ಪುಟ:ಕಥಾಸಂಗ್ರಹ ಸಂಪುಟ ೨.djvu/೭೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸೀತಾಪಹಾರದ ಕಥೆ 67. ತೋರಿಸುವೆಯಾ ? ಎಲೈ ಮತೃವೇ ! ನನ್ನ ನಾರಿಯು ನಿನ್ನಂತೆ ನೀರಿನಲ್ಲೇನಾದರೂ ಮುಳುಗಿರುವಳೋ ? ಓ ಚಕ್ರವಾಕ ಪಕ್ಷಿಯೇ ! ನೀನು ರಾತ್ರಿಯಲ್ಲಿ ನಿನ್ನ ಹೆಂಡತಿ ಯನ್ನು ಕಾಣದೆ ದುಃಖಪಡುವಂತೆಯೇ ನಾನೂ ದುಃಖಪಡುತ್ತಿರುವೆನು. ಆದುದ ರಿಂದ ನೀನು ನನ್ನ ಮೇಲೆ ಕನಿಕರವಿಟ್ಟು ನನ್ನ ಮನೋರಮೆಯನ್ನು ತೋರಿಸಿಕೊಡು ವೆಯಾ ? ಎಂದು ಪ್ರಲಾಪಿಸುತ್ತ ಅಲ್ಲಿಂದ ಹೊರಟು ಕಾಡಿನಲ್ಲಿ ಹುಡುಕಿಕೊಂಡು ತಿರುಗುತ್ತ ಕಂಡ ಕಂಡ ಮರಗಳ ಬಳಿಗೂ ಮೃಗಪಕ್ಷಿಗಳ ಬಳಿಗೂ ಓಡಿಯೋಡಿ ಹೋಗಿ ಸುಂದರಿಯಾದ ನನ್ನ ಪತ್ನಿಯನ್ನು ಕಾಣಿರಾ ? ಎಂದು ದೀನಭಾವದಿಂದ ಕೇಳುತ್ಯ ಮತ್ತು ಎಲೈ ಸಿಂಹವೇ ! ನಿನ್ನ ನಡುವಿನಂತೆ ನಡುವುಳ್ಳವಳಾದ ನನ್ನ ' ಸುದತೀ. ರತ್ನ ವನ್ನು ನಿನ್ನ ಗುಹಾಮಧ್ಯದಲ್ಲಿಟ್ಟು ಕೊಂಡಿರುವೆಯಾ ? ಎಲೈ ಜಿಂಕಗಳಿರಾ ! ನಿಮ್ಮ ಕಣ್ಣುಗಳಂತೆ ಕಪ್ಪಾದ ಕಣ್ಣುಗಳುಳ್ಳ ನನ್ನ ಕಾಮಿನಿಯು ನಿಮ್ಮ ನಿವಾಸಸ್ಥಳ ದಲ್ಲಿರುವಳೋ ? ಎಲೈ ಮದಕರಿಯೇ ! ನಿನ್ನ ಸೊಂಡಲಿನಂತಿರುವ ತೊಡೆಗಳುಳ್ಳ ನನ್ನ ತರುಣಿಯು ಎಲ್ಲಿರುವಳು ? ಎಲೈ ಅರಸಂಜೆಯೇ ! ನಿನ್ನ ನಡೆಯಂತೆ ಮನೋಹರವಾದ ನಡೆಯುಳ್ಳ ನನ್ನ ಮೋಹದ ಶೋಭನಾಂಗಿಯನ್ನು ತೋರಿಸಬಾರದೇ ? ಎಲೈ ಕೋಗಿ ಲೆಯೇ ! ನಿನ್ನ ಧ್ವನಿಯಂತೆ ಮಧುರಧ್ವನಿಯುಳ್ಳವಳಾದ ನನ್ನ ಪ್ರಿಯ ಕಾಂತೆಯನ್ನು ಕಾಣೆಯಾ ? ಎಲೈ ಅರಗಿಣಿಯೇ ! ನಿನ್ನಂತೆ ಮುದ್ದು ಮಾತುಳ್ಳ ನನ್ನ ಚೆನ್ನರಸಿಯು ಎಲ್ಲಿ ಹೋದಳು ? ಎಲೈ ಪ್ರಿಯೆಯೇ ! ನೀನು ನನ್ನಲ್ಲಿ ರವೆಯಷ್ಟಾದರೂ ಕರುಣವುಳ್ಳ ವಳಾಗಿಲ್ಲವಲ್ಲಾ? ಹಗಲಿರುಳುಗಳಲ್ಲೆಲ್ಲಾ ಎಡೆಬಿಡದೆ ನನ್ನೊಡನೆಯೇ ಆಡಿಕೊಂ ಡಿದ್ದ ನನ್ನ ಮುದ್ದು ಮರಿಪಾರಿವಾಳವೇ! ದಾಸನಾದ ನನ್ನನ್ನು ಅನಾಥನನ್ನಾಗಿ ಮಾಡಿ ಎಲ್ಲಿಗೆ ಹೋದೆ ? ದನಿದೋರು, ಚಕ್ಕನೆ ಬಂದು ನನ್ನನ್ನು ಆಲಿಂಗಿಸು. ನನ್ನನ್ನು ಬದು ಕಿಸು ಎಂದು ವಿಧವಿಧವಾಗಿ ಪ್ರಲಾಪಿಸುತ್ತೆ ಅನ್ನೋದಕಗಳನ್ನು ತೊರೆದು ಬಳ್ಳಿ ಗಳ ಪೊದರುಗಳಲ್ಲಿಯ ಮರಗಳ ಪೊಟರೆಗಳಲ್ಲಿಯ ಗಿರಿಗಳ ಗುಹೆಗಳಲ್ಲಿಯೂ ಸರೆ ಸೀರಗಳಲ್ಲಿ ಯ ಹೊಳೆಗಳ ದಡಗಳಲ್ಲಿಯ ಹುಡುಕುತ್ತ ಹಸಿವಿನಿಂದಲೂ ಕಾಯಾ ರಿಕೆಯಿಂದ ಕಂಗೆಟ್ಟು ಕಳವಳಗೊಂಡು ಬರುತ್ತ ಲಕ್ಷ್ಮಣನನ್ನು ನೋಡಿ ಎಲೆ ಲಕ್ಷ್ಮಣನೇ ! ಬೇಗ ಧನುರ್ಬಾಣಗಳನ್ನು ಕೊಡು. ಇದೊ, ಇಲ್ಲಿ ಬಿದ್ದಿರುವ ರಾಕ್ಷ್ಯ ಸನು ನನ್ನ ಪತ್ನಿ ಯಾದ ಸೀತೆಯನ್ನು ತಿಂದಿರುವನೆಂದು ಹೇಳುತ್ತಿರುವ ರಾಮನ ಮಾತು ಗಳನ್ನು ಕೇಳಿ ಕಿಂಚಿಚ್ಚೆತನ್ಯದಿಂದ ಕೂಡಿದ್ದ ಜಟಾಯುಪಕ್ಷಿಯು ರಾಮನನ್ನು ಕುರಿತು-ಎಲೈ ರಾಮನೇ ! ನಾನು ನಿನ್ನ ಮಡದಿಯನ್ನು ತಿಂದ ರಾಕ್ಷಸನಲ್ಲ, ಲವ ಇಸಮುದ್ರದಲ್ಲಿ ತ್ರಿಕೂಟವೆಂಬ ಪರ್ವತವಿರುವುದು. ಅದರ ಶಿಖರದಲ್ಲಿರುವ ಅಂಕೆ ಯೆಂಬ ನಗರಕ್ಕೆ ದೊರೆಯಾದ ದಶಕಂಠನೆಂಬ ರಾಕ್ಷಸಾಧವನು ನನ್ನ ಪ್ರಾಣಗಳಿಗೆ ಅಂತ್ಯಾವಸ್ಥೆಯನ್ನು ತಂದು ನಿನ್ನ ಪ್ರಾಣವಲ್ಲಭೆಯನ್ನು ತೆಗೆದು ಕೊಂಡು ಹೋದನೆಂದು ಹೇಳಿ ಕೂಡಲೆ ಮೃತವಾಯಿತು. - ಆಗ ರಾಮನು ತನ್ನ ತಂದೆಯ ಮಿತ್ರನಾದ ಈ ಜಟಾಯವು ಸೀತೆಯ ನ್ನು ಬಿಡಿಸಿಕೊಂಡು ಬರುವುದಕ್ಕಾಗಿ ರಾವಣನೊಡನೆ ಘೋರವಾದ ಯುದ್ಧ ಮಾಡಿ