ಪುಟ:ಕಥಾಸಂಗ್ರಹ ಸಂಪುಟ ೨.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಜನೇಯನು ಸೀತೆಯನ್ನು ಕಂಡು ಲಂಕಾಪಟ್ಟಣವನ್ನು ಸುಟ್ಟು ದು 81 5. ANJANEYA DISCOVERS SITE AND BURNS THE CITY OF LANKA, ೫. ಅ೦ಜನೇಯನು ಸೀತೆಯನ್ನು ಕಂಡು ಲಂಕಾಪಟ್ಟಣವನ್ನು ಸುಟ್ಟುದು. ಅನಂತರದಲ್ಲಿ ಕಪಿಸೇನಾಪತಿಗಳಾದ ಜಾಂಬವದಂಗದಾಂಜನೇಯಾದಿಗಳು ಘೋರತರವಾದ ತೆರೆಗಳ ಆರ್ಭಟದಿಂದ ಕೂಡಿ ಒಪ್ಪುತ್ತಿರುವ ಮಹಾ ಸಾಗರವನ್ನು ನೋಡಿ ವ್ಯಾಕುಲಚಿತ್ತರಾಗಿ ಇದನ್ನು ದಾಟುವುದೂ ಒ೦ಕೆಯನ್ನು ಸೇರುವುದೂ ಸೀತಾರಾವಣರನ್ನು ಕಂಡು ಹಿಂದಿರುಗಿ ಬರುವುದೂ ಹೇಗೆ ? ಎಂದು ಕರತಲಗಳಲ್ಲಿ ಕೆನ್ನೆ ಗಳನ್ನಿಟ್ಟುಕೊಂಡು ಕಂಗೆಟ್ಟು ಮುಂಗಾಣದೆ ಕುಳಿತುಕೊಂಡಿರಲು ಆಗ ಜಾಂಬ ವಂತನು ಸಮಸ್ತ ಕಪಿಗಳನ್ನೂ ನೋಡಿ---ಎಲೈ ಕಪಿವೀರರೇ ! ದೇವತೆಗಳಿಂದಲೂ ದಾಟಲಶಕ್ಯವಾದ ಈ ಸಮುದ್ರವನ್ನು ದಾಟಿ ಹಿಂದಿರುಗಿ ಬರುವಂಥ ಶೂರರು ಈ ನಮ್ಮ ಕಪಿಸೇನೆಯೊಳಗೆ ಯಾರಿದ್ದಾರೆ ? ಎಂದು ಕೇಳಲು ಆಗ ಯುವರಾಜನಾದ ಅಂಗದನೆದ್ದು --ಸ್ವಾಮಿಾ ಶಿವನಂತಿರುವ ನಿಮ್ಮ ಅನುಗ್ರಹವು ನಮಗಿರುವಲ್ಲಿ ಈ ಸಮುದ್ರವನ್ನು ದಾಟುವುದು ಎಷ್ಟರ ಕೆಲಸ ? ನಮ್ಮ ಸೇನೆಯೊಳಗೆ ಈ ಸಮುದ್ರವ ನ್ನೆಲ್ಲಾ ಒಂದೇ ಸಾರಿ ಕುಡಿದು ಬಿಡುವಂಥ ಮಹಾ ಭಟರಿದ್ದಾರೆ ಎಂದು ಹೇಳಿ ಕಪಿ ಗಳ ಮುಖಗಳನ್ನು ನೋಡಲು ಕೂಡಲೆ ಕಪಿಗಳೆಲ್ಲಾ ಎದ್ದು ಭುಜಗಳನ್ನು ಅಪ್ಪಳಿಸಿ ಕೊಂಡು ಹಲ್ಕಿರಿದು ಆರ್ಭಟಿಸಲು ಜಾಂಬವಂತನು-ಹೋ ! ಹೋ ! ಸಹಿಸಿರಿ ! ಲೋಕತ್ರಯದಲ್ಲಿಯೂ ನಿಮ್ಮಂಥ ವೀರರಿಲ್ಲ ! ಆದರೆ ಸಮುದ್ರವನ್ನು ದಾಟಿ ಲಂಕೆಗೆ ಹೋಗಿ ಬರಬೇಕಾದರೆ ನಾನಾವಿಧೋಪಾಯಗಳನ್ನು ಮಾಡಬೇಕು. ಅಲ್ಲದೆ ಜಾನಕಿ ಯನ್ನು ಕಂಡು ಬರಬೇಕು. ನಿಮ್ಮಲ್ಲಿ ಇಷ್ಟು ಸಾಮರ್ಥ್ಯವು ಯಾರಿಗುಂಟು ? ಎಂದು ಕೇಳಲು ಆಗ ಕಪಿವೀರರೆಲ್ಲಾ ಒಟ್ಟಾಗಿ ಎದ್ದು ನಿಂತು ತಮ್ಮ ತಮ್ಮ ಸಾಮರ್ಥ್ಯ ವನ್ನೆಲ್ಲಾ ಹೇಳಿಕೊಳ್ಳಲು ಜಾಂಬವಂತನು ನಾನು ಯೌವನಸ್ಥನಾಗಿದ್ದ ಕಾಲ ದಲ್ಲಿ ನನಗೆ ಈ ಕಾರ್ಯವು ಲಕ್ಷ್ಯವಾಗಿರಲಿಲ್ಲ. ಈಗ ಸಂಪೂರ್ಣ ವೃದ್ಧನಾಗಿದ್ದೇನೆ. ಆದರೂ ಈಗ ಶತಯೋಜನದೂರವನ್ನು ಹಾರಬಲ್ಲೆನು. ಪುನಃ ನೂರು ಯೋಜನ ವನ್ನು ಹಾರಿ ಬರುವುದಕ್ಕೆ ಶಕ್ತಿಯುಂಟಾಗುವುದೋ ಇಲ್ಲವೋ ಎಂದು ಸಂದೇಹವು ಳ್ಳವನಾಗಿದ್ದೇನೆ ಎನ್ನಲು ಆಗ ಅಂಗದನು-ನೀವೆಲ್ಲರೂ ನೋಡುತ್ತ ಇಲ್ಲಿದ್ದರೆ ನಾನು ಈ ನೂರು ಯೋಜನ ದೂರವನ್ನೂ ದಾಟಿಹೋಗಿ ಸೀತಾರಾವಣರನ್ನು ಕಂಡು ತಿರುಗಿ ಬರುವೆನೆಂದು ಹೇಳಿದುದಕ್ಕೆ ಜಾಂಬವಂತನು--ನಾವೆಲ್ಲರೂ ಇದ್ದುಕೊಂಡು ದೊರೆಯ ಮಗನಾಗಿ ಯುವರಾಜನಾದ ನಿನ್ನೊಬ್ಬನನ್ನೇ ಹಗೆಯ ಪಟ್ಟಣಕ್ಕೆ ಕಳುಹಿಸುವುದು ಧರ್ಮವಲ್ಲ ವು. ಮತ್ತು ರಾಮಚಂದ್ರನೂ ಸುಗ್ರೀವನೂ ಈ ಕಾರ್ಯವನ್ನು ಒಪ್ಪ ಲಾರರು ಎಂದು ಎಲ್ಲರನ್ನೂ ಸಮಾಧಾನಪಡಿಸಿ ಬುದ್ದಿ ಶಕ್ತಿ ಪರಾಕ್ರಮಾದಿಗಳಲ್ಲಿ ಪ್ರಖ್ಯಾತನಾದ ಹನುಮಂತನನ್ನು ನೋಡಿ ಎಲೈ ಮಹಾನುಭಾವನೇ ! ಇಂಥ ವೇಳೆಯಲ್ಲಿ ನೀನು ಒಂದು ಮಾತನ್ನಾದರೂ ಆಡದೆ ಯಾಕೆ ಮೌನದಿಂದಿದ್ದೀಯೇ ? ಈ ಸಮಯದಲ್ಲಿ ಮಹಾವೀರನಾದ ನೀನು ಮನಸ್ಸು ಮಾಡಿದರೆ ಇದೆಷ್ಟರ ಕೆಲಸ ? ನಿನ್ನಿಂದ