ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

95 ಆಂಜನೇಯನು ಸೀತೆಯನ್ನು ಕಂಡು ಲಂಕಾಪಟ್ಟಣವನ್ನು ಸುಟ್ಟು ದು 95 ತೇರಾನೆಕುದುರೆಕಾಲಾಳುಗಳನ್ನು ನಿರ್ನಾಮಮಾಡಿ ಆರ್ಭಟಿಸಲು; ಆಗ ಜಂಬುಮಾ ಲಿಯು ರೋಷಾವೇಶವುಳ್ಳವನಾಗಿ ಪ್ರಳಯ ಕಾಲದ ಭರಸಿಡಿಲುದ್ಭವಿಸಿತೋ ಎಂಬ ಹಾಗೆ ಬೊಬ್ಬಿರಿದು ಕುಂತದಿಂದ ಆಂಜನೇಯನನ್ನು ಹೊಡೆಯಲು ;*ಆ ಹನುಮಂತನು ಹಲ್ಲಿ ರಿದು ಮೈಮರೆತು ಪರ್ವತವು ಬಿದ್ದಂತೆ ಬಿದ್ದು ಎರಡು ಗಳಿಗೆಗಳ ಮೇಲೆ ಎದ್ದು ಒಂದು ಹೆಮ್ಮರದಿಂದ ಜಂಬುಮಾಲಿಯನ್ನು ಹೊಡೆಯಲು ; ಅವನಾಸೆಟ್ಟನ್ನು ತಪ್ಪಿ ಸಿಕೊಂಡು ಆಂಜನೇಯನನ್ನು ಶೂಲದಿಂದ ತಿವಿಯಲು ಹನುಮಂತನು ಅತಿ ಕೋಪಾ ಕ್ರಾಂತನಾಗಿ ಆ ದುಷ್ಟ ರಾಕ್ಷಸನ ಮುಂದಲೆಯನ್ನು ಹಿಡಿದು ಮೇಲೆತ್ತಿ ನೆಲಕ್ಕೆ ಅಪ್ಪ ಳಿಸಿ ಕಾಲಲ್ಲಿ ಮೆಟ್ಟಿಕೊಂಡು ಜೀರ್ಣವಸ್ತ್ರವನ್ನು ಸೀಳಿದಂತೆ ಸೀಳಿ ಬಿಸುಟನು. ಅನಂತರದಲ್ಲಿ ಕೋಪಪ್ರತಾಪಿತನಾದ ಅಕ್ಷ ಕುಮಾರನು ಶರವರ್ಷಗಳಿಂದ ಆ೦ಜನೇಯನನ್ನು ಮುಚ್ಚಿ ಸಲು ; ಹನುಮಂತನು ಹೆದರದೆ ತನ್ನ ಮುಷ್ಟಿಯಿಂದ ಅಕ್ಷ ಕುಮಾರನ ಮಸ್ತಕದ ಮೇಲೆ ಹೊಡೆಯಲು; ಆಗ ಅವನ ತಲೆಯೊಡೆದು ಮರ್ಧೆ ಯುಂಟಾದಿತು. ರಾವಣನು ತ್ರೈಲೋಕ್ಯ ಭೀಕರನೆಂಬ ಬಿರುದುಳ್ಳವನಲ್ಲವೇ ? ಅಂಥ ವನ ಮಗನು ಸಾಮಾನ್ಯನೇ ? ಆ ಅಕ್ಷ ಕುಮಾರನು ತಿರಿಗೆದ್ದು ಆರ್ಭಟಿಸಿ ಗದೆಯನ್ನು ತೆಗೆದುಕೊಂಡು ರಾಮದೂತನನ್ನು ಹೊಡೆಯಲು; ಆಂಜನೇಯನು ಸಿಡಿದು ಬಿದ್ರೂ ರಲಿ ಅರೆಗಳಿಗೆಗಿಂತಲೂ ಸ್ವಲ್ಪ ಹೆಚ್ಚಾಗಿ ಮರ್ಥೆಹೊಂದಲು; ಅಕ್ಷ ಕುಮಾರನು