ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

98 ಕಥಾಸಂಗ್ರಹ-೪ ನೆಯ ಭಾಗ ಸುತ್ತ ಮೈ ತುರಿಸಿಕೊಳ್ಳುತ್ತ ಅರವತ್ತು ಸಾವಿರ ಯೋಜನಗಳಷ್ಟುದ್ದವಾಗಿ ತನ್ನ ಬಾಲವನ್ನು ಬೆಳೆಸುವುದಕ್ಕೆ ಆರಂಭಿಸಿದನು. ರಾವಣನ ಆಳುಗಳು ಕಪಿಯನ್ನು ಮುತ್ತಿ ಕೊಂಡು ಬಾಲಕ್ಕೆ ಬಟ್ಟೆಗಳನ್ನು ಸುತ್ತು ಬಂದ ಹಾಗೆಲ್ಲಾ ಬಾಲವು ಮುಂದಕ್ಕೆ ಬೆಳೆಯುತ್ತ ಸಾಗುತ್ತಿರಲು; ಆಗ ಲಂಕಾಪಟ್ಟಣದಲ್ಲಿದ್ದ ವಸ್ತ್ರಗಳನ್ನೆಲ್ಲಾ ತಂದು ಸುತ್ತಿ ಎಣ್ಣೆಯನ್ನು ಹೊಯ್ದು ನೆನಸಿದು. ಆ ಮೇಲೆ ರಾವಣನ ಅಪ್ಪಣೆಯನ್ನು ಹೊಂದಿ ರಾಕ್ಷಸದೂತರು ಹತ್ತಿಗಳ ಹೊರೆಗಳನ್ನು ತಂದು ಬಾಲದ ಕೊನೆಗೆ ಸುತ್ತಿ ಕಟ್ಟಿ ಕಣಜಗಳನ್ನು ಒಡೆದು ಸರ್ಜರಸ ಗುಡ ಕರ್ಪೂರ ಈ ಮೊದಲಾದುವುಗಳನ್ನು ಮೆತ್ತಿ ಬೆಂಕಿಯನ್ನು ಹೊತ್ತಿಸಿ ಅವನ ಸೊಂಟಕ್ಕೆ ಹಗ್ಗವನ್ನು ಕಟ್ಟಿ ಹಿಡಿದು ಊರಲ್ಲೆಲ್ಲಾ ಡಂಗುರವನ್ನು ಹೊಡೆದು ಕೊಂಡು ಮೆರೆಯಿಸುತ್ತ ಬರುತ್ತಿರುವಲ್ಲಿ ಆ ಪಟ್ಟಣದ ಸಮಸ್ತ ರಾಕ್ಷಸ ಸ್ತ್ರೀಪುರುಷರೆಲ್ಲಾ ಧಗ ದೃಗಾಯಮಾನವಾಗಿ ಉರಿಯುತ್ತಿರುವ ಮಹಾ ದೀರ್ಘವಾದ ಬಾಲವುಳ್ಳ ಆಂಜ ನೇಯನನ್ನು ನೋಡಿ ಕೈತಟ್ಟಿ ನಕ್ಕು ಸಂತೋಷಪಟ್ಟರು. ಆಗ ಹನುಮಂತನುನಾನು ನಿನ್ನೆ ಯ ರಾತ್ರಿಯಲ್ಲಿ ಈ ಲ೦ಕಾಪಟ್ಟಣವನ್ನು ಚೆನ್ನಾಗಿ ನೋಡಲಿಲ್ಲ. ಅದು ಕಾರಣ ಈಗ ಈ ಲಂಕಾಪಟ್ಟಣದ ಹೆಬ್ಬಾಗಿಲುಗಳನ್ನೂ ದಿಡ್ಡಿ ಬಾಗಿಲುಗಳನ್ನೂ ಕನ್ನ ಗಂಡಿಗಳನ್ನೂ ಸುರಂಗಗಳನ್ನೂ ಯಂತ್ರಗಳನ್ನೂ ಅವುಗಳ ಕೀಲುಗಳನ್ನೂ ಸ್ಪಷ್ಟವಾಗಿ ನೋಡಿ ಈ ಪಟ್ಟಣದ ವಿಶೇಷಸ್ಥಿತಿಗಳನ್ನೂ ರಹಸ್ಯ ವಿಷಯಗಳನ್ನೂ ತಿಳಿದು ಕೊಂಡು ಕಡೆಗೆ ಇವರನ್ನೆಲ್ಲಾ ಕೊಂದು