104 ಕಥಾಸಂಗ್ರಹ-೪ ನೆಯ ಭಾಗ ದಲ್ಲಿ ಮೃತ್ಯುವಿನ ಮುಖದಂತೆ ಭೀಕರಾನನವುಳ್ಳು ವುಗಳೂ ಮೊದಲು ನಮ್ಮ ಈ ಲಂಕೆಯನ್ನು ಬೆಂಕಿಗೆ ತುತ್ತಾಗಿ ಮಾಡಿದ ಕೊಡಗನಂತಿರುವ ಕೊಡಗಗಳೂ ಅಸಂ ಖ್ಯಾತವಾಗಿರುವುವು. ಈ ಕಪಿಗಳ ದಂಡು ನೀನು ಮೊದಲೆಳೆತಂದ ಸೀತೆಯ ಗಂಡನ ಸಹಾಯಕ್ಕಾಗಿ ಬಂದಿದೆಯಂತೆ, ಆ ಮಹಾಕಬಲಕ್ಕೆಲ್ಲಾ ಸುಗ್ರೀವನೆಂಬುವನು ಒಡೆಯನಂತೆ ಎಂದು ಬಿನ್ನವಿಸಿದರು. ರಾವಣನು ಅವರ ಮಾತುಗಳನ್ನು ಕೇಳಿ--ಹೊಡಿ, ಈ ರಕ್ಕಸನಾಯಿಗಳ ಬಾಯ್ಸಳ ಮೇಲೆ ಬಡಿ, ಇವರು ಹುಲುಮಾನಿಸನ ಕಾಡುಕೋತಿಗಳ ಹಿಂಡಿಗೆ ಹೆದರಿ ಬೆಬ್ಬರ ಬಿದ್ದೋಡಿಬಂದ ಹೇಡಿಗಳಲ್ಲ ವೇ ? ಎಂದು ಹೇಳುತ್ತ ಮಹಾ ಕೋಪದಿಂದ ಕೂಡಿ ಜಗ್ಗನೆ ಸಿಂಹಾಸನದಿಂದಿಳಿದು ಅರಮನೆಗೆ ಹೋಗಿ ಕುಳಿತುಕೊಂಡು ಪ್ರಹಸ್ತೇಂ ದ್ರ ಚೆದಾದಿ ರಾಕ್ಷಸ ನಾಯಕರನ್ನು ಕರಿಸಿಕೊಂಡು--ಬಡಗಣದಿಕ್ಕಿನ ಸುದ್ದಿ ಯ ಚಂದವನ್ನು ಕೇಳಿದಿರಾ ? ಸೀತೆಯ ಮೊದಲ ಗಂಡನಿಗೆ ಧೈರ್ಯವು ಮೊಳೆತು ನಮ್ಮೊ ಡನೆ ಕಾದುವುದಕ್ಕೆ ಕಪಿಬಲದೊಡನೆ ಒಂದು ಕಡಲ ದಡದಲ್ಲಿಳಿದಿದ್ದಾನೆಯಂತೆ. ಅಂದು ನಾ ಪೊಳಲನ್ನು ಉರಿಯಲ್ಲಿ ಸೇರಿಸಿದ ಕೋಡಗನಂದದ ಭಟರು ಅಪರಿಮಿತ ವಾಗಿ ಬಂದು ಕೂಡಿರುವರಂತೆ, ದಂಡು ಪಡಿಗಡಲಂತೆ ಅಸಂಖ್ಯಾತವಾಗಿರುವುದಂತೆ. ಈಗ ಈ ರೀತಿಯಾಗಿ ಒದಗಿರುವ ರಾಜಕಾರ್ಯಕ್ಕೆ ಏನು ಯೋಚನೆಯನ್ನು ಹೇಳು ವಿರಿ ? ಎಂದು ಕೇಳಲು ; ಆಗ ಪ್ರಹಸ್ತನು ರಾವಣನನ್ನು ಕುರಿತು-ಜೀಯಾ, ನಿನ್ನ ಅದ್ಭುತಪರಾಕ್ರಮಕ್ಕೆ ಮುಕ್ಕಣ್ಣನಂಜುವನು, ನಿನ್ನ ಪ್ರತಾಪದ ವರ್ತಮಾನವನ್ನು ಕೇಳಿದ ಹರಿಬ್ರಹ್ಂದ್ರಾದಿಗಳು ತರತರನೆ ನಡುಗಿ ಮೈಮರೆವರು. ಹೀಗಿರು ವಲ್ಲಿ ಈ ಕೋಡಗಪಡೆಯ ಬಲುಮೆಯೆಷ್ಟರದು ? ಆದರೂ ಹಗೆಗಳು ಕೋತಿಗಳೂ ಮನುಷ್ಯರೂ ಆದುದರಿಂದ ಅಲ್ಪರೆಂದು ಭಾವಿಸಿ ಅಸಡ್ಡೆಯಿಂದಿರಕೂಡದು, ಶತ್ರುವು ಅಣುವಿನಷ್ಟಿದ್ದರೂ ಅವನನ್ನು ಆಗಲೇ ತೀರಿಸಿಬಿಡಬೇಕೆಂದು ನೀತಿಜ್ಞರು ಹೇಳುತ್ತಿರು ವರು, ಅದು ಕಾರಣ ನಾವು ಈ ಸಮಯದಲ್ಲಿ ಎಚ್ಚರವಾಗಿರಬೇಕು, ವೀರಭಟರು ಈ ನಮ್ಮ ಲಂಕಾನಗರವನ್ನು ಜಾಗರೂಕತೆಯಿಂದ ಕಾದು ಕೊಂಡಿರುವಂತೆ ಅಪ್ಪಣೆ ಯನ್ನು ಕೊಡಿಸು, ಕೋಟೆ ಕೊತ್ತಲು ಹೆಬ್ಬಾಗಿಲು ಈ ಮೊದಲಾದ ಸ್ಥಳಗಳಲ್ಲಿಯ ಪಟ್ಟಣದ ಬೀದಿ ಬೀದಿಗಳ ಮಲೆಗಳಲ್ಲಿಯ ಸಕಲಾಯುಧ ಸಮೇತಗಳಾದ ಚತು ರಂಗ ಬಲಗಳು ಸರದಿಯ ಮೇರೆಗೆ ಎಡಬಿಡದೆ ಕಾದುಕೊಂಡಿರುವಂತೆ ನೇಮಿಸು. ಮತ್ತು ಹಗೆಗಳ ಬಲದಲ್ಲಿ ಬಲುಮೆಯುಳ್ಳವರಾರು ? ಆ ಒಲಿಷ್ಠರಲ್ಲಿ ಹೆಸರಾದ ಸಾಹ ಸಿಗಳು ಯಾರು ? ಆ ಸಾಹಸಿಗಳಲ್ಲಿ ದುಡುಕಿಗಳು ಯಾರು ? ಯಾರು ದುಡಕಿಲ್ಲದ ವರು ? ಆಲೋಚನಾಪರರು ಯಾರು ? ಆ ಆಲೋಚನಾಪರರಲ್ಲಿ ಒಬ್ಬರಿಗೊಬ್ಬರಿಗೆ ವೈಮನಸ್ಯವುಳ್ಳವರಾರು ? ಎಂಬ ಈ ಮೊದಲಾದ ಸಂಗತಿಗಳನ್ನೆಲ್ಲಾ ಸಂಪೂರ್ಣ ವಾಗಿಯ ಸ್ಪಷ್ಟವಾಗಿ ತಿಳಿದುಕೊಂಡು ಬಂದು ಹೇಳುವ ಬಗ್ಗೆ ಚತುರರಾದವ ರಿಗೆ ಬೆಸಸು ಎನ್ನಲು ; ರಾವಣನು-ಅಹುದು ; ಈ ನೀತಿಯು ಯುಕ್ತವಾದುದೇ ಸರಿ ಎಂದು ಮನಸ್ಸಿನಲ್ಲಿ ನಿಶ್ಚಯಿಸಿ ಕೂಡಲೆ ಆರಾದ ಬೇಹಿನವರನ್ನು ಕರಿಸಿ
ಪುಟ:ಕಥಾ ಸಂಗ್ರಹ - ಭಾಗ ೨.djvu/೧೧೪
ಗೋಚರ