ಪುಟ:ಕಥಾಸಂಗ್ರಹ ಸಂಪುಟ ೨.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೪ ನೆಯ ಭಾಗ ಜನ ರಾಕ್ಷಸರು ಬೊಂಬಾಳಗಳನ್ನು ಹಿಡಿದುಕೊಂಡು ಮುಂದೆ ನಡೆದರು. ಆಗ ರಾವಣನು ಪುಷ್ಪಕವನ್ನೇರಿ ಬಂದು ಅಶೋಕವನಮಧ್ಯದಲ್ಲಿಳಿದು ಅತಿ ಶೀಘ್ರದಿಂದ ರಾಕ್ಷಸಿಯರು ತಂದಿಟ್ಟ ಮಣಿಪೀಠದ ಮೇಲೆ ಲೋಕಸುಂದರಿಯಾದ ಮಂಡೋದರಿ ಯೊಡನೆ ಕುಳಿತು ಕೊಳ್ಳಲು ಸೀತಾದೇವಿಯು ತಲೆಯನ್ನು ಬೊಗ್ಗಿಸಿ ಕಣ್ಣುಗಳನ್ನು ಮುಚ್ಚಿಕೊಂಡು ಹೇಮಲತೆಯಂತಿರುವ ತನ್ನ ಶರೀರವನ್ನು ತನ್ನ ತಲೆಗೂದಲಿಂದ ಮುಚ್ಚಿಕೊಂಡು ಭೂಮಿಯನ್ನೇ ನೋಡುತ್ತ ಮನಸ್ಸಿನಲ್ಲಿ ಶ್ರೀರಾಮಚಂದ್ರನ ಪಾದ ಗಳನ್ನೆ ಧ್ಯಾನಿಸುತ್ತಿದ್ದಳು. ಆಗ ಸ್ಮಶಾನದಲ್ಲಿ ತಂದಿಟ್ಟ ದೇವತಾ ಪ್ರತಿಮೆಯಂತಿ ರುವ ಸೀತೆಯ ಬಳಿಗೆ ದುಷ್ಟನಾದ ರಾವಣನು ತನ್ನ ದೂತಿಯರನ್ನು ಕಳುಹಿಸಲು ಅವರು ಬಂದು ಸೀತೆಯ ಮುಂದೆ ನಿಂತುಕೊಂಡು ಹಿತವಚನಗಳನ್ನಾಡಿ ಪರಿಮಳ ತೈಲವನ್ನು ತಂದು ಹೊಳೆಯುತ್ತಿರುವ ಶುದ್ದ ವಸ್ತ್ರಗಳನ್ನು ನೆರಿಹಿಡಿದಿಟ್ಟು ಚಿನ್ನದ ಗುಡಾಣಗಳಲ್ಲಿ ಬಿಸಿನೀರನ್ನು ತಂದಿರಿಸಿ ದಿವ್ಯಸುಗಂಧದ್ರವ್ಯಗಳನ್ನ ರೆದಿಟ್ಟು ಸೀತೆಯನ್ನು ನೋಡಿ- ಎಲೈ ಸೀತೆಯೇ ! ನೀನು ಮೂರು ಲೋಕಗಳಿಗೂ ಗಂಡನಾದ ರಾವಣನ ಮಾತುಗಳನ್ನು ಮಾರಬಹುದೇ ? ದೇವತಾಸ್ತ್ರೀಯರು ಶತ ಜನ್ಮಗಳಲ್ಲಿ ಸದ್ವತಗಳನ್ನು ಮಾಡಿ ಈ ರಾವಣನನ್ನು ವರಿಸುತ್ತಿರುವರಲ್ಲಾ ! ಮೂರು ಲೋಕಗಳಲ್ಲಿಯೂ ಈ ರಾವಣನಿಗೆ ಸಮಾನರಾದ ಪುರುಷಶ್ರೇಷ್ಟರುಂಟೇ ? ಹದಿನಾಲ್ಕು ಲೋಕಗಳ ಒಡೆತ ನವು ಈತನ ವಶದಲ್ಲಿದೆ. ನೀನು ಇಂಥ ಮಹಾತ್ಮನಾದ ರಾವಣನನ್ನು ಅನುಭವಿಸದೆ ಇರಬಹುದೇ ? ದೇವಿಯೇ ಎಂದು ಮಾತನಾಡಿಸುತ್ತಿರುವ ರಾಕ್ಷಸಿಯರ ಮಾತಿಗೆ ಕಿವಿಕೊಡದೆ ಸೀತೆಯು ಒಬ್ಬರನ್ನೂ ಕಣ್ಣಿನಿಂದ ನೋಡದೆ ಹೃದಯದಲ್ಲಿ ರಾಮನನ್ನೇ ಧ್ಯಾನಿಸುತ್ತ ಸುಮ್ಮನಿರಲು ರಾವಣನು ತ್ರಿಜಟಿಯನ್ನು ಕರೆದು--- ಎಲೆ ತ್ರಿಜಟೆಯೇ ! ಸೀತೆಯ ಮನಸ್ಸಿನ ನಿಶ್ಚಯವು ಹೇಗಿರುವುದು ? ನರರಾಜನನ್ನು ಮರೆತು ಬಿಟ್ಟಳೋ ಏನು ? ಎಂದು ಕೇಳಲು ಆಗ ತ್ರಿಜಟೆಯು ರಾವಣನ ಕಿವಿಯಲ್ಲಿ ಏಲೈ ರಾಜೇಂದ್ರನೇ ! ಕೇಳು. ನಾನು ಜಾನಕಿಯ ಮನೋನಿಶ ಯನ್ನು ' ಕುರಿತು ಏನೂ ಹೇಳಲಾರೆನು. ಈ ಸೀತೆಯು ಜಗತ್ತಿನಲ್ಲಿರುವ ಪತಿಭಕ್ಕೆ ಯರಿಗೆಲ್ಲಾ ತಾಯಿಯು. ಲೋಕದ ಪತಿವ್ರತಾಜನರಿಗೆಲ್ಲಾ ಗುರುಪ್ರಾಯಳು. ನಾನು ಲೋಕದಲ್ಲಿ ಬಹುಜನ ರನ್ನು ನೋಡಿದ್ದೇನೆ. ಧುವ ವಸಿಷ್ಠ ಅತ್ರಿ ಗೌತಮ ಇವರು ಮೋಲಾದ ಮುನೀಂದ್ರರ ಪತ್ನಿಯರು ಯಾವ ಭಾಗದಲ್ಲೂ ಈ ಸೀತೆಯನ್ನು ಹೋಲಲಾರರು. ಈಕೆಯು ನಿರಂತರ ದಲ್ಲೂ ಭರ್ತೃಚಿಂತಾಪರಾಯಣಳಾಗಿರುವಳು, ನಾವು ನಮ್ಮ ಬುದ್ಧಿಗೆ ತೋರಿದ ಹಾಗೆಲ್ಲಾ ಹೇಳಿ ನೋಡಿ ಸಾಕಾದೆವು. ಬಹು ಪ್ರಕಾರವಾಗಿ ಬೆದರಿಸಿದೆವು. ಯಾವ ದಕ ಸಾಧ್ಯಳಾಗಳು. ಇನ್ನೂ ಬೇಕಾದರೆ ನೀನೇ ಹೋಗಿ ಮಾತಾಡಿಸಿ ನೋಡು ಎಂದು ಹೇಳಲು ರಾವಣನು ಬಂದು.ಎಲೆ ಸೀತೆಯೇ ! ಇನ್ನೆಷ್ಟು ದಿವಸಗಳ ವರೆಗೂ ಈ ವನದಲ್ಲಿರುತ್ತೀಯೆ ? ನಿನ್ನ ಮನಸ್ಸು ಇನ್ನಾರಲ್ಲಿ ಅನುರಾಗವನ್ನು ಸಂಪಾದಿಸುವುದು ? ಎಲೈ ಸೀತೆಯೇ ! ನಿನಗೆ ಹುಚ್ಚು ಹಿಡಿದೀತು. ನಿನ್ನ ನ್ನು ಇಲ್ಲಿಂದ ಬಿಡಿಸಿಕೊಂಡು ಹೋಗಬೇಕಾದರೆ ಮುಕ್ಕಣ್ಣನಿಗಾದರೂ ಸಾಮರ್ಥ್ಯ ಸಾಲದು.