ರಾಮನ ಬಳಿಗೆ ಹೋಗಬೇಕು, ಇನ್ನು ಸ್ವಲ್ಪ ಕಾಲದ ವರೆಗೂ ಇವರು ನನ್ನನ್ನು ಹಿಡಿದು ಸಾರಿಕೊಂಡು ಈ ಪಟ್ಟಣದಲ್ಲಿ ತಿರುಗುತ್ತಿರಲಿ ಎಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ಸುಮ್ಮನಿದ್ದನು. ಆಗೆ ಸೀತೆ ಯನ್ನು ಕಾಯ್ದು ಕೊಂಡಿದ್ದ ರಾಕ್ಷಸಿಯರು ಈ ಸಂಗತಿಯನ್ನೆಲ್ಲಾ ಕಂಡು ಕೇಳಿ ಸೀತೆಯ ಬಳಿಗೆ ಹೋಗಿ - ಎಲೈ ಜಾನಕಿಯೆ°, ಕಳೆದ ರಾತ್ರಿಯಲ್ಲಿ ನಿನ್ನ ಸಂಗಡ ಮಾತಾಡಿದ ಕೆಂಪುಮೊಗವುಳ್ಳ ಕೋತಿಯ ಬಾಲಕ್ಕೆ ಬಟ್ಟೆಗಳನ್ನು ಸುತ್ತಿ ಎಣ್ಣೆಯ ಅದ್ದಿ ಬೆಂಕಿಯನ್ನು ಹೊತ್ತಿಸಿ ನಡುವಿಗೆ ಹಗ್ಗವನ್ನು ಕಟ್ಟಿ ಹಿಡಿದುಕೊಂಡು ಊರ ಲ್ಲೆಲ್ಲಾ ಸಾರುತ್ತ ತಿರುಗಿಸುತ್ತಾರೆ ಎಂದು ಹೇಳಿದರು, ವೈದೇಹಿಯು ಆ ಮಾತು ಗಳನ್ನು ಕೇಳಿ ಬಹಳವಾಗಿ ದುಃಖಿಸಿ ಅಗ್ನಿ ಪುರುಷನಿಗೆ ನಮಸ್ಕರಿಸಿ-ಎಲೈ ಮಹಾತ್ಮ ನಾದ ಅಗ್ನಿದೇವತೆಯೇ, ನಾನು ಈ ವರೆಗೂ ಸತ್ಯವಾಗಿ ಪ್ರತಿ ಶುಕ್ರೂಷೆಯನ್ನು ಮಾಡಿ ಪಾತಿವ್ರತ್ಯಧರ್ಮವನ್ನು ಕಾಪಾಡಿರುವವಳೂ ಒಳ್ಳೆಯ ನಡತೆಯಿಂದ ಕೂಡಿದವಳೂ ಆಗಿರುವುದೂ ಶ್ರೀರಾಮಚಂದ್ರನು ಪುನಃ ನನ್ನನ್ನು ಕೊಡುವುದರಲ್ಲಿ ಆಶೆಯುಳ್ಳವನಾಗಿ ಬಂದು ನನ್ನನ್ನು ಈ ದುಃಖಸಮುದ್ರದ ದೆಸೆಯಿಂದ ದಾಟಿಸುವುದೂ ನನಗೆ ಒಳ್ಳೆಯ ಭಾಗ್ಯವುಂಟಾಗುವುದೂ ನಿಜವಾಗಿದ್ದರೆ ನಿನ್ನ ಉಷ್ಣವು ಈ ಹನುಮಂತನಿಗೆ ಹಿಮೋ ದಕದಂತೆ ಶೀತಲವಾಗಲಿ ಎಂದು ಭಯಭರಿತಭಕ್ತಿಭಾವದಿಂದ ಕೂಡಿ ಅನೇಕ ಪ್ರಕಾರ ವಾಗಿ ಪ್ರಾರ್ಥಿಸಿದಳು. ಇತ್ತಲಾ ಹನುಮಂತನು ತನ್ನ ಬಾಲವು ಅಗ್ನಿ ಮಹಾಜ್ವಾಲೆಯಿಂದ ಕೂಡಿರು ವುದನ್ನು ನೋಡಿ--ನನ್ನ ಬಾಲದಲ್ಲಿ ಅಗ್ನಿ ಯ ಮಹಾಜ್ವಾಲೆಯು ಕಾಣುತ್ತಿದೆ.