ಸೇತುಬಂಧನದ ಕಥ 113 ಸಮುದ್ರನನ್ನು ನೋಡಿ--ಇವನು ನಮ್ಮನ್ನು ಲಕ್ಷೀಕರಿಸದಿರುವನಲ್ಲಾ, ಶಿವ! ಶಿವಾ ! ನಾವಿವನಿಗೆ ಸದರವಾದೆವೇ ? ಎಂದು ಮತ್ತೂ ಹೆಚ್ಚಾಗಿ ರೌದ್ರಾವೇಶಿತ ಮನಸ್ಕನಾಗಿ ಮಗಿನ ರಂಧ್ರಗಳಲ್ಲಿ ಅತ್ಯುಷ್ಣವಾದ ಶ್ವಾಸಗಳನ್ನು ಬಿಡುತ್ತ ಕಣ್ಣುಗಳಲ್ಲಿ ಕಾಲ ರುದ್ರನ ಭಾಳಲೋಚನಗಳ ಕಿಡಿಗಳಂತಿರುವ ಕಿಡಿಗಳನ್ನು ಸುರಿಸುತ್ತ, ನಾವು ಇಂಥ ದುರ್ಮದಾಂಧರಲ್ಲಿ ತಾಳ್ಮೆಯನ್ನು ಧರಿಸುವುದು ಯುಕ್ತವಲ್ಲ. ಲೋಕದಲ್ಲಿ ಯಾವನು ಅತಿ ಮೃದುಸ್ವಭಾವಿಯಾಗಿರುವನೋ ಅಂಥವನು ಸತೀಪುತ್ರಾದಿಗಳಿಂದಲೇ ತಿರಸ್ಕರಿ ಸಲ್ಪಡುವನೆಂದು ಹೇಳುವಲ್ಲಿ ಇತರರ ವಿಷಯವಾಗಿ ಹೇಳತಕ್ಕುದೇನು ? ಎಂದು ಲಕ್ಷ್ಮಣನನ್ನು ನೋಡಿ-ಎಲೈ ತಮ್ಮ ನೇ, ನನ್ನ ಬಿಲ್ಲನ್ನೂ ಮಹೋರಗನಿಗೆ ಸನಾ ನವಾದ ಸರಳನ್ನೂ ಶೀಘ್ರವಾಗಿ ಕೊಡು, ಕ್ಷಣಮಾತ್ರದಲ್ಲಿ ಈ ಸಮುದ್ರವನ್ನು ಬತ್ತಿಸಿ, ತಾಯ್ಕಳಲನ್ನು ಕಾಣಿಸುವೆನು, ಆ ಮೇಲೆ ನಮ್ಮ ಕಪಿಬಲವು ನಿರಾಯಾಸ ವಾಗಿ ಕಾಲಿನಿಂದ ನಡೆದು ಹೋಗಲಿ ಎಂದು ಧನುರ್ಬಾಣಗಳನ್ನು ತೆಗೆದುಕೊಂಡು ಬಿಲ್ಲಿಗೆ ಹೆದೆಯನ್ನೇರಿಸಿ ಅದರಲ್ಲಿ ಅಂಬನ್ನು ತೊಡಿಸಿ ಅಗ್ನಿ ಮಂತ್ರವನ್ನು ಪಠಿಸಿ ಕಿವಿ ವರೆಗೆ ಸೇರಿಬಿಡಲುದುಕನಾದ ಕ ಣದಲ್ಲಿಯೇ ಕಡಲೊಳಗೆ ಉರಿಯಿಳಿದು ತೆರೆಗಳೆಲ ವೂ ಕಾಯ್ತು ಕುದಿದು ತಳಮಳಿಸುತ್ತ ಛಟಛಟತ್ತಿಗಳಿಂದ ಕೂಡಿ ತುಳುಕಿತ್ತೂರು ತಿರುವ ತುಂತುರ್ವನಿಗಳು ಒಳಗಿರುವ ಬಡಬಾಗ್ನಿಯಿಂದ ಕಾಯ್ತುದೋ ಎಂಬಂತೆ ಚತುರ್ದಿಕ್ಕುಗಳಲ್ಲೂ ಸುರಿಯುತ್ತ ಪ್ರಾಣಿಗಳನ್ನು ಸುಡುವುದಕ್ಕಾರಂಭಿಸಲು ; ಆಗ ಜಲಜಂತುಗಳೆಲ್ಲವೂ ಬೆಂದು ಕರಿಮುರಿಯಾಗಿ ತಣ್ಣೀರ್ಗಡಲು ಬಿಸಿನೀರ್ಗಡಲಾ ಗಲು ; ಕೂಡಲೆ ಹಾ, ಸರಿತ್ಪತಿಯೇ ಎಂದು ಹಂಬಲಿಸುತ್ತ ಬಾಯ್ತಿಡುತ್ತ ತಲೆಗೂದ ಲನ್ನು ಕೆದರಿಕೊಂಡು ಗಂಗಾದಿ ಸಕಲ ನದಿಗಳೂ ಬಂದು ಸಮುದ್ರನನ್ನು ಕುರಿತು ಎಲೈ ಪಾಪಿಯೇ, ಅಜ್ಞಾನಿಯೇ, ಬೇಗಹೊರಡು, ರೌದ್ರಾಕಾರವನ್ನು ಧರಿಸಿಬಂದು ಕ್ಷಣಕಾಲದಲ್ಲಿ ಸರ್ವ ಲೋಕಗಳನ್ನೂ ಸುಡಬಲ್ಲಿದನಾದ ಮಹಾವಿಷ್ಣುವಿನ ಕೋಪೋ ದ್ರೇಕದ ಮುಂದೆ ಅಲ್ಪನಾದ ನಿನ್ನ ಗಾಂಭೀರ್ಯವು ಏನು ಮಾಡಬಲ್ಲುದು ? ಅನ್ಯಾ ಯವಾಗಿ ಕೆಟ್ಟು ಹೋಗಬೇಡ ನಡೆ ಎಂದು ಬೋಧಿಸಿ ತಮ್ಮ ಗಂಡನಾದ ಸಮುದ್ರ ರಾಜನನ್ನು ಕರೆದುಕೊಂಡು ಶ್ರೀರಾಮನ ಸನ್ನಿಧಿಗೆ ಬಂದು ತಮ್ಮ ತಮ್ಮ ಕಿವಿಗಳ ಓಲೆಗಳನ್ನು ಕಳೆದು ರಾಮನ ಅಡಿದಾವರೆಗಳ ಮುಂದಿಟ್ಟು ನಮಸ್ಕರಿಸಿದರು. ಅವರೊಳಗೆ ಗಂಗೆಯು ಮುಂದೆ ಬಂದು ರಾಮನನ್ನು ಕುರಿತು--ಎಲೈ ರಘು ಪತಿಯೇ, ದೀನದಯಾಳುವೇ, ನಾನು ನಿನಗೆ ಮಗಳಲ ವೇ ? ತಂದೆಯ ರಕ ಕನೂ ಆದ ನಿನಗೆ ವಿಧೇಯಳೂ ಪುತ್ರಿಯ ಆದ ನನ್ನಲ್ಲಿ ಇಷ್ಟು ಅಗಡುತನವೇಕೆ ? ನೀನು ನನ್ನ ಕೊರಳಲ್ಲಿರುವ ತಾಳೆಯ ಮೇಲಾದರೂ ದೃಷ್ಟಿಯನ್ನಿಡದೆ ಹೋಗುವುದು ಯಾವ ಧರ್ಮವು ? ಲೋಕದಲ್ಲಿ ತಂದೆಯಾದವನು ಮಗಳಿಗೆ ಮುನಿದರೆ ಬಲ್ಲವರು ನಗದಿರು ವರೇ ? ಸಾಕು, ನಿನ್ನ ಕೋಪವನ್ನು ಬಿಡು, ಶರಣಾಗತರಕ್ಷಕನೆಂಬ ಲೋಕವಿಶ್ರುತ ವಾದ ನಿನ್ನ ಬಿರುದನ್ನು ಕಾಪಾಡಿಕೋ, ಇದೋ ! ದೀನನಾಗಿ ಬಂದಿರುವ ನನ್ನ ಪತಿ ಯಾದ ಸಮುದ್ರರಾಜನನ್ನು ಕೃಪಾದೃಷ್ಟಿಯಿಂದ ನೋಡಿ ಅನುಗ್ರಹಿಸು. ಇವನು
ಪುಟ:ಕಥಾ ಸಂಗ್ರಹ - ಭಾಗ ೨.djvu/೧೨೩
ಗೋಚರ