ಎಲೋ ಕ ಪಿಯು ಬಿದ್ದಿತು ! ಬಲೆಯನ್ನು ಹಾಕಿ ಎನಲು; ಕೂಡಲೆ ಮಾರುತಿಯು ಆರ್ಭಟಿಸಿಕೊಂಡಿದ್ದು ಅಕ್ಷ ಕುಮಾರಕನ ರಥವನ್ನು ತೆಗೆದು ಕೊಂಡು ಗರಗರನೆ ತಿರು ಗಿಸಿ ರವಿಮಂಡಲಕ್ಕೆಸೆಯಲು ; ಅಹ್ಮಕುಮಾರನು ಸಮುದ್ರವನ್ನುಲ್ಲಂಘಿಸಿ ಬಂದು ಪರಿಘದಿಂದ ಅನಿಲಜನನ್ನು ಹೊಡೆಯಲು ; ವೀರಹನುಮಂತನು ತೋರಣಸ್ತಂಭದಿಂದ ಹೊಡೆದು ಅಕ ಕುಮಾರನ ಶಿರಸ್ಸ೩ಳುಹಿ ಅದನ್ನು ರಾವಣನ ಮು೦ದೆ ಬೀಳುವ ಹಾಗೆ ಎಸೆದನು. ಆಗ ರಾಕ್ಷಸೇಶ್ವರನು ತನ್ನ ಮುದ್ದು ಮಗನ ತಲೆಯನ್ನು ಕಂಡು ಮನಸ್ಸಿನಲ್ಲಿ ಮಹಾತಂಕಯುಕ್ತ ನಾಗಿ ತನ್ನ ಮಗನಾಗಿಯ ಅಪ್ರತಿಮ ವೀರನಾಗಿಯೂ ಇರುವ ಇಂದ್ರಜಿತ್ತನ್ನು ನೋಡಿ-ಇದು ಲೋಕದಲ್ಲಿರುವ ಕಪಿಗಳಂತಲ್ಲ, ಏನೋ ಆಶ್ಚರ್ಯ ವಾಗಿ ತೋರುತ್ತದೆ. ಈ ಕೂಡಲೆ ನೀನು ವೀರಸೇನೆಯೊಡನೆ ಹೋಗಿ ಆ ಕಪಿಯನ್ನು ಕೊಲ್ಲದೆ ಪ್ರಾಣಸಹಿತವಾಗಿ ಹಿಡಿದು ನನ್ನ ಬಳಿಗೆ ತೆಗೆದುಕೊಂಡು ಬರುವವನಾಗು ಎಂದು ಹೇಳಿ ಕಳುಹಿಸಲು ; ಆತನು ಚತುರಂಗಬಲಪರಿವೃತನಾಗಿ ಹೊರಟುಬಂದು ಅಶೋಕವನದ ಹೆಬ್ಬಾಗಿಲ ಮೇಲೆ ಅಣಕಿಸುತ್ತ ಕೂತಿರುವ ಆಂಜನೆಯ ಮಗನನ್ನು ನೋಡಿ ಗುರಿಗಟ್ಟಿ ಸಕಲ ವಿಧವಾದ ಆಯುಧಗಳಿಂದ ಹೊಡೆದಾಗ್ಯೂ ಅವುಗಳೆಲ್ಲಾ ಆತನ ವಜ್ರಸಮಾನವಾದ ಶರೀರಕ್ಕೆ ತಗುಲಿ ತಗುಲಿ ಮುರಿಮುರಿದು ತುಮುರು ತುಮುರಾಗಿ ಭೂಮಿಗೆ ಬೀಳುತ್ತಿದ್ದು ವೇ ಹೊರತು ಆತನಿಗೆ ಸ್ವಲ್ಪವಾದರೂ ಗಾಯ ಮಾಡಿ ಬಾಧೆಯನ್ನು ಂಟುಮಾಡಲಾರದೆ ಇರುವುದನ್ನೂ ಆತನು ತನ್ನ ಚತುರಂಗಬಲದ ಮೇಲೆ ನೆಗೆದು ಬಾಲದಿಂದ ಬಡಿದು ಬೆರಳುಗಳಿಂದ ತಿವಿದು ಉಗುರುಗಳಿಂದ ಪರಚಿ