ಸೇತುಬ:ಧನದ ಕಥೆ 105 ಮಾಡಬೇಕಾದ ಕಾರ್ಯಕ್ರಮಗಳನ್ನೆಲ್ಲಾ ರಹಸ್ಯವಾಗಿ ತಿಳಿಸಿ ರಾಮನ ಬಲದ ಬಳಿಗೆ ಕಳುಹಿಸಿ ಮಂತ್ರಿಯಾದ ಪ್ರಹಸ್ತನನ್ನು ಮನೆಗೆ ಕಳುಹಿಸಿದನು. ಆ ಬಳಿಕ ಇಂದ್ರಜಿತ್ ಮೊದಲಾದ ಕುಮಾರರು ತಂದೆಯಾದ ರಾವಣನನ್ನು ಕುರಿತು~ ಎಲೈ ಜನಕನೇ, ಬಲದಲ್ಲೂ ಪರಾಕ್ರಮದಲ್ಲೂ ನಮ್ಮೆದುರಿಗೆ ನಿಲ್ಲುವ ವರಾರು ? ಇಂಥ ನಾವು ಕೋತಿಗಳ ಬಲವನ್ನು ನಂಬಿ ಬಂದಿರುವ ಅಲ್ಪನಾದ ನರಸ ತಿಗೆ ಏಕಂಜಬೇಕು ? ಹಗೆತನದಲ್ಲಿ ನಮ್ಮನ್ನು ಸೋಲಿಸಿ ಹೆಂಡತಿಯನ್ನು ಕರೆದು ಕೊಂಡು ಹೋಗುವ ಆ ಮನುಜನ ಆಳುತನವನ್ನು ನಾವು ನೋಡಿಕೊಳ್ಳುವೆವು ಎಂದು ತಮ್ಮ ತಮ್ಮ ಶೌರ್ಯೋಕ್ತಿಗಳನ್ನು ಆಡಿಕೊಂಡರು. ರಾವಣನು ಸಂತೋಷಿಸಿ ಅವರ ನೈಲ್ಲಾ ಅವರವರ ಮನೆಗಳಿಗೆ ಕಳುಹಿಸಿ ತಾನು ಹಗೆಯ ಹಮ್ಮ ನ್ಯೂ ಆತನ ಕಾರ್ಯ ಗಳನ್ನೂ ನೆನನೆನದು ನಿದ್ರೆಬಾರದೆ ಹಾಸಿಗೆಯಲ್ಲಿ ಹೊರಳುತ್ತ ಏಳುತ್ತ ಮಲಗುತ್ತ ಕುಳ್ಳಿರುತ್ತ ಚಿಂತಾಲಲನೆಯ ಕೂಟದಲ್ಲಿ ಇರುಳನ್ನೆಲ್ಲಾ ನೂಕುತ್ತಿದ್ದನು. ಅಷ್ಟ ರೊ ಳಗೆ ಮುಂಗೋಳಿಯು ಕೂಗಿತು, ಪಕ್ಷಿಗಳೆಲ್ಲಾ ತಮ್ಮ ತಮ್ಮ ಗೂಡುಗಳಲ್ಲಿ ಚಿಲಿಪಿಲಿ ಗುಟ್ಟುತ್ತಿದ್ದುವು. ಪೂರ್ವದಿಗಂಗನೆಯು ಸೂರ್ಯನೆಂಬ ವರನನ್ನು ವರಿಸುವುದಕ್ಕಾಗಿ ಮನೋಹರವಾದ ಚಿತ್ರಾಂಬರವನ್ನು ಟ್ಟಳೋ ಎಂಬ ಹಾಗೆ ಉದಯರಾಗವು ಶೋಭಿ ಸುತ್ತಿದ್ದಿತು. ಉದಯಾಚಲವೆಂಬ `ಮಾಣಿಕ್ಯದ ಮಂಚದಲ್ಲಿ ಸೂರ್ಯನೆಲ್ಲೆ ತ್ತು ಕೂತುಕೊಂಡನೋ ಎಂಬಂತೆ ಸೂರ್ಯೋದಯವಾಗುತ್ತಿದ್ದಿತು. ಆ ಸೂರ್ಯೋದಯ ಕಾಲದಲ್ಲಿ ಮಂಗಳಪಾಠಕರ ಸ್ತುತಿವಚನಗಳಿಂದ ರಾವಣನು ರತ್ನ ಪರ್ಯ೦ಕದಿಂದಿ ಳಿದು ಗುರುವಾದ ಶುಕ್ರಾಚಾರ್ಯನಿಗೂ ಮುತ್ತಜ್ಜನಾದ ಬ್ರಹ್ಮ ದೇವನಿಗೂ ನಮಸ್ಕ ರಿಸಿ ಅವರ ಆಶೀರ್ವಾದಗಳನ್ನು ಕೈಕೊಂಡು ಸ್ನಾನ ಸಂಧ್ಯಾವಂದನೆಗಳನ್ನು ಮಾಡಿ ಶಿವಾರ್ಚನೆಯನ್ನು ನೆರವೇರಿಸಿ ದಿವ್ಯಾ೦ಒರಾಭರಣಗಳನ್ನು ಧರಿಸಿ ಓಲಗದ ಚಾವಡಿಗೆ ಬಂದನು. ಆ ಸಭಾಸ್ಥಾನಕ್ಕೆ ಇಂದ್ರಜಿತ್ವಹಸ್ತಾದಿ ದನುಜಶ್ರೇಷ್ಠರು ಕೋಟ್ಯಂತರ ಸಂಖ್ಯೆಯಿಂದ ಬಂದು ನೆರೆದರು. ಆಗ ವಿಭೀಷಣನು ತನ್ನ ಗದಾಯುಧವನ್ನು ಕೈಯಲ್ಲಿ ಹಿಡಿದು ಕೊಂಡು ಓಲ ಗಕ್ಕೆ ಬರಲು ; ರಾವಣನು ಕಂಡು ಮುಗುಳುನಗೆಯಿಂದ ಕೂಡಿ ಆತನನ್ನು ಕುರಿತು ಕೈಸನ್ನೆ ಯಿಂದ--ಇತ್ತ ಬಾರೆ ಎಂದು ಕರೆದು ತನ್ನ ಸವಿಾಪದಲ್ಲಿ ಮಣಿಮಯ ವಾದ ಗದ್ದುಗೆಯಲ್ಲಿ ಕುಳ್ಳಿರಿಸಿಕೊಂಡು ಆ ಮೇಲೆ ಸಭಾಸ್ಥಾನದಲ್ಲಿ ನೆರೆದಿರುವ ವೀರಭಟರನ್ನು ನೋಡಿ-ಸೀತೆಯ ಗಂಡನಾದ ರಾಮನು ನಮ್ಮ ಸೆರೆಯಲ್ಲಿ ಸಿಕ್ಕಿ ಬಿದ್ದಿರುವ ಸೀತೆಯನ್ನು ಕರೆದು ಕೊಂಡು ಹೋಗುವುದಕ್ಕಾಗಿ ಕೋಡಗಪಡೆಯೊಡನೆ ಕೂಡಿ ಬಂದಿದ್ದಾನೆಯಂತೆ, ಇದಕ್ಕೆ ನಿಮ್ಮ ನಿಮ್ಮ ಮನೋಗತಾಭಿಪ್ರಾಯಗಳಾ ವುವು ? ಅವುಗಳನ್ನು ಹೇಳಿರಿ ಎಂದು ಕೇಳಿದನು. ಆಗ ತನ್ನ ಕುಮಾರನೂ ಮಹಾ ವೀರನೂ ಆದ ಇಂದ್ರಜಿತ್ತು- ಜೀಯಾ, ಇದೆಷ್ಟರ ಕೆಲಸ ! ಹಾವಿನ ಮರಿಗಳು ಗರು ಡನನ್ನು ಕೆಣಕಿ ಬದುಕಬಲ್ಲು ವೇ ? ಕರಿಕಲಭಗಳು ಮೃಗೇಂದ್ರನನ್ನು ಗೆಲ್ಲಬಲ್ಲುದೇ ? ಗಿಡ ಮರ ಮೆಳೆಗಳ ಮೇಲೆ ಓಡಿಯಾಡಿಕೊಂಡು ಚಿಗುರು ಹೂವು ಹಣ್ಣುಗಳನ್ನು
ಪುಟ:ಕಥಾ ಸಂಗ್ರಹ - ಭಾಗ ೨.djvu/೧೧೫
ಗೋಚರ