ಪುಟ:ಕಥಾಸಂಗ್ರಹ ಸಂಪುಟ ೨.djvu/೮೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


78 ಕಥಾಸಂಗ್ರಹ-೪ ನೆಯ ಭಾಗ ಗವಾಕ್ಷನೆಂಬ ಕಪಿಸೇನಾನಾಯಕನು ತನ್ನ ಗೋಲಾಂಗೂಲಸೇನೆಗಳನ್ನು ರಘುನಾಥ ನಿಗೆ ತೋರಿಸಿದನು. ಅದರಂತೆ ಧೂಮ ಚಾಂಬವಂತರೆಂಬವರು ತಮ್ಮ ಕರಡಿಗಳ ಸೇನೆಗಳನ್ನೂ ನೀಲ ಸನಸರೆಂಬುವರು ತಮ್ಮ ಪ್ರಸಿಯ ಸೇನೆಗಳನ್ನೂ ತೋರಿಸಿದರು. ಗವಯ ದರೀಮುಖ ಯಧಪ ಗಜ ಗಂಧಮಾದನ ಯುವರಾಜನಾದ ಅ೦ಗದ ಇಂದ್ರಜಾನು ರಂಭ ದುರ್ಮುಖ ಹನುಮಂತ ನಳ ದಧಿಮುಖ ಶರಭ ಕುಮುದರೆಂ ಬುವರೂ ಇನ್ನೂ ಅನೇಕ ಕಪಿಸೇನಾಧಿಪತಿಗಳೂ ರಾಮನಿಗೆ ತಮ್ಮ ತಮ್ಮ ಸೇವೆಗಳನ್ನು ತೋರಿಸಿ ಕೈಗಳನ್ನು ಮುಗಿದರು. ಆಗ ಶ್ರೀರಾಮನು ಆ ಸೇನಾಪತಿಗಳನ್ನೂ ಅವರವರ ತೇಜಸ್ಸುಗಳನ್ನೂ ಆಕೃತಿಗಳನ್ನೂ ಕೊಬ್ಬನ್ನೂ ನೋಡಿ ಬಹಳ ಸಂತೋಷಪಟ್ಟು ಅವರನ್ನೆಲ್ಲಾ ಆಲಿಂಗನ ಹಸ್ತಲಾಘವ ಕುಶಲವಚನಾಲೋಕನಗಳಿಂದ ಸನ್ಮಾನಿಸಿ ಸುಗ್ರೀವನನ್ನು ಆಲಿಂಗಿಸಿ ಕೊಂಡು ಎಲೈ ಮಿತ್ರನೆ ! ಈ ನಿನ್ನ ಸೇನೆಗಳ ಸಹಾಯದಿಂದ ಸಕಲಲೋಕಗಳನ್ನೂ ಜಯಿಸಬಲ್ಲೆನು. ಹೀಗಿರುವಲ್ಲಿ ರಾವಣನೆಷ್ಟುಮಾತ್ರದವನು ? ಆ ದುಷ್ಕನು ಎಲ್ಲಿರು ವನೋ ? ಅದನ್ನು ಗೊತ್ತು ಮಾಡಿಸಿ ಆ ಸುದ್ದಿಯನ್ನು ತರಿಸಿದರೆ ಆ ಮೇಲೆ ಮುಂದಣ ಕಾರ್ಯವನ್ನು ಯೋಚಿಸಬಹುದು. ಆ ಕೆಲಸಕ್ಕೆ ಕಪಿಸೇನಾಪತಿಗಳನ್ನು ನೇಮಿಸು ಅಂದನು. ಆ ಕೂಡಲೇ ಸುಗ್ರೀವನು ರಾಮಲಕ್ಷ್ಮಣರ ಮುಂದೆಯೇ ಪೂರ್ವದಿಕ್ಕಿಗೆ ವಿನತನೆಂಒ ಕಪಿಸೇನಾಪತಿಯನ್ನೂ ದಕ್ಷಿಣದಿಕ್ಕಿಗೆ ನೀಲ ಹನುಮಂತ ಬ್ರಹ್ಮನ ಮಗ ನಾದ ಜಾಂಬವಂತ ಸುಹೋತ್ರ ಗಜ ಗವಾಕ್ಷ ಗವಯ ಋಷಭ ಮೈ೦ದ ದ್ವಿವಿದ ವಿಜಯ ಗಂಧಮಾದನ ಉಲ್ಲಾ ಮುಖ ಅಂಗದ ಇವರೇ ಮೊದಲಾದ ವಾನರ ಶ್ರೇಷ್ಠ ರನ್ನೂ ಉತ್ತರದಿಕ್ಕಿಗೆ ತಾರೆಯ ತಂದೆಯಾದ ಸುಷೇಣನನ್ನೂ ಪಡುವಣ ದಿಕ್ಕಿಗೆ ಶತಬಲಿಯೆಂಬ ಕವಿನಾಯಕನನ್ನೂ ನೇಮಿಸಿ ನೀವೆಲ್ಲ ರೂ ನಿಮ್ಮ ನಿಮ್ಮ ಸೇನೆಗಳೊ ಡನೆ ಹೊರಟುಹೋಗಿ ಒಂದು ತಿಂಗಳೊಳಗೆ ನಿಮ್ಮ ನಿಮ್ಮ ದಿಕ್ಕುಗಳ ಕಡೆಯವರೆಗೂ ಆಕಳ ಹೆಜ್ಜೆಯನ್ನು ಸ್ಥಳವನ್ನಾದರೂ ಬಿಡದೆ ಹುಡುಕಿ ಸೀತೆಯನ್ನೂ ರಾವಣನನ್ನು ಗೊತ್ತು ಮಾಡಿಕೊಂಡು ಬರಬೇಕು. ಹಾಗೆ ಬಾರದೆ ತಿಂಗಳು ಮುಗಿದ ಮೇಲೆ ಬಂದ ವರಿಗೆ ಮರಣಶಿಕ್ಷೆಯನ್ನು ವಿಧಿಸುವೆನೆಂದು ಅಪ್ಪಣೆಯನ್ನು ಕೊಟ್ಟು ಕಳುಹಿಸಲು ಅದೇ ಮೇರೆಗೆ ಅವರೆಲ್ಲರೂ ತಮ್ಮ ತಮ್ಮ ಬಲಗಳೊಡನೆ ಕೂಡಿ ಹೊರಟುಹೋದರು. ತರುವಾಯ ಪೂರ್ವಪಶ್ಚಿಮೋತ್ತರ ದಿಕ್ಕುಗಳಿಗೆ ನೇಮಿಸಲ್ಪಟ್ಟಿದ್ದ ವಿನತ ಶತ ಬಲಿ ಸುಷೇಣರೆಂಬ ಕಪಿನಾಯಕರು ತಮ್ಮೊಡೆಯನಾದ ಸುಗ್ರೀವನು ಕೂರವಾದ ಆಜ್ಞೆಯುಳ್ಳವನೆಂಬ ಭಯವುಳ್ಳವರಾದುದರಿಂದ ಬಹು ತ್ವರಿತದಿಂದ ಸೀತಾರಾವಣ ರನ್ನು ಹುಡುಕಿ ಎಲ್ಲೂ ಕಾಣದೆ ತಿಂಗಳು ಮುಗಿಯುವುದರೊಳಗಾಗಿ ಸುಗ್ರೀವನ ಬಳಿಗೆ ಬಂದು ನಾವು ಹೋಗಿದ್ದ ಮರು ದಿಕ್ಕುಗಳಲ್ಲೂ ಸೀತಾರಾವಣರಿಲ್ಲ ವೆಂದು ಹೇಳಿದರು. ಇತ್ತ ದಕ್ಷಿಣದಿಕ್ಕಿಗೆ ನೇಮಿಸಲ್ಪಟ್ಟಿದ್ದ ನೀಲ ಅ೦ಗದ ಹನುಮಂತ ಜಾಂಬವಂತರೇ ಮೊದಲಾದವರು ಋಷ್ಯಮಕಾದ್ರಿಯಿಂದ ಹೊರಟು ವಿಂಧ್ಯಪರ್ವ ತವನ್ನು ಸೇರಿ ಅದರ ತಪ್ಪಲುಗಳಲ್ಲೂ ಗುಹೆಗಳಲ್ಲೂ ಬಹಳವಾಗಿ ಹುಡುಕಿ ಹಸಿವು