ಪುಟ:ಕಥಾಸಂಗ್ರಹ ಸಂಪುಟ ೨.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 ಕಥಾಸಂಗ್ರಹ-೪ ನೆಯ ಭಾಗ ಕಡೆಗೆ ಅವನಿಂದ ಗಾಯವಡೆದು ಸತ್ತು ಹೋದನೆಂದು ತಿಳಿದು-ಹಾ ! ಅಯ್ಯೋ ! ಎಂದು ಆ ಪಕ್ಷಿಶವದ ಮೇಲೆ ಬಿದ್ದು ಹೊರಳುತ್ತ- ಎಲೈ ತಮ್ಮನಾದ ಲಕ್ಷ್ಮಣನೇ ! ನನಗೆ ಆಪತ್ತಿನ ಮೇಲೆ ಆಪತ್ತು ಬಂದೊದಗುತ್ತಿರುವುದನ್ನು ನೋಡಿದೆಯಾ ? ಮೊದಲು ರಾಜ್ಯವನ್ನೂ ರಾಜಭೋಗವನ್ನೂ ಬಿಟ್ಟು ತಾಯಿ ತಮ್ಮಂದಿರನ್ನು ತೊರೆದು ಅರ ಣ್ಯವಾಸಿಯಾಗಿ ತಂದೆಯನ್ನು ಕಳೆದುಕೊಂಡು ಪ್ರಾಣಭೂತಳಾದ ನಾರಿಯನ್ನು ನೀಗಿ ಕಡೆಗೆ ಪಿತೃಪ್ರಾಯನಾದ ಜಟಾಯುವನ್ನೂ ತೀರಿಸಿಕೊಂಡು ನಿರ್ಭಾಗ್ಯನಾದ ನನ್ನ ಮಹಾ ವ್ಯಥಾಸಂಕಲಿತವಾದ ದುಃಖಾಗ್ನಿ ಯು ಪ್ರಸಿದ್ದಾಗ್ನಿಯನ್ನೂ ಕೂಡ ದಹಿಸಬಲ್ಲುದಲ್ಲಾ ! ಅನಾಥನಾದ ನಾನು ಏನು ಮಾಡಲಿ ? ಎಲ್ಲಿಗೆ ಹೋಗಲಿ ? ಯಾರನ್ನು ಮರೆಹೊಗಲಿ ? ಈ ಮಹಾ ದುರ್ದಶೆಯನ್ನು ಯಾರಿಗುಸುರಲಿ ? ನಿರಾ ಶ್ರಯನಾದ ನನಗೆ ಗತಿ ಯಾರು ? ನಾನು ಈ ಪಕ್ಷಿರಾಜನ ಸಂಗಡವೇ ಪ್ರಾಣವನ್ನು ಬಿಟು ಯಮಲೋಕವನ್ನು ಸೇರುವೆನು, ನೀನು ಹಿಂದಿರುಗಿ ಅಯೋಧ್ಯೆಗೆ ಹೋಗಿ ಈ ನನ್ನ ದುಸ್ಸಿತಿಯನ್ನು ಕೌಸಲ್ಯಾ ಭರತಾದಿಗಳಿಗೆ ತಿಳಿಸುವವನಾಗೆಂದು ಹೇಳುತ್ತ ದುಃಖವೆಂಬ ಕಡಲಿನಲ್ಲಿ ಮುಳುಗಿ ಕಡೆಗಾಣದೆ ಪುನಃ ಲಕ್ಷ್ಮಣನನ್ನು ಕುರಿತು ದುಷನಾದ ರಾವಣನು ನನ್ನ ಪತ್ನಿ ಯನ್ನೂ ಅಪಹರಿಸಿ ಆಕೆಯನ್ನು ಬಿಡಿಸಿ ನನಗೆ ಸಹಾಯಮಾಡುವುದಕ್ಕಾಗಿ ಹೋದ ಪಕ್ಷಿರಾಜನನ್ನೂ ಕೊಂದು ಓಡಿಹೋಗಿ ಎಲ್ಲೋ ಅಡಗಿಕೊಂಡಿರುವನಲ್ಲಾ ! ಒಳ್ಳೆಯದು ಇರಲಿ. ಬೇಗ ನನ್ನ ಬಿಲ್ಲರಳ ಳನ್ನು ಕೊಡೆಂದು ತೆಗೆದುಕೊಂಡು ಈ ಕಣದಲ್ಲಿ ಹದಿನಾಲ್ಕು ಲೋಕಗಳನ್ನು ಸುಟ್ಟು ಬೂದಿಮಾಡಿಬಿಡುವೆನು ಎಂದು ಸಿಂಹನಾದವನ್ನು ಮಾಡಿ ಪ್ರಳಯ ಕಾಲದ ರುದ್ರನ ಭೀಕರಾಕಾರವನ್ನು ಧರಿಸಿ ನಿಲ್ಲಲು ಆಗ ಲಕ್ಷ್ಮಣನು ನೋಡಿ ಕೈಮುಗಿದುಕೊಂಡು ಸ್ವಾಮಿ ರಾಮಚಂದ್ರನೇ ! ನೀನು ಈ ವರೆಗೂ ಸಕಲ ಪ್ರಾಣಿಗಳಿಗೂ ಹಿತನಾ ಗಿದ್ದು ಈಗ ಅಪರಾಧಿಯಾದ ಒಬ್ಬ ಹುಲುರಕ್ಕಸನಿಗಾಗಿ ಸಕಲ ಲೋಕಗಳನ್ನೂ ದಹಿ ಸುವುದು ಸರ್ವಜ್ಞನಾದ ನಿನಗೆ ವಿಹಿತವಲ್ಲ. ಅದು ಕಾರಣ ಸಮಾಧಾನಚಿತ್ತನಾಗ ಬೇಕು. ಅಪರಾಧಿಯಾದ ರಾವಣನು ಅವನ ತಾಯಸುರಿನಲ್ಲಡಗಿಕೊಂಡಿದ್ದಾಗ ಅವನನ್ನು ಬಿಡದೆ ಹಿಡಿದು ಕೊಂದುಹಾಕೋಣ ಎಂದು ಬಹುತರವಾಗಿ ಹೇಳಿ ಸಮಾ ಧಾನಪಡಿಸಲು ಆಗ ರಾಮನು ತಾಳ್ಮೆಯನ್ನು ಹೊಂದಿ * ಆ ಜಟಾಯು ಪಕ್ಷಿಯ ದೇಹಕ್ಕೆ ದಹನಾದಿಕೃತ್ಯಗಳನ್ನು ಮಾಡಿ ಆ ಪಕ್ಷಿಗೆ ಬ್ರಹ್ಮಲೋಕದಲ್ಲಿರುವಂತೆ ವರವ ೩ ತ್ತು ಅಲ್ಲಿಂದ ಹೊರಟು ಸೀತೆಯನ್ನು ಹುಡುಕುತ್ತ ಕ್ರೌಂಚಾರಣ್ಯವನ್ನು ಪ್ರವೇಶಿಸಿ ಬರುತ್ತಿರಲು ಅಲ್ಲಿ ಮೊದಲ್ನೋಡಿದವರಿಗೆ ಪಗಲೊಡೆಯನಿಗಂಜಿ ಸಂಕೋಚಸ್ಥಿತಿ ಯನ್ನು ಹೊಂದಿ ಘನೀಭೂತವಾದ ಕಾರ್ಗತ್ತಲೆಯೋ ಎಂಬ ಭಾ೦ತಿಯನ್ನು ಹುಟ್ಟಿ ಸುತ್ತ ಘೋರವಾದ ಮುಖವೂ ಜೋಲುತ್ತಿರುವ ಹೊಟ್ಟೆ ಯ ಕರವಾದ ಕೋರೆ ದಾಡೆಗಳೂ ಉಳ್ಳವಳಾದ ಅಯೋಮುಖಿಯೆಂಬ ನಿಶಾಚರಿಯು ಲಕ್ಷಣನನ್ನು ಹಿಡಿದು ನುಂಗುವುದಕ್ಕೆ ಬರುತ್ತಿರಲು ಲಕ್ಷ್ಮಣನು ಆಕೆಯನ್ನು ಹಿಡಿದು ಶೂರ್ಪನಖಿಗೆ ಎರಡನೆಯವಳನ್ನಾಗಿ ಮಾಡಿಬಿಟ್ಟನು.

WM