ಪುಟ:ಕಥಾಸಂಗ್ರಹ ಸಂಪುಟ ೨.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

76 ಕಥಾಸಂಗ್ರಹ-೪ ನೆಯ ಭಾಗ ಗಳ ಜಲಬಿಂದುಗಳನ್ನು ಕುಡಿದು ತೃಪ್ತಿ ಹೊಂದುತ್ತಿವೆ. ಆನೆಗಳೆಲ್ಲಾ ಮಳೆಯಿಂದ ನೆನೆ ದುವುಗಳಾಗಿ ಮೈಯುಬ್ಬಿ ಸಂತೋಷದಿಂದ ಕೊಬ್ಬಿರುವುವು. ಹೊಳೆಗಳು ಕೆಂಪಾದ ಹೊಸನೀರುಗಳಿಂದ ತುಂಬಿ ಎರಡು ದಡಗಳನ್ನೂ ಅತಿಕ್ರಮಿಸಿ ಪ್ರವಹಿಸುತ್ತಿರುವುವು. ಭೂಮಿಯೆಲ್ಲವೂ ನೀರಿನಿಂದಲೂ ಕೆಸರಿನಿಂದಲೂ ವ್ಯಾಪ್ತವಾಗಿರುವುದರಿಂದ ಸಂಚರಿಸು ವುದು ಅಶಕ್ಯವೆಂದು ಜನರು ವಿಶೇಷವಾಗಿ ಹೊರಗೆ ಹೊರಡದೆ ಮನೆಯಲ್ಲೇ ವಾಸ ಮಾಡಿಕೊಂಡಿರುವರು. ಅರಸುಗಳು ಶತ್ರುರಾಜರ ಮೇಲೆ ದಂಡಯಾತ್ರೆಗೆ ಹೊರಡು ವುದನ್ನು ನಿಲ್ಲಿಸಿ ಸ್ವಂತರಾಜ್ಯದಲ್ಲೇ ಸುಖದಿಂದ ವಾಸಮಾಡಿಕೊಂಡಿರುವರು. ನವಿಲು ಗಳು ಮೇಘಧ್ವನಿಯನ್ನು ಕೇಳಿ ಸಂತೋಷದಿಂದ ಕೇಕಾರಾವವನ್ನು ಮಾಡುತ್ತ ದೀರ್ಘವಾದ ಗರಿಗಳನ್ನು ಮೇಲಕ್ಕೆತ್ತಿ ಅಗಲಿಸಿಕೊಂಡು ನರ್ತನ ಮಾಡುತ್ತಿರುವುವು. ಭಿಕ್ಷು ಕರು ಗೊರಗುಗಳನ್ನೂ ಕಂಬಳಿಗಳ ಗೊಂಗಡಿಗಳನ್ನೂ ಹಾಕಿಕೊಂಡು ಕೊಡೆ ಗಳನ್ನು ಹಿಡಿದು ಮರಧಾವುಗೆಗಳನ್ನು ಮೆಟ್ಟುಕೊಂಡು ಭಿಕ್ಷ ಕ್ಕೆ ತಿರುಗುತ್ತ ಬಹಳ ಕಷ್ಟಪಡುತ್ತಿರುವರು. ಪ್ರಜೆಗಳು ಸಂತೋಷದಿಂದ ಹೊಲಗಳನ್ನು ಉತ್ತು ಬಿತ್ತಿ ಹರತೆಗಳನ್ನು ಮಾಡಿ ಕಳೆ ಕೀಳು, ವ್ಯವಸಾಯ ಕೃತ್ಯಗಳಲ್ಲಿ ತೊಡಗಿರುವರು. ಮತ್ತು ಗದ್ದೆಗಳಿಗೆಲ್ಲಾ ನೀರು ಕಟ್ಟಿ ಅಟ್ಟು ಕೈಗಳನ್ನು ತು ಸೊಫ್ಟ್ ಗೊಬ್ಬರಗಳನ್ನು ತುಳಿದು ಮೊದಲು ಅಗೆ ಹಾಕಿದ್ದ ಪೈರುಗಳನ್ನು ಕಿತ್ತು ತಂದು ಕೆಸರ್ಗಗಳಲ್ಲಿ ನೆಟ್ಟು ಆ ಪೈರುಗಳಿಗೆ ಹದವರಿತು ನೀರನ್ನು ಹಾಯಿಸುತ್ತ ಒಂದು ಗಳಿಗೆಯಾದರೂ ವಿರಾಮವಿ ಲ್ಲದೆ ಆರಂಭದ ಕೆಲಸಗಳನ್ನು ನಡೆಸುತ್ತಿರುವರು. ಸೂರ್ಯಚಂದ್ರರು ಮೋಡಗಳಿಂದ ಮುಚ್ಚಲ್ಪಟ್ಟ ವರಾಗಿರುವರು. ಒಂದುವೇಳೆ ಕಾಣಿಸಿದಾಗ ಚೆನ್ನಾಗಿ ಪ್ರಕಾಶಿಸುವು ದಿಲ್ಲ. ಈ ಮಳೆಗಾಲವು ಐಶ್ವರ್ಯವಂತರಿಗೆ ಬಹಳ ಸುಖದಾಯಕವಾಗಿಯ ಬಡ ವರಿಗೆ ಬಹಳ ಕಷ್ಟದಾಯಕವಾಗಿಯೂ ಇರುವುದು ಎಂದು ಹೇಳುತ್ತ ಸೀತೆಯನ್ನು ನೆನಸಿಕೊಂಡು ಚಿಂತೆಪಡುತ್ತ ಶ್ರಾವಣ ಭಾದ್ರಪದಗಳೆಂಬ ಎರಡು ತಿಂಗಳುಗಳನ್ನು ಕಳೆಯುತ್ತಿದ್ದನು. ತರುವಾಯ ರಾಮನು ಲಕ್ಷ್ಮಣನನ್ನು ನೋಡಿ-ಎಲೆ ತಮ್ಮ ನೆ ! ನೋಡು. ಶರತ್ಕಾಲವು ಪ್ರಾಪ್ತವಾಯಿತು. ಆಕಾಶವು ಬಿಳು ಸೇರಿತು. ಚಂದ್ರನು ಬಹಳ ನಿರ್ಮ ಲತೆಯುಳ್ಳವನಾಗಿರುವನು. ಈ ಶರತ್ಕಾಲದ ರಾತ್ರಿಗಳು ಬೆಳುದಿಂಗಳಿಂದ ಮನೋ ಹರವಾಗಿರುವುವು. ಹೊಳೆಗಳೆಲ್ಲಾ ಸ್ವಲ್ಪ ಪ್ರವಾಹವುಳ್ಳುವುಗಳಾಗಿ ನಿರ್ಮಲವಾದ ಉದಕಗಳಿಂದ ಕೂಡಿರುವುವು. ಅರಸುಗಳು ವಿಜಯಪ್ರಯಾಣಕ್ಕೆ ಸನ್ನದ್ಧರಾಗಿರುತ್ತಿ ರುವರು. ಇಂಥ ಕಾಲದಲ್ಲಿ ನಮ್ಮ ಪ್ರಿಯಸಖನಾದ ಸುಗ್ರೀವನು ನಮ್ಮನ್ನೂ ನಾವು ಮಾಡಿದ ಉಪಕಾರವನ್ನೂ ಮರೆತು ಹತಶತ್ರುವಾಗಿ ಕಾಮವಿಕಾರವನ್ನು ಹೊಂದಿ ಕಿಂಧೆಯಲ್ಲಿ ತಾನು ಮಾತ್ರ ಸುಖವಾಗಿರುತ್ತಿರುವನು. ಈಗಲೇ ನೀನು ಹೋಗಿ ಎಚ್ಚರಿಸು. ಆತನು ಕೃತಜ್ಞನಾಗಿ ನಿನ್ನ ಸಂಗಡ ಬಂದರೆ ಸಮ. ರಾಜ್ಯ ಮದದಿಂದ ಮತ್ಯನಾಗಿದ್ದರೆ ಅವನನ್ನು ಕೊಂದು ವಾಲಿಯ ಮಗನಾದ ಅಂಗದನಿಗೆ ಕಪಿರಾಜ್ಯಾಭಿ ಷೇಕವನ್ನು ಮಾಡಿ ಸೇನೆಯೊಡನೆ ಅವನನ್ನು ಕರೆದುಕೊಂಡು ಬರುವವನಾಗು ಎಂದು ಹೇಳಿ ಕಳುಹಿಸಿದನು.