ಪುಟ:ಕಥಾ ಸಂಗ್ರಹ - ಭಾಗ ೨.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

120 ಕಥಾಸಂಗ್ರಹ-೪ ನೆಯ ಭಾಗ ಟ್ಟಣವನ್ನು ಸೇರಬೇಕಾದರೆ ಇನ್ನೂ ನಾಲ್ವತ್ತು ಯೋಜನಗಳ ವರೆಗೂ ಸೇತು ನಿರ್ಮಾ ಣಕಾರ್ಯವು ನಡೆಯಬೇಕಾಗಿದೆ. ಆಗ ದಯಾಳುವಾದ ಶ್ರೀರಾಮನು-ಕಪಿವೀರರೆಲ್ಲ ರೂ ಬಹಳವಾಗಿ ಶ್ರಮ ಪಟ್ಟು ಕಂಗೆಟ್ಟಿದ್ದಾರೆ ಎಂದು ಸುಗ್ರೀವ ವಿಭೀಷಣ ಜಾಂಬವಂತನೊಡನೆ ಯೋಚನೆ ಮಾಡುತ್ತ ಸಮಿಾಪದಲ್ಲಿ ತನ್ನ ಕಾಲನ್ನೊ ತ್ತುತ್ತಿರುವ ನಿಜದಾಸನೂ ಅಸಹಾಯ ಶೂರನೂ ಆಗಿರುವ ಹನುಮಂತನ ಮುಖವನ್ನು ನೋಡಲು ; ಆತನು ಜಗ್ಗನೆದ್ದು ಕೂಡಲೆ ಮೇರುಪರ್ವತವಿದ್ದೆಡೆಗೆ ಹಾರಿ ಅದರ ಸಮೀಪದಲ್ಲಿ ನಿಂತು ಆ ಗಿರಿಯನ್ನು ಬುಡದಿಂದ ತುದಿಯ ವರೆಗೂ ಚೆನ್ನಾಗಿ ನೋಡಿ--ಇದು ಲಕ್ಷ ಯೋಜನಗಳ ಉದ್ದವೂ ಲಕ್ಷ್ಮಯೋಜನಗಳ ಅಗಲವೂ ಉಳ್ಳುದಾಗಿರುವುದು, ಲವಣಾಂಬುಧಿಯ ಕೂಡ ಅಕ್ಷಯೋಜನಗಳ ಅಗಲವೂ ಲಕ್ಷ ಯೋಜನಗಳ ಉದ್ದವೂ ಇರುವುದರಿಂದ ಈ ಒಂದು ಗಿರಿಯನ್ನು ಕಿತ್ತು ತೆಗೆದು ಕೊಂಡು ಹೋಗಿ ಅದರಲ್ಲಿ ಹಾಕಿಬಿಟ್ಟರೆ ಆ ಉಪ್ಪುನೀರ್ಗ ಡಲೇ ಹೂತು ನಿರ್ನಾಮವಾಗಿ ಭೂಮಿಯಾಗುವದು ಎಂದೆಣಿಸಿ ಆ ಗಿರಿಯ ತೋರ ಉದ್ದಗಳಿಗೆ ಸರಿಯಾಗಿ ತನ್ನ ಶರೀರವನ್ನು ಬೆಳಿಸಿ ತನ್ನ ಮಹಾ ದೀರ್ಘವಾದ ಬಾಲ ವನ್ನು ಆ ಪರ್ವತಕ್ಕೆ ಮರು ಸುತ್ತು ಸುತ್ತಿ ಕೀಳಲು ; ಆಗ ಕೆಳಗಣ ಸಪ್ತಲೋಕ ಕಳೂ ಉಲ್ಲೋಲಕಲ್ಲೋಲವಾಗಿ ಸತ್ಯಲೋಕದಲ್ಲಿ ಬ್ರಹ್ಮನು ತನ್ನ ಸಿಂಹಾಸನದಿಂದ ಕೆಳಗೆ ಬಿದ್ದುರುಳಿ ಶೀಘ್ರದಿಂಗೆದ್ದು-ಇದೇನು ಪರಮಾಶ್ಚರ್ಯವು ! ಅಕಾಲದಲ್ಲಿ ಸಕಲ ಲೋಕಗಳಿಗೂ ಅವಸಾನಕಾಲವು ಸಂಪ್ರಾಪ್ತವಾಗಿರುವುದಲ್ಲಾ! ಎಂದು ಯೋಚಿಸಿ ಕಡೆಗೆ ತನ್ನ ಜ್ಞಾನದೃಷ್ಟಿಯಿಂದ ಇದು ಧರ್ಮಸಂಸ್ಥಾಪನಾರ್ಥವಾಗಿ ನರಲೋಕದಲ್ಲಿ ಮನುಜಲೀಲೆಯಿಂದ ನಟಿಸುತ್ತಿರುವ ಮಹಾವಿಷು ವಿನ ಮಹಿಮಾತಿಶ. ಯವು. ಹಾಗಲ್ಲದಿದ್ದರೆ ಗಿಡಮರಗಳ ಮೇಲಾಡುವ ಕೊಡಗಗಳಿಗೆ ಇಷ್ಟು ಕಲಿತ ನವು ಎತ್ತಣಿಂದ ಬರುವುದು ? ಎಂದು ಶೀಘ್ರವಾಗಿ ಅಲ್ಲಿಂದ ಹೊರಟು ಆಂಜನೇಯನ ಬಳಿಗೆ ಬಂದು--ಇದೇನಿದೇನುದ್ದ೦ಡತನವು ? ವಾನರ ವೀರರ ಕಟಕದಲ್ಲಿ ನೀನು ಹುಚ್ಚನೋ ? ಮರ್ಖನೋ ? ಅಥವಾ ರಾಮನಿಗೆ ಹಗೆಯೋ ? ಪ್ರಿಯನೋ ? ಆಹಾ ! ವಿಪರೀತಕಾರ್ಯವನ್ನು ಕೈಕೊಂಡಿರುವೆಯಲ್ಲಾ ! ನಿನ್ನ ಪರಾಕ್ರಮಾತಿಶ ಯಕ್ಕೆ ಫಲವಾವುದು ? ಅದನ್ನು ಹೇಳು, ನಾವು ಕೇಳುವೆವು ಎನ್ನಲು ; ಹನುಮಂತನು ಸಾರದೆಯಾಣ್ಮನನ್ನು ಕುರಿತು-ಅದನ್ನು ಹೇಳಿ ನಾನು ಮಾಡುವುದೇನು ? ಕೇಳಿ ನೀವು ಮಾಡುವುದೇನು ? ನಮಳಿಗದ ವಿಚಾರವು ನಿಮಗೇಕೆ ? ನನ್ನನ್ನು ಮಾತಾ ಡಿಸುವುದರಿಂದ ನಿಮಗಾಗುವ ಪ್ರಯೋಜನವಾವುದು ? ನೀವು ನನಗದನ್ನು ಮೊದಲು ಹೇಳಿರಿ ಎನ್ನು ತ್ತ ಬೊಮ್ಮನನ್ನು ಗಣಿಸದೆ ಆ ಮಹೀಧರವನ್ನು ಬರ ಸೆಳೆದು ಕೀಳುವು ದರಲ್ಲಿ ಉದ್ಯುಕ್ತನಾದನು. ತಿರುಗಿ ತಾವರೆಯಣುಗನು-ಎಲಾ, ನೀನು ಹುಡುಗ ನಾಗಿದ್ದೀಯೆ ? ನಿನಗೆ ಸ್ವಲ್ಪವಾದರೂ ಬುದ್ದಿ ಯಿಲ್ಲವಲ್ಲಾ ! ಈ ಗಿರಿಯನ್ನು ಕಿತ್ತು ಹಾಕುವುದರಿಂದ ಸುರನರೋರಗಾದಿ ಜಗಜೀವಿಗಳ" ಪ್ರಾಣಲತಾಸಂಚಯವು ಮಲೋತ್ಸಾಟಿತವಾಗದಿರುವುದೇ ? ಈ ಮಹಾ ಗಿರಿಯು ವಿವಿಧವಾದ ಲೋಕಾವ