ಪುಟ:ಕಥಾ ಸಂಗ್ರಹ - ಭಾಗ ೨.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

96 ಕಥಾಸಂಗ್ರಹ-೪ ನೆಯ ಭಾಗ ಕಚ್ಚಿ ಒದೆದು ಕ್ರಮವಾಗಿ ಕೊಲ್ಲುತ್ತ ಬರುತ್ತಿರುವುದನ್ನೂ ನೋಡಿ ಇಂದ್ರಜಿತ್ತು ವಿಪರೀತ ಕೋಪಕಂಪಿತಾಧರನಾಗಿ ಸಕಲವಾದ ದೇವತಾಮಂತ್ರಾಸ್ತ್ರಗಳನ್ನೂ ತೆಗೆದು ಕೊಂಡು ಆತನ ಮೇಲೆ ಪ್ರಯೋಗಿಸಿದಾಗ್ಯೂ ಆತನಿಗೇನೂ ನೋವುಂಟಾಗದಿದ್ದ ಕಾ ರಣ ಆಶ್ಚರ್ಯಚಕಿತಮನಸ್ಕನಾಗಿ ಕಡೆಗೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು. ಆಗ ಹನುಮಂತನು ಬ್ರಹ್ಮಾಂಡ ಕಟಾಹವು ಬಿರಿವುದೋ, ಜಗದ ಜೀವಿಗಳ ಜನ್ಮವನ್ನು ತೊಡೆವುದೋ ಎಂಬ ಭ್ರಾಂತಿಯನ್ನು ಹುಟ್ಟಿಸುತ್ತ ಬರುತ್ತಿರುವ ಸರೋಜಸಂಭವಾ ಗ್ರವನ್ನು ನಿರೀಕ್ಷಿಸಿ ಭಯ ಪಟ್ಟವನಾದರೂ ಮೊದಲು ಸಾರದೆಯಾಣ್ಮನು ಇದರಿಂದಲೂ ಮರಣವುಂಟಾಗದಂತೆ ತನಗೆ ವರವನ್ನಿತ್ತಿರುವುದನ್ನು ನೆನೆದು ಧೈರ್ಯವುಳ್ಳವನಾಗಿನಿಶಾಚರಚಕ್ರವರ್ತಿಯದ ರಾವಣನನ್ನು ಕಂಡು ಶ್ರೀರಾಮನೆಡೆಗೈದುವುದಕ್ಕೆ ಇದೇ ಸಮಯವೆಂದು ನಿಶ್ಚಯಿಸಿ ಮೈ ಮೇಲೆ ಬಂದ ಅಸ್ತ್ರಕ್ಕೆ ವಶನಾಗಿ ಮರ್ಛಗೊಂಡವ ನಂತೆ ನಿಶ್ಲೇಷ್ಟತೆಯನ್ನು ಹೊಂದಿ ಭೂಮಿಯಲ್ಲಿ ಬಿದ್ದನು. ಆಗ ಇಂದ್ರಜಿತ್ತು ಕಳೆ ದುಳಿದ ಬಲದೊಡನೆ ಕೂಡಿ ಆತನನ್ನು ಹಿಡಿದು ತೆಗೆದು ಕೊಂಡು ರಾವಣನ ಓಲಗದ ಚಾವಡಿಗೆ ಬಂದು ಸಿಂಹಾಸನಾರೂಢನಾಗಿರುವ ರಾವಣನ ಮು೦ದಿಳಿಸಲು ; ಅಷ್ಟು ಹೊತ್ತಿನಲ್ಲಿ ಆ ಹನುಮಂತನು ಎಚ್ಚೆತ್ತು ರಾವಣನೆದುರಿನಲ್ಲಿ ತನ್ನ ಬಾಲವನ್ನು ಅತಿ ದೀರ್ಘವಾಗಿ ಬೆಳಿಸಿ ಸಿವುಡಿನಂತೆ ಸುತ್ತಿ ದುದರಿಂದ ರಾವಣನ ಸಿಂಹಾಸನಕ್ಕಿಂತಲೂ ದ್ವಿಗುಣೋನ್ನತವಾದ ತನ್ನ ವಾಲಸಿಂಹಾಸನದ ಮೇಲೆ ಬಿಂಕದಿಂದ ಕೂತುಕೊಂಡನು. ಆಗ ರಾವಣನ ಮುಖ್ಯಮಂತ್ರಿಯಾದ ಪ್ರಹಸ್ತನು ಆಂಜನೇಯನ ಬಳಿಗೆ ಬಂದು--ನೀನು ಯಾರು ? ನಿನ್ನ ನು ಇಲ್ಲಿಗೆ ಯಾರು ಕಳುಹಿಸಿದರು ? ರಾಜಾಜೆ ಯಿ ಲ್ಲದೆ ನಮ್ಮ ಪಟ್ಟಣಕ್ಕೆ ಏನು ಉದ್ದೇಶದಿಂದ ಬಂದಿ ? ಸರ್ವಲೋಕರಮ್ಯವಾದ ನಮ್ಮ ಅಶೋಕವನವನ್ನು ಯಾಕೆ ಮುರಿದಿ ? ನಮ್ಮ ರಾಕ್ಷಸನಾಯಕರನ್ನು ಕೊಲ್ಲು ವುದಕ್ಕೆ ನಿಮಿತ್ತವೇನು ? ಎಂದು ಕೇಳಲು ; ಹನುಮಂತನು ಪ್ರಹಸ್ತನನ್ನು ಕುರಿತು ಎಲೈ ರಾಕ್ಷಸನೇ, ನೀನು ಯಾರೆಂದು ನನ್ನನ್ನು ಕೇಳುತ್ತಿರುವಿಯಾ ? ಹೇಳುತ್ತೇನೆ ಕೇಳು, ನಾನು ನಿನ್ನೊಡೆಯನಾದ ಈ ರಾವಣನನ್ನು ಯುದ್ಧರಂಗದಲ್ಲಿ ಲೀಲಾಮಾ ತ್ರದಿಂದ ಜಯಿಸಿ ಕೈಕಾಲುಗಳಿಗೆ ಚಿನ್ನದ ಸಂಕೋಲೆಗಳನ್ನು ಹಾಕಿಸಿ ಒಂದು ಸಹಸ್ರ ಸಂವತ್ಸರಗಳ ವರೆಗೂ ಕಾರಾಗೃಹದಲ್ಲಿಟ್ಟಿದ್ದ ಸಾವಿರ ತೋಳುಗಳುಳ್ಳ ಕಾರ್ತವೀ ರ್ಯಾರ್ಜುನನನ್ನು ಕೊಡಲಿಯಿಂದ ಕಡಿದು ಕೊಂದ ಪರಶುರಾಮನನ್ನು ಜಯಿಸಿದವ ನಾಗಿಯ ಈ ರಾವಣನು ಯಾವ ಮಹಾವೀರನಾದ ವಾಲಿಯ ಕಂಕುಳಲ್ಲಿ ಸಿಕ್ಕಿ ಕೊಂಡು ನರಳಿ ನಾಯಾಗಿ ಭಯದಿಂದ ಆತನೊಡನೆ ಅಗ್ನಿ ಸಾಕ್ಷಿಯಾಗಿ ಸ್ನೇಹವನ್ನು ಮಾಡಿಕೊಂಡನೋ ಅಂಥ ವಾಲಿಯನ್ನು ಒಂದೇ ಬಾಣದಿಂದ ಕೊಂದವನಾಗಿಯ ಇಂದ್ರಸಮಾನನಾದ ದಶರಥರಾಜನ ಪುತ್ರನಾಗಿಯ ತ್ರಿಲೋಕೈಕವೀರನಾಗಿಯ ರಾಕ್ಷಸಕುಲಮಲೋತ್ಪಾಟನತತ್ಪರನಾಗಿಯ ಧರ್ಮಸಂಸ್ಥಾಪನ ಧುರಂಧರನಾ ಗಿಯ ಇರುವ ಶ್ರೀರಾಮನ ದೂತನು, ಸುಗ್ರೀವನೆಂಬ ಕಪಿಮಹಾರಾಜನ ಮಂತ್ರಿ ಯು. ನನ್ನ ಹೆಸರು ಹನುಮಂತನೆಂದು ಪ್ರಸಿದ್ಧವಾಗಿರುವುದು, ಈ ಮೂರ್ಖ