ಪುಟ:ಕಥಾಸಂಗ್ರಹ ಸಂಪುಟ ೨.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತಾಪಹಾರದ ಕಥೆ 69 ಅನಂತರದಲ್ಲಿ ರಾಮಲಕ್ಷ್ಮಣರಿಬ್ಬರೂ ಅಲ್ಲಿಂದ ಹೊರಟು ಬರುತ್ತ ದಾರಿಯಲ್ಲಿ ಯೋಜನಬಾಹುವಾದ ಕಬಂಧನೆಂಬ ರಾಕ್ಷಸನ ಬಾಹುಗಳೊಳಗೆ ಸಿಕ್ಕಿ ತಮ್ಮ ಕರಖ ಡ್ಡಗಳಿಂದ ಆತನ ನಿಡುದೋಳ ಳನ್ನು ಕತ್ತರಿಸಿ ಆತನನ್ನು ಕೊಂದುದರಿಂದ ಮೊದಲು ಆತನಿಗೆ ಸ್ಕೂಲಶಿರಸ್ಯನೆಂಬ ಮುನಿಯಿಂದ ಬಂದಿದ್ದ ಶಾಪವು ವಿಮೋಚನವಾಗಿ ತನ್ನ ಪೂರ್ವದ ಗಂಧರ್ವರೂಪವನ್ನು ಧರಿಸಿ ದಿವ್ಯವಾದ ವಿಮಾನವನ್ನು ಹತ್ತಿ ಕುಳಿತು ಕೊಂಡು ರಾಮನನ್ನು ಕುರಿತು-ಎಲೈ ರಾಮಚಂದ್ರನೆ ! ನಾನು ಧನುವೆಂಬ ಗಂಧ ರ್ವೆನು. ಸ್ಕೂಲಶಿರಸ್ಕನೆಂಬ ಋಷಿಯ ಶಾಪದಿಂದ ನನಗೆ ಈ ರಾಕ್ಷಸ ಜನ್ಮವುಂಟಾ ಯಿತು. ಮಹಾತ್ಮನಾದ ನಿನ್ನ ದಯೆಯಿ೦ದ ಅದು ಈಗ ಪರಿಹಾರವಾಯಿತು. ಇನ್ನು ಮೇಲೆ ನಾನು ನನ್ನ ಲೋಕಕ್ಕೆ ಹೋಗುವೆನು. ಇಲ್ಲಿಗೆ ಸ್ವಲ್ಪ ದೂರದಲ್ಲಿರುವ ಹಂಪೆಯೆಂಬ ದಿವ್ಯ ಸರಸ್ಸಿನ ಬಳಿಯಲ್ಲಿ ಋಷ್ಯಮಕವೆಂಬ ಗಿರಿಯಿರುವುದು. ಅಲ್ಲಿ ಸೂರ್ಯನ ಮಗನಾದ ಸುಗ್ರೀವನೆಂಬ ಕಪಿವೀರನು ವಾಸಿಸುತ್ತಿರುವನು. ನೀನು ಅಲ್ಲಿಗೆ ಹೋಗಿ ಆತನ ಸಖ್ಯವನ್ನು ಮಾಡಿಕೊಂಡರೆ ರಾವಣಸಂಹಾರದ ಸೀತಾಪ್ರಾಪ್ತಿ ಯಲ್ಲೂ ನಿನಗೆ ಸಹಾಯಮಾಡುವನೆಂದು ಹೇಳಿ ಸ್ವರ್ಗಕ್ಕೆ ಸಾಗಿಹೋದನು. ತರು ವಾಯ ಲಕ್ಷ್ಮಣಸಮೇತನಾದ ರಾಮನು ವಿಯೋಗಜ್ವರದಿಂದ ಸಂಜಾತವಾದ ಕಂಪ ವುಳ್ಳವನಾಗಿ ಪಂಪಾಮಾರ್ಗವನ್ನು ಹಿಡಿದನು. ಆ ಮೇಲೆ ರಾಮನು ಪಂಪಾವನದಲ್ಲಿ ಬರುತ್ತೆ ಅಲ್ಲಿರುವ ಶಬರಿಯೆಂಬ ಕಿರಾತ ಸ್ತ್ರೀಯ ಆಶ್ರಮವನ್ನು ಹೊಕ್ಕು ಆಕೆ ಮಾಡಿದ ಭಕ್ತಿಪೂರ್ವಕವಾದ ಆತಿಥ್ಯವನ್ನು ಕೈಕೊಂಡು ಪಂಪಾತೀರಕ್ಕೆ ಬಂದನು. ಆಗ ರಾಮನು ಲಕ್ಷಣನನ್ನು ನೋಡಿ ಎಲೈ ತಮ್ಮನೇ ! ನೋಡು, ಇದು ಮತಂಗಮುನಿಯ ಆಶ್ರಮವು. ಆ ಯತಿಯ ಮಹಿ ಮಾತಿಶಯದಿಂದ ಇಲ್ಲಿರುವ ಮೃಗಪಕ್ಷಿಗಳು ಸ್ವಭಾವವಾದ ಜಾತಿವೈರವನ್ನು ಬಿಟ್ಟು ಪರಸ್ಪರೋಪಕಾರಿಗಳಾಗಿರುವುವು. ಹೆಣ್ಣು ನವಿಲುಗಳು ಹಾವಿನ ಮರಿಗಳಿಗೆ ಕುಟು ಕುಗಳನ್ನು ಕೊಟ್ಟು ಪೋಷಿಸುತ್ತಿರುವುವು. ಸಿಂಹಗಳು ಸಲ್ಲ ಕೀಶಾಖೆಗಳನ್ನು ತಂದು ಆನೆ ಮರಿಗಳಿಗೆ ತಿನ್ನಿಸುತ್ತಿರುವುವು. ಹುಲಿಮರಿಗಳು ಹಸುಗಳ ಮೊಲೆಗಳನ್ನು ಪ್ರೀತಿ ಯಿಂದ ಉಣ್ಣುತ್ತಿರುವುವು. ಸಿವಂಗಿಗಳು ಹುಟ್ಟೇಮರಿಗಳೊಡನೆ ಸರಸವಾಡುತ್ತಿರು ವುವು. ಇದೇ ಇದೇ ಋಷ್ಯಮಕಮಹೀಧರವು. ಇಲ್ಲಿ ನಮಗೆ ಸಹಾಯಮಾಡು ವವನಾದ ಸುಗ್ರೀವನೆಂಬ ಕಪಿವೀರನಿರುವನು. ಇಲ್ಲಿ ನೋಡು, ಇದೇ ಪಂಪಾಸರಸ್ಸು. ಇದರ ರಮಣೀಯತೆಯನ್ನು ಬಣ್ಣಿಸುವವರಾರು ? ಈ ಸರಸ್ಸೆಂಬ ನಾರಿಯು ಶೈವಾಲ ವೆಂಬ ಕೇಶಪಾಶದಿಂದಲೂ ತಾವರೆಯೆಂಬ ಮುಖದಿಂದಲೂ ಮಿಾನುಗಳೆಂಬ ಕಣ್ಣುಗ ಳಿಂದಲೂ ಚಂಪಕಕುಸುಮವೆಂಬ ನಾಸಿಕದಿಂದಲೂ ಕುಮುದಪುಷ್ಪಗಳೆಂಬ ಮಂದ ಹಾಸದಿಂದಲೂ ಚಕ್ರವಾಕಗಳೆಂಬ ಕುಚಗಳಿಂದಲೂ ಕಿರುಗೆರೆಗಳೆಂಬ ತ್ರಿವಳಿಗಳಿಂ ದಲೂ ದಡದಲ್ಲಿರುವ ಮಾಮರಗಳ ಚಿಗುರುಗಳೆಂಬ ವಸ್ಯದಿಂದಲೂ ನಿರ್ಮಲೋದಕ ವೆಂಬ ಲಾವಣ್ಯದಿಂದಲೂ ಕೂಡಿ ಸೊಗಸಾಗಿರುವಳು ಎಂದು ಹೇಳುತ್ತ ಹಾ ಸೀತೆಯೇ ! ಕೋಮಲಾಂಗಿಯೇ ! ಎಂದು ಬಾರಿಬಾರಿಗೂ ಹಂಬಲಿಸುತ್ತಿದ್ದನು.