ಪುಟ:ಕಥಾಸಂಗ್ರಹ ಸಂಪುಟ ೨.djvu/೮೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಥಾಸಂಗ್ರಹ-೪ ನೆಯ ಭಾಗ ಮಂಡಲದ ವರೆಗೂ ಬೆಳೆದಿರುವುವು. ಇವುಗಳನ್ನು ಕತ್ತರಿಸುವುದು ವಾಲಿಗೂ ಅಸಾ ಧವು ಎಂದು ಹೇಳಲು ರಾಮನು ಸುಗ್ರೀವ ಮನೋಭಾವವನ್ನು ತಿಳಿದು ಆ ದುಂದು ಭಿಯ ಶರೀರದ ಎಲುವನ್ನು ತನ್ನ ಕಾಲಂಗುಟದಿಂದ ಹಾರಿಸಿ ಹತ್ತು ಗಾತ್ರದಗಳ ದೂರದಲ್ಲಿ ಬೀಳಿಸಿ ಆ ಏಳು ಓಲೆಯ ಮರಗಳನ್ನೂ ಒಂದೇ ಬಾಣದಿಂದ ಕತ್ತರಿಸಿ ಕೆಡಹಲು ಆಗ ಸುಗ್ರೀವನು ಸಂತೋಷಪಟ್ಟು ನಿಸ್ಸಂಶಯ ಚಿತ್ತನಾದನು. ಅನಂತರ ದಲ್ಲಿ ರಾಮನು ವಾಲಿಯನ್ನು ಸಂಹರಿಸಿ ಸುಗ್ರೀವನಿಗೆ ಕಪಿರಾಜ್ಯಾಭಿಷೇಕವನ್ನೂ ವಾಲಿಯ ಮಗನಾದ ಅಂಗದನಿಗೆ ಯೌವರಾಜ್ಯಾಭಿಷೇಕವನ್ನೂ ಮಾಡಿಸಿ ಸುಗ್ರೀವ ನನ್ನು ಕುರಿತು-ಎಲೈ ಮಿತ್ರನೇ ! ಈಗ ಗ್ರೀಷ್ಮ ರ್ತುವು ಬಂದಿರುವುದರಿಂದ ನಾವು ದಂಡಯಾತ್ರೆಗೆ ಹೋಗುವುದನ್ನು ನಿಲ್ಲಿಸಿ ಈ ಗ್ರಿಷ್ಟ ರ್ತುವೂ ವರ್ಷತ್ರವೂ ಕಳೆದು ಹೋಗುವ ವರೆಗೂ ನೀನು ಕಿಂಧಾಪಟ್ಟಣದಲ್ಲಿ ಸುಖವಾಗಿರು. ನಾನು ಈ ಋಷ್ಯಮಕಗಿರಿಯಲ್ಲಿ ಲಕ್ಷ್ಮಣನೊಡನೆ ವಾಸಮಾಡಿಕೊಂಡಿರುವೆನು. ಈ ನಾಲ್ಕು ತಿಂಗಳುಗಳು ಮುಗಿದಮೇಲೆ ದಯೆಯಿಟ್ಟು ನೀನು ಹೇಳಿದ ಪ್ರಕಾರ ನನಗೆ ಸಹಾಯ ಮಾಡಬೇಕೆಂದು ಹೇಳಲು ಸುಗ್ರೀವನು ಶ್ರೀ ರಾಮನಿಗೆ ನಮಸ್ಕರಿಸಿ ತನ್ನ ಪರಿವಾರ ದೊಡನೆ ಕೂಡಿ ಕಿಂಧೆಗೆ ಹೋಗಿ ಸುಖದಿಂದಿದ್ದನು. ಇತ್ತಲಾ ರಾಮನು ಖುಷ್ಯಮಕಾದ್ರಿಯಲ್ಲಿ ಲಕ್ಷ್ಮಣನೊಡನೆ ವಾಸಮಾಡಿ ಕೊಂಡಿರುತ್ತ ಗ್ರೀಷ್ಮ ರ್ತು ಬಂದುದನ್ನು ನೋಡಿ-ಎಲೈ ಲಕ್ಷ್ಮಣನೇ ! ಈ ಕಾಲದಲ್ಲಿ ಜನರು ಹಾಸಿಕೊಳ್ಳುವುದಕ್ಕೆ ಹಾಸಿಗೆಯನ್ನೂ ಹೊದೆದುಕೊಳ್ಳುವುದಕ್ಕೆ ಹೊದಿಕೆ ಯನ್ನೂ ಪೂರ್ಣವಾಗಿ ಅಪೇಕ್ಷಿಸದೆ ಮರದ ನೆಳಲುಗಳಲ್ಲಿ ಮಲಗಿ ಸುಖವಾಗಿ ನಿದ್ರಿ ಸುತ್ತಿರುವರು. ಈ ಕಾಲದಲ್ಲಿ ನಾಲ್ಕು ಆಶ್ರಮಗಳವರೂ ತೊರೆ ಕೆರೆ ಕಟ್ಟೆ ಕೊಳ ಕಾಲುವೆಗಳಲ್ಲಿ ತ್ರಿಕಾಲಗಳಲ್ಲೂ ಬಹಳ ಸಂತೋಷದಿಂದ ಮೂಾಯುತ್ತಿರುವರು. ಈ ನಿದಾಘಕಾಲದ ಹಗಲುಗಳು ಬಲು ಚೆಲುವಾಗಿ ಭೋಗ್ಯವಾಗಿರುವುವು. ಪುಣ್ಯಾತ್ಮ ರಾದವರು ದಾರಿಗಳಲ್ಲಿ ಅರವಟ್ಟಿಗೆಗಳನ್ನಿಡಿಸಿ ಪರಿಶುದ್ದರ ಮನಸ್ಸಿನ ಹಾಗೆ ನಿರ್ಮಲ ವಾಗಿಯ ಚಂದ್ರಿಕೆಯಂತೆ ಶೀತಲವಾಗಿಯ ಸತ್ಯವಾಕ್ಯದಂತೆ ಮಧುರವಾಗಿಯ ಇರುವ ನೀರುಗಳನ್ನೂ ನಿಂಬೆಯ ಹುಳಿ ಶುಂಠಿ ಏಲಕ್ಕಿ ಕರಿಬೇವು ಇವುಗಳಿಂದ ಕೂಡಿದ ನಿರ್ಮಜ್ಜಿಗೆಯನ್ನೂ ಎಳೆನೀರುಗಳನ್ನೂ ದಣಿದುಬಂದ ದಾರಿಗರಿಗೆ ಕುಡಿಯುವುದ ಕ್ರೋಸ್ಕರ ಕೊಟ್ಟು ಮೈಗಳಿಗೆ ಘನಸಾರಮಿಶ್ರವಾದ ಶ್ರೀಗಂಧವನ್ನು ಪೂಸಿ ಜಾಜಿ ಪಾದರಿ ಮೊದಲಾದ ಪುಷ್ಪಮಾಲಿಕೆಗಳನ್ನು ಹಾಕಿ ಅವರ ಮಾರ್ಗಾಯಾಸವನ್ನು ಸರಿ ಹರಿಸಿ ಆದರಿಸುತ್ತಿರುವರು. ಸೂರ್ಯಾಶ್ಯಗಳು ಬಿಸಿಲಿನಿಂದ ಬಳಲಿ ರಥವನ್ನು ಎಳೆಯ ಲಾರದೆ ಮಂದವಾಗಿ ನಡೆಯುವುದರಿಂದಲೋ ಎಂಬಂತೆ ಈ ಕಾಲದ ಹಗಲುಗಳು ದೀರ್ಘವಾಗಿರುವುವು. ಹಕ್ಕಿಗಳು ಮಧ್ಯಾನ ಕಾಲದಲ್ಲಿ ಬಿಸಿಲಿನ ಬೇಗೆಗಂಜಿ ತಮ್ಮ ತಮ್ಮ ಗೂಡುಗಳನ್ನು ಬಿಟ್ಟು ಹೊರಗೆ ಹೊರಡದಿರುವುವು. ಭೋಗಿಗಳಾಗಿ ಸೀಪು ರುಷರು ಉನ್ನತವಾದ ಗಿರಿಶಿಖರಗಳಲ್ಲೂ ವಾಯು ಸಂಚಾರಕ್ಕೆ ಯೋಗ್ಯವಾಗಿ ಕಿಟ ಕಿಗಳಿಂದ ಕೂಡಿರುವ ಮನೆಗಳಲ್ಲೂ ಉನ್ನತವಾದ ಉಪ್ಪರಿಗೆಗಳ ಅಗ್ರಪ್ರದೇಶಗಳಲ್ಲೂ ಟಿ