್ನು ಕೊಯ್ದು ಮಾನಭಂಗಪ ಡಿಸಿದ ರಾಮನಿಗೆ ಪ್ರತಿಫಲವಾಗಿ ಆತನ ಹೆಂಡತಿಯಾದ ಈ ಸೀತೆಯನ್ನು ತಂದು ಸೆರೆಯಲ್ಲಿಟ್ಟಿದ್ದೇನೆಂದು ಹೇಳಿ ಅಂತಃಪುರಕ್ಕೆ ಹೋಗಿ ನಾನು ಕೃತಕೃತ್ಯನಾದೆನೆಂದು ತಿಳಿದು ಸಂತೋಷಸಮುದ್ರದಲ್ಲಿ ಮುಳುಗೇಳುತ್ತಿದ್ದನು. ಇತ್ತಲಾ ರಾಮನು ಮಾಯಾಮೃಗರೂಪಿಯಾದ ಮಾರೀಚನೆಂಬ ದುಷ್ಟ ರಾಕ್ಷ ಸನು ಮೋಸದಿಂದ ತನ್ನ ಧ್ವನಿಯಂತೆ ಹಾ ಸೀತೆ ! ಹಾ ಲಕ್ಷಣಾ ! ಎಂದು ಕೂಗಿದ ಧ್ವನಿಯನ್ನು ಕೇಳಿದುದರಿಂದ ಸೀತೆಯು ಗಾಬರಿಯಾಗಿ ನನ್ನನ್ನು ನೋಡುವು ದಕ್ಕೋಸ್ಕರ ಲಕ್ಷ್ಮಣನನ್ನು ಎಲ್ಲಿ ಕಳುಹಿಸಿಬಿಡುವಳೋ ? ಆ ವೇಳೆಯಲ್ಲಿ ರಾಕ ಸರು ಬಂದು ಸೀತೆಯನ್ನು ಏನು ಮಾಡುವರೋ ? ಎಂದು ಯೋಚಿಸಿ ಕಳವಳಗೊಂಡು ತನ್ನ ಆಶ್ರಮವನ್ನು ಕುರಿತು ಬೇಗ ಬೇಗ ಬರುತ್ತ ದಾರಿಯಲ್ಲಿ ಬರುತ್ತಿರುವ ಲಕ್ಷ್ಮಣನನ್ನು ಕಂಡು-ಆಹಾ ! ನಾನು ಮೊದಲು ಯೋಚಿಸಿದಂತೆಯೇ ಆಯಿತು. ಸೀತೆಯು ಏನಾಗಿರುವಳೋ ? ಎಂದು ಬಹು ಚಿಂತಾಕ್ರಾಂತನಾಗಿ ಲಕ್ಷ್ಮಣನೊಡನೆ ಕೂಡಿ ತನ್ನ ಪರ್ಣಶಾಲೆಗೆ ಬಂದು ನೋಡಿ ತನ್ನ ಜೀವರತ್ನವನ್ನು ಕಾಣದೆ ಕಾಡಾನೆಯಿಂದ ಮುರಿದಿಡಲ್ಪಟ್ಟ ಸಾಲವೃಕ್ಷದ ಕೊಂಬಿನಂತೆ ಭೂಮಿಯಲ್ಲಿ ಬಿದ್ದು ಮೂರ್ಛಿತನಾಗಿ ಲಕ್ಷ್ಮಣನು ಮಾಡಿದ ಶೈತ್ಯೋಪಚಾರದಿಂದ ಎಚ್ಚೆತ್ತು-ಹಾ ಪ್ರಿಯೇ ! ಜಾನಕೀ ! ಎಲ್ಲಿ ಹೋದೆ ? ಏಕೆ ನನ್ನೊಡನೆ ಮಾತಾಡುವದಿಲ್ಲ ? ಎಂದು ಪ್ರಲಾಪಿಸುತ್ತ-ಎಲೈ ಲಕ್ಷಣನೇ ! ನಾವು ರಾಕ್ಷಸರಲ್ಲಿ ಹಗೆತನವುಳ್ಳವರಾದುದರಿಂದ ಅವರು ಈ ರೀತಿ ಯಾಗಿ ನಮ್ಮನ್ನು ಮೋಸಗೊಳಿಸಿ ಸೀತೆಯನ್ನು ತಿಂದು ಬಿಟ್ಟರೋ ? ಅಥವಾ ಎತ್ತಿ ಕೊಂಡು ಹೋಗಿ ತಮ್ಮ ಮನೆಗಳಲ್ಲಿಟ್ಟು ಕೊಂಡಿದ್ದಾರೋ ತಿಳಿಯದಾ ? ಹಾಗೇನಾ ದರೂ ಒಂದು ಪಕ್ಷದಲ್ಲಿ ಇಟ್ಟು ಕೊಂಡಿದ್ದರೆ ಆ ರಾತ್ಮರಾದ ರಾಕ್ಷಸರ ಮಧ್ಯ ದಲ್ಲಿ ಸಿಕ್ಕಿದ ನನ್ನ ಪ್ರಾಣವಲ್ಲಭೆಯು ಹುಲಿಗಳ ಮಧ್ಯದಲ್ಲಿ ಸಿಕ್ಕಿದ ಹೆಣ್ಣು ಹುಲ್ಲೆಯ ಹಾಗೆ ವ್ಥಿತಳಾಗಿ ಪ್ರಾಣಗಳನ್ನು ಬಿಡುವಳು. ನಾನು ಪ್ರಿಯೆಯಾದ ಸೀತೆಯನ್ನು ನೋಡದೆ ಒಂದು ನಿಮೇಷಕಾಲವಾದರೂ ಬದುಕಲಾರೆನು. ಎಲೈ ಲಕ್ಷಣನೇ ! ಗೋದಾವರೀನದಿಗೆ ಸ್ನಾನಕ್ಕಾಗಿ ಹೋಗಿರುವಳೋ ? ಹಾ ! ಇರಬಹುದು, ನೋಡು ವಣ ಬಾ ಎಂದು ಅಲ್ಲಿಗೆ ಹೋಗಿ ಚೆನ್ನಾಗಿ ನೋಡಿ ಎಲ್ಲೂ ಕಾಣದೆ ಕಡೆಗೆ ಹುಚ್ಚ ನಂತೆ ಆ ನದಿಯಲ್ಲಿರುವ ತಾವರೆಯನ್ನು ನೋಡಿ-ಎಲೈ ತಾವರೆಯೇ ! ನಿನ್ನಂತೆ ಮುಖವುಳ್ಳ ನನ್ನ ಪ್ರಿಯೆಯಾದ ಸೀತೆಯನ್ನು ಕಾಣೆಯಾ ? ಎಲೈ ಬಿಳಿದಾವರೆಯೇ! ನಿನ್ನ ಬಣ್ಣದಂತಿರುವ ಮುಗುಳ್ಳಗೆಯುಳ್ಳ ನನ್ನ ಪ್ರಾಣಕಾಂತ್ತೆಯು ಎಲ್ಲಿರುವಳು ? ಎಲೆ ಹೊಂದಾವರೆಯೇ ! ನಿನ್ನ ಕಾಂತಿಯಂತೆ ಮೈಸಿರಿಯುಳ್ಳ ನನ್ನ ಮಡದಿಯನ್ನು ನೀನೆಲ್ಲಾದರೂ ಕಂಡಿದ್ದರೆ ಹೇಳಬಾರದೇ ? ಎಲೈ ಕನ್ನೈದಿಲೆಯೇ ! ನಿನ್ನೆ ಸಳಿನಂತೆ ಕಣ್ಣುಳ್ಳ ನನ್ನ ಪ್ರಾಣಕಾಂತೆಯನ್ನು ಕಂಡಿರುವೆಯಾ ? ಓ ಶೃಂಗವೇ! ನಿನ್ನಂತೆ ಶೋಭಿ ಸುತ್ತಿರುವ ಮುಂಗುರುಳುಳ್ಳ ನನ್ನ ಮಾನಿನೀಮಣಿಯು ಎಲ್ಲಿ ಮರೆಯಾಗಿರುವಳು ? M