ಪುಟ:ಕಥಾ ಸಂಗ್ರಹ - ಭಾಗ ೨.djvu/೧೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸೇತುಬಂಧನದ ಕಥೆ 101 ವಂತನು ಕೈಮುಗಿದು ನಿಂತು-ಜೀಯಾ, ಅವಧರಿಸು. ಮಹಾತ್ಮನಾದ ನಿನ್ನ ಮಹಿಮೆಯ ಬಲವು ನಮಗಿರುವಲ್ಲಿ ಆಶ್ರಿತರಾದ ನಮ್ಮ 'ಕ್ಷೇಮಕ್ಕೆ ಯಾವ ಹಾನಿ ಯುಂಟು ? ಯಾವ ಕಾರ್ಯವು ತಾನೆ ಅಸಾಧ್ಯವು ? ನಾವೂ ನಿನ್ನ ಸನ್ನಿಧಿಯಿಂದ ಹೊರಟು ದಾರಿತಪ್ಪಿ ಸ್ವಯಂಪ್ರಭಾಗುಹೆಯನ್ನು ಪ್ರವೇಶಿಸಿ ಆಕೆಯಿಂದ ಸತ್ತ ರಾಗಿ ಮುಂದಕ್ಕೆ ಹೊರಟುಬರುತ್ತ ಅಲ್ಲಿಗೆ ಇಪ್ಪತ್ತೇಳು ದಿನಗಳು ಗತಿಸಿಹೋದುದರಿಂದ ನಾವೆಲ್ಲರೂ ವ್ಯಸನಾಕ್ರಾಂತರಾಗಿ ಕೂತಿದ್ದೆವು ಆಗ ಅಲ್ಲಿದ್ದ ಜಟಾಯುವಿನಣ್ಣ ನಾದ ಸಂಪಾತಿಯಿಂದ ಲಂಕಾ ಮಾರ್ಗವನ್ನು ತಿಳಿದು ದಕ್ಷಿಣಸಮುದ್ರತೀರಕ್ಕೆ ಹೋದೆವು, ಆ ಮೇಲೆ ಈ ಧೀರನಾದ ಆಂಜನೇಯನು ಸಮುದ್ರವನ್ನು ದಾಟಿ ಲಂಕಾ ನಗರಕ್ಕೆ ಹೋಗಿ ಸೀತಾದೇವಿಯನ್ನು ಕಂಡು ಅನೇಕ ರಾಕ್ಷಸರನ್ನು ಕೊಂದು ಲಂಕೆ ಯನ್ನು ಸುಟ್ಟು ಬಂದನು ಎಂದು ಹೇಳಿ ಹನುಮಂತನನ್ನು ರಾಮನ ಪಾದಗಳ ಮೇಲೆ ಕೆಡಹಲು; ಶ್ರೀರಾಮನು ಆಂಜನೇಯನನ್ನು ತೆಗೆದಪ್ಪಿ ಮುದ್ದಾಡಿ--ನನ್ನ ಕಂದನೇ, ನನ್ನ ಬಂಧುವೇ, ನನ್ನ ದುಃಖವನ್ನು ಪರಿಹರಿಸುವುದಕ್ಕಾಗಿ ಅಪಾರಶ್ರಮವನ್ನು ಹೊಂದಿದೆಯಲ್ಲಾ ! ಎಂದು ಮೈದಡವಿ ಆತನು ಕೊಟ್ಟ ಶಿರೋರತ್ನ ವನ್ನು ತೆಗೆದು ಕೊಂಡು ನೋಡಿ ಸೀತೆಯನ್ನೇ ಕಂಡಂತೆ ಸಂತುಷ್ಟನಾದರೂ ಪರರೆಡೆಯಲ್ಲಿ ಸಿಕ್ಕಿ ಕಷ್ಟ ಪಡುತ್ತಿರುವ ಆಕೆಯನ್ನು ನೆನನೆನದು ಮರುಗಿ ಶೀಘ್ರವಾಗಿ ಮುಂದೆ ಮಾಡತಕ್ಕೆ ಪ್ರಯತ್ನಗಳನ್ನು ಸುಗ್ರೀವನಿಗೆ ನೇಮಿಸುತ್ತಿದ್ದನು. 6, BRIDGING THE SEA OVER TO LANKA, - ೬. ಸೇತುಬಂಧನದ ಕಥೆ. ಶ್ರೀರಾಮನು ಋಷ್ಯಮ ಕಮಹೀಧರದಲ್ಲಿ ಆ೦ಜನೇಯನ ಮುಖದಿಂದ ಸೀತಾರಾವಣರ ವರ್ತಮಾನವನ್ನು ಕೇಳಿದ ಮೇಲೆ ಆ ರಾತ್ರಿಯೇ ಸಭೆಯನ್ನು ಮಾಡಿ ಸುಗ್ರೀವನನ್ನು ನೋಡಿ-ಎಲೈ ಪ್ರಿಯಸಖನೇ, ಮೊದಲು ನೀನು ನನಗೆ ನಂಬುಗೆ ಯನ್ನು ಕೊಟ್ಟಂತೆಯೇ ನನ್ನ ಪ್ರಾಣವಲ್ಲಭೆಯಿರುವ ಸ್ಥಳವನ್ನೂ ಆಕೆಯನ್ನು ಅಪ ಹರಿಸಿಕೊಂಡು ಹೋದ ದುಷ್ಟ ರಾವಣನಿರುವ ಸ್ಥಾನವನ್ನೂ ಗೊತ್ತು ಮಾಡಿಸಿ ತಿಳಿ ಸಿದವನಾದಿ. ನನ್ನ ಪ್ರಿಯಳು ಸಂಕಟಪಡುತ್ತಿರುವುದನ್ನು ಕೇಳಿ ಒಂದು ಕ ಣಕಾಲ ವಾದರೂ ಸಹಿಸಿಕೊಂಡಿರಲಾರೆನು. ಯಾವಾಗ ನನ್ನ ಹಗೆಯಾದ ರಾವಣನನ್ನು ಕೊಂದು ನನ್ನ ಪ್ರಿಯೆಯಾದ ಸೀತೆಯನ್ನು ಬಿಡಿಸಿಕೊಂಡುಬರುವೆನೋ ? ಎಂಬ ಆತು ರವು ನನ್ನನ್ನು ಪೀಡಿಸುತ್ತಿದೆ. ನೀನು ಇನ್ನು ಮೇಲೆ ಈ ಭಾಗದಲ್ಲಿ ಏನು ಯೋಚನೆ ಯನ್ನು ಮಾಡಿರುವಿ ? ಅದನ್ನು ತಿಳಿಸು ಎಂದು ಕೇಳಲು; ಸುಗ್ರೀವನು ಎದ್ದು ಕೈಮು ಗಿದು ನಿಂತು -. ಜೀಯಾ, ನಿನ್ನ ಅಮಾನುಷ ಪರಾಕ್ರಮಕ್ಕೆ ಈ ಬ್ರಹ್ಮಾಂಡವೇ ವಶವರ್ತಿಯಾಗುವುದು, ಪಟ್ಟಣವನ್ನು ನುಂಗುವವನಿಗೆ ಕದವು ಹಪ್ಪಳವು ಎಂಬ ಗಾದೆಗನುಸಾರವಾಗಿ ಈ ಚತುರ್ದಶ ಭುವನಂಗಳನ್ನು ಏಕಕಾಲದಲ್ಲಿ ಸಂಹರಿಸ.ವು