ಕುಂಭಕರ್ಣಸಂಹಾರ 125 ತಿದ್ದಿತು. ಒಂದೆಡೆಯಲ್ಲಿ ಶೂರನಾದ ಇಂದ್ರಜಿತ್ತಿನ ತೇರಿನ ಚೀತ್ಕಾರಧ್ವನಿಯ ಇನ್ನೊಂದು ಕಡೆಯಲ್ಲಿ ಅವನ ರಥಾಶ್ವಗಳ ಹೇಷಾರವವೂ ಮತ್ತೊಂದು ದೆಸೆಯಲ್ಲಿ ವಿರೋಧಿ ನಕ್ಷ ಸ್ಟೈಲಕ್ಕೆ ಕಂಪನವನ್ನುಂಟುಮಾಡುತ್ತಿರುವ ಕೋದಂಡಠಾಂಕಾರದ್ಧಾ ನವೂ ಒಂದು ಸ್ಥಳದಲ್ಲಿ ಇಂದ್ರಜಿತ್ತಿನ ಸಿಂಹನಾದರಭಸವೂ ಕೇಳಿಸುತ್ತ ಕಪಿಸೇನೆಯಲ್ಲಿ ವೂ ಇಂದ್ರ ಚೆನ್ನಯವಾಗಿ ಹೋಯಿತೋ ಎಂಬಂತೆ ಅರಿಗಳ ಮನಸ್ಸಿಗೂ ನೇತ್ರಗಳಿಗೂ ಗೋಚರನಾಗದೆ ಸರ್ವ ದಿಕ್ಕುಗಳಲ್ಲೂ ಸರ್ವವಿಧದಿಂದಲೂ ಕಾಲಭೈರವನಂತೆ ಕಪಿ ಬಲವನ್ನು ಕೊಲ್ಲುತ್ತಿದ್ದನು. ಆಗ ಕಪಿವೀರರು ಮಾಡತಕ್ಕುದೇನು ? ಕೆಲರು ಒಂದು ಕಡೆಯಲ್ಲಿ ನೋಡಿದರು, ಇನ್ನು ಕೆಲರು ತಮ್ಮ ಹಸ್ತಗಳಲ್ಲಿರುವ ಗಿರಿಗಳನ್ನು ಮುಂದಕ್ಕೆ ಮರೆಮಾಡಿ ಇಣಿಕಿ ನೋಡಿದರು. ಕೆಲರು ತಮ್ಮ ಬಾಹುಬಲಪ್ರಚಾರಕ್ಕೆ ಉಪಾಯವನ್ನು ಹುಡುಕುತ್ತಿದ್ದರು, ಮತ್ತು ಕೆಲರು-ನಾವು ಅರಿಯನ್ನು ಕಾಣುವ ರೀತಿ ಯಾವುದು ? ಎಂದು ನಾನಾವಿಧವಾಗಿ ಯೋಚಿಸುತ್ತ ಯಾವ ಉಪಾಯವನ್ನೂ ಕಾಣದೆ ಕಂಗೆಟ್ಟು ಕಳವಳಿಸುತ್ತ ಹಗೆಯನ್ನು ಮನಸ್ಸಿನಲ್ಲಿ ಹಿಡಿದು ಹಿಂಡುತ್ತ ಅರಿ ಬಾಣಘಾತಗಳಿಂದ ತನುಗಳನ್ನು ಕಳೆದು ಕೊಳ್ಳುತ್ರ ಮಹಾಚಿಂತಾಸಮುದ್ರದಲ್ಲಿ ಮುಳುಗಿದ್ದರು. ಅನಂತರದಲ್ಲಿ ಗಜಗನಯನೀಲಾದಿ ಕಪಿಸೇನಾನಾಯಕರು ಹಗೆ ಯಿರುವೆಡೆಯನ್ನರಿಯದೆ ಗಿರಿತರುಗಳನ್ನೆಸೆದು ಆಕಾಶಾಂತರಾಳವನ್ನು ತುಂಬಿಸಿದರು. ಆಗ ರಾವಣಿಯು ವಿಪರೀತವಾದ ಸರಳ್ಳಳೆಯನ್ನು ಸುರಿದು ಕಪಿಸೇನಾನಾಯಕರೆಲ್ಲ ರನ್ನೂ ನೆಲದಲ್ಲಿ ಒರಗಿಸಿ ರಾಮಲಕ್ಷ್ಮಣರ ಸಮಿಾಪಕ್ಕೆ ಬಂದು ಅವರ ಮೇಲೆ ಬಾಣ ಗಳನ್ನು ಪರಂಪರೆಯಾಗಿ ಸುರಿಸುತ್ತಿರಲು ; ