ಪುಟ:ಕಥಾ ಸಂಗ್ರಹ - ಭಾಗ ೨.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೇತುಬಂಧನದ ಕಥೆ 103 ಗಳನ್ನೂ ಕಿತ್ತು ತೆಗೆದು ಕೊಂಡು ಆರ್ಭಟಿಸುತ್ತ ನಡೆದುವು. ಆ ಸೇನಾಸಮೂಹದಲ್ಲಿ ಕರಡಿಗಳೇ ಕರಿಘಟಿಗಳು ; ಮುಸುಗಳೇ ಕುದುರೆಗಳು ; ಸಿಂಗಳೀಕಗಳೇ ತೇರುಗಳು; ಇತರ ಕಪಿಗಳೆಲ್ಲಾ ಕಾಲಾಳುಗಳು, ಈ ಪ್ರಕಾರವಾದ ಕಪಿಚತುರಂಗಬಲಕ್ಕೆ ತೋಳು ಗಳೇ ಗದಾಯುಧಗಳಾಗಿಯೂ ಉದ್ದವಾದ ಬಾಲಗಳೇ ಸಬಳಗಳಾಗಿಯ ಕ್ರೂರ ವಾದ ಉಗುರುಗಳೇ ಗರಗಸಗಳಾಗಿಯ ಕೋರೆ ಹಲ್ಲುಗಳೇ ಕತ್ತಿಗಳಾಗಿಯ ಬೆಟ್ಟ ಗುಡ್ಡ ಮರಗುಂಡು ಗಳೇ ಕೊದಂಡಾದಿ ನಾನಾಯುಧಗಳಾಗಿಯ ಕಾಣಿಸು ತಿದ್ದುವು. ಇಂಥ ಕಪಿಸೇನಾ ಮಹಾ ಭಾರವನ್ನು ತಡೆಯಲಾರದೆ ಆದಿಶೇಷನ ಕೊರಳುಗಳು ಕುಸಿದುವು. ಕುಲಗಿರಿಗಳು ಜರುಗಿದುವು. ಕೂರ್ಮನ ಉಸಿರು ಕುತ್ತಿಗೆಯಲ್ಲಿ ಮಿಡುಕಿತು. ದಿಗ್ಗಜಗಳು ತಲೆಗಳನ್ನು ಕೊಡಹಿದುವು. ಬ್ರಹ್ಮಾಂಡ ಮಂಡಲವು ಒಲು ಬೊಬ್ಬೆಯಿಂದ ತುಂಬಿತು. ಕಪಿಬಲದ ಪದಹತಿಯಿಂದೆದ್ದ ರಜೋ ರಾಜಿಯಿಂದ ಸೂರ್ಯನ ಬೆಳಕು ಚೆನ್ನಾಗಿ ಕಾಣಿಸಲಿಲ್ಲ, ಸಮುದ್ರವು ಮುಚ್ಚಿ ಪಂಕಪ್ರಾಯವಾಯಿತು, ಮೇರುಗಿರಿಯ ಕೀಲುಗಳು ಕಳಚಿದುವು. ಊರ್ಧ್ವಲೋಕ ಗಳು ಅಲ್ಲಾಡಿದುವು. ಇಂಥ ಸೇನೆಯ ಮಹಾ ಭಾರದಿಂದ ಲೋಕವೇನಾಗುವುದೋ ಎಂದು ಹಿರಣ್ಯಗರ್ಭನು ಚಿಂತಿಸುತ್ತಿದ್ದನು. ಈ ರೀತಿಯಾಗಿ ಹೊರಟ ಸೈನ್ಯವು ಆ ದಿವಸದಲ್ಲೇ ಮಲಯಪರ್ವತದ ಬಳಿಗೆ ಹೋಗಿ ಅದರ ವಿಸ್ತಾರವಾದ ತಪ್ಪಲಲ್ಲಿ ದಳಪತಿಯಾದ ನೀಲನ ಅಪ್ಪಣೆಯ ಮೇರೆಗೆ ಬೀಡು ಬಿಟ್ಟಿತು. ಮಾರನೆಯ ದಿವಸ ಬೆಳಗಾದ ಕೂಡಲೆ ಅಲ್ಲಿಂದ ಹೊರಟು ಮರು ದಿವಸಗಳಲ್ಲಿ ಸಮುದ್ರದ ದಡವನ್ನು ಸೇರಿತು ಆ ಸಮುದ್ರರಾಜನು ತೆರೆಗಳೆಂಬ ತೋರಣಗಳಿಂದಲೂ ನೊರೆಗಳೆಂಬ ಬೆಳುಗೊಡೆಗಳಿಂದಲೂ ತುಂತುರು ಹನಿಗಳೆಂಬ ಚೌರಿಗಳಿಂದಲೂ ಸುಳಿಗಳ ಘುಳುಘಳು ಧ್ವನಿಗಳೆಂಬ ಭೇರ್ಯಾದಿವಾದ್ಯರವಗಳಿ೦ ದಲೂ ಕೂಡಿ ಬಂದು ರಘುಪತಿಯನ್ನು ಇದಿರುಗೊಳ್ಳುವವನ ಹಾಗೆ ಮೆರೆದನು. ಆಗ ಸಕಲ ಸೇನಾನಾಯಕರೂ ಕಡಲ ದಡದಲ್ಲಿ ಳಿದರು. ಅಲ್ಲಿ ಶ್ರೀರಾಮನಿಗೆ ಎಳೆಚಿಗುರು ಗಳ ಹೊದಿಕೆಯಿಂದ ದಿವ್ಯವಾದ ಅರಮನೆಯ ಓಲಗದ ಚಾವಡಿಯ ಕ್ಷಣಮಾತ್ರ ದಲ್ಲಿ ಉಂಟಾದುವು. - ಹೀಗೆ ಎರಡನೆಯ ಕಡಲಿನಂತೆ ಬಂದು ಕಡಲಡದಲ್ಲಿಳಿದ ಕಪಿಬಲವನ್ನು ಕಂಡು ಅಲ್ಲಿದ್ದ ರಾವಣನ ಕಡೆಯ ರಕ್ಕಸರು ಹೆದರಿ ಓಡಿಹೋಗಿ ಒಡೋಲಗದ ಚಾವಡಿಯಲ್ಲಿ ಕೂತಿದ್ದ ರಾವಣನ ಮುಂದೆ ಕೈಮುಗಿದು ತಾವು ಹೊತ್ತು ಕೊಂಡು ಬಂದ ಭಯದ ಬೀಜಗಳ ಬಹು ಭಾರದಿಂದ ಬಳಲಿದರೋ ಎಂಬಂತೆ ಕಂಗೆಟ್ಟು ಒಂದೆ ರಡು ಗಳಿಗೆಗಳ ವರೆಗೂ ಸುಮ್ಮನಿದ್ದು ಒಣಗಿದ ತುಟಿಗಳನ್ನು ನಾಲಿಗೆಯಿಂದ ಒರಸಿ ಕೊಳ್ಳುತ್ತ ಆ ಮೇಲೆ-ಜೀಯಾ, ಕಾಮರೂಪಿಗಳೂ ಮೈ ಕೊಬ್ಬು ಳ್ಳುವುಗಳೂ ಇಂದ್ರಾದಿ ದೇವತೆಗಳನ್ನೂ ಕೂಡ ಲಕ್ಷಿಕರಿಸದುವುಗಳೂ ಗಿರಿ ವೃಕ್ಷಗಳೇ ಆಯುಧ ವಾಗುಳ್ಳುವುಗಳೂ ಕಣ್ಣೆತ್ತಿ ನೋಡಕೂಡದುವುಗಳೂ ಆಗಿರುವ ಕಪಿಮಹದಿಂದ ಕೂಡಿದ ಮಹಾ ಸೇನೆಯು ಸಮುದ್ರತೀರದಲ್ಲಿ ಬಂದಿಳಿದಿದೆ. ಆ ಕಪಿಸೇನಾಸಮುದ್ರ