ಪುಟ:ಕಥಾಸಂಗ್ರಹ ಸಂಪುಟ ೨.djvu/೮೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸುಗ್ರೀವಸಖ್ಯದ ಕಥೆ ನಾದಿ ಜಲಸ್ಥಾನ ಸಮಿಾಪದಲ್ಲೂ ವಾಸಮಾಡುತ್ತಿರುವರು. ಪ್ರಜೆಗಳು ತಮ್ಮ ತಮ್ಮ ದನಕರುಗಳನ್ನು ಅನೇಕವಾದ ವೃಕ್ಷಗಳ ನೆಳಲುಗಳಿಂದ ಕೂಡಿರುವ ತೊರೆ ಹಳ್ಳ ಮೊದಲಾದುವುಗಳ ದಡಗಳಲ್ಲಿ ಬಿಟ್ಟು ಕೊಂಡು ಹುಲ್ಲುಗಳನ್ನು ಮೇಯಿಸುತ್ತ ನೀರು ಗಳನ್ನು ಕುಡಿಸುತ್ತ ದಗೆಯ ಹತ್ತದ ಹಾಗೆ ಕಾಪಾಡುತ್ತಿರುವರು. ಮತ್ತು ಈ ಕಾಲದ ಸಂಜೆಹೊತ್ತುಗಳಲ್ಲಿ ಶೈತ್ಯ ಸೌರಭ್ಯ ಮಾಂದ್ಯಯುಕ್ತವಾದ ಗಾಳಿಯು ಬೀಸುತ್ತ ಜನರನ್ನು ಸಂತೋಷಪಡಿಸುತ್ತಿರುವುದು. ಜನರು ಜಲಕ್ರೀಡೆಯಲ್ಲೂ ಚೀನಾಂಬರ ಗಳನ್ನು ಧರಿಸುವುದರಲ್ಲೂ ಬಹಳ ಆಸಕ್ತರಾಗಿರುವರು ಎಂದು ಹೇಳುತ್ತ ಜೈಜ್ಞಾ ಪಾಢಮಾಸಗಳನ್ನು ಕಳೆಯುತ್ತಿದ್ದನು. ಆ ಮೇಲೆ ರಾಮನು ವರ್ಷ ರ್ತುವ ಬಂದುದನ್ನು ನೋಡಿ ಲಕ್ಷ್ಮಣನನ್ನು ಕುರಿತು-ಎಲೈ ತಮ್ಮನೇ ! ಇದೋ ನೋಡು, ಆಕಾಶವು ಪರ್ವತಗಳಿಗೆ ಸಮಾನವಾ ಗಿರುವ ಕಪಾದ ಮುಗಿಲುಗಳಿಂದ ವ್ಯಾಪ್ತವಾಗಿದೆ. ಮೊದಲು ಸೂರ್ಯಕಿರಣಗಳ ಮುಖಾಂತರವಾಗಿ ಸಮುದ್ರದ ಕಾರೋದಕವನ್ನು ಕುಡಿದು ಬಂದು ಭೂಲೋಕ ಕೈಲ್ಲಾ ನಿರ್ಮಲೋದಕಗಳನ್ನು ಕೊಡುತ್ತಿರುವ ಮೇಘಗಳು ಸ್ವಲ್ನೋಪಕಾರವನ್ನು ಹೊಂದಿ ಮಹೋಪಕಾರವನ್ನು ಮಾಡುವ ಸುಜನರಂತೆ ' ಒಪ್ಪುತ್ತಿರುವುವು. ಸುಕೃತಿ ಗಳು ಸ್ವರ್ಗಲೋಕಕ್ಕೆ ಹೋಗುವುದಕ್ಕೋಸ್ಕರ ಪ್ರತ್ಯಕ್ಷವಾಗಿ ಕಾಣುತ್ತಿರುವ ಸೋಪಾನಪಂಗ್ತಿಯೋ ಎಂಬಂತೆ ಆಕಾಶದಲ್ಲಿ ಮೇಘಮಾಲೆಗಳು ವಿರಾಜಿಸುತ್ತಿರು ವುವು. ಸಂಧ್ಯಾ ಕಾಲದ ಕೆಂಪು ಬಣ್ಣದಿಂದಲೂ ಮೇಘಗಳ ಬಿಳುಪ ಕಪ್ಪು ಬಣ್ಣಗ ಳಿಂದಲೂ ಕೂಡಿದ ಅಂತರಿಕ್ಷವು ಗಗನ ಲಕ್ಷ್ಮಿಯು ಧರಿಸಿದ ಚಿತ್ರಾ೦ಬರದಂತಿರು ವುದು. ಮೇಘಗಳ ಗುಂಪಿನತ್ತಣಿಂದ ಹೊರಟು ವಿವಿಧ ಕುಸುಮಗಳ ಸುಗಂಧವನ್ನು ಧರಿಸಿ ಸುಳಿಯುತ್ತಿರುವ ವಾಯುವು ಆಹ್ಲಾದಕರವಾಗಿದೆ. ಮೇಘವೆಂಬ ಕೃಷ್ಣಾಜಿನ ವನೂ ಜಲಧಾರೆಗಳೆಂಬ ಯ ಆ ಸೂತ್ರವನ್ನೂ ಧರಿಸಿ ತಮ್ಮ ಗುಹೆಗಳೆಂ. ಹೊಟ್ಟೆಗೆ ಇಲ್ಲಿ ತಡೆಯಲ್ಪಟ್ಟ ವಾಯುವೆಂಬ ಪ್ರಾಣವಾಯುಗಳುಳ್ಳ ಪರ್ವತಗಳು ಯೋಗಿಗಳ ಹಾಗೆ ಕಾಣುತ್ತಿವೆ. ಪರಹಿತ ಜನ್ನಿಗಳಾದ ಮೇಘಗಳು ತಮ್ಮ ಮಿಂಚೆಂಬ ಕಡೆಗೆ ಸ್ಫೋಟದಿಂದ ಜಗತ್ತನ್ನು ನೋಡಿ ಪರೋಪಕಾರಕರಣದಲ್ಲಿ ನಮ್ಮ ಮು೦ದಾರುಂಟು ಎಂದು ಆರ್ಭಟಿಸುತ್ತಿವೆಯೋ ಎಂಬಂತೆ ಘನಗರ್ಜಿತವುಂಟಾಗಿ ಸರ್ವಲೋಕಜೀವನ ವಾದ ರಸವನ್ನು ಸುರಿಸುತ್ತಿವೆಯೋ ಎಂಬಂತೆ ಎಡೆಬಿಡದೆ ಮಳೆಯನ್ನು ಸುರಿಸುತ್ತಿರು ವುವು. ಪ್ರೇಮಮಾರ್ಗದಲ್ಲಿ ವಿಹರಿಸುತ್ತಿರುವ ವಿದ್ಯಾಧರಾಂಗನೆಯರ ಕ೦ಠಗತವಾದ ಮುತ್ತಿನ ಹಾರಗಳು ಮೇಘಗಳಿಗೆ ಸಿಕ್ಕಿದುದುಂದ ಹರಿದು ಮುತ್ತುಗಳು ಕೆಳಗೆ ಉದುರುತ್ತಿವೆಯೋ ಎಂಬಂತೆ ಆಕಾಶದಿಂದ ಆನೆಕಲ್ಲುಗಳು ಸುರಿಯುತ್ತಿವೆ. ಅಂತ ರಿಕ್ಷಮಾರ್ಗದಲ್ಲಿ ಬೆಳ್ಳಕ್ಕಿಗಳು ಗುಂಪುಗುಂಪಾಗಿ ಹಾರಿಯಾಡುತ್ತಿವೆ. ತಾವರೆದಂಟು ಗಳನ್ನು ಎತ್ತಿ ಕೊಂಡು ಮಾನಸ ಸರಸ್ಸನ್ನು ಕುರಿತು ಹೋಗುತ್ತಿರುವ ಹಂಸಪಕ್ಷಿಗಳು ಬುತ್ತಿಯನ್ನು ಕಟ್ಟಿ ತೆಗೆದು ಕೊಂಡು ಹೋಗುತ್ತಿರುವ ಮಾರ್ಗಸ್ಟರನ್ನು ಹೋಲುತ್ತಿವೆ. ಚಾತಕಪಕ್ಷಿಗಳು ಬಾಯಿಯನ್ನು ತೆರೆದುಕೊಂಡು ಆಕಾಶದಲ್ಲಿ ಹಾರುತ್ತ ನವಮೇಘ £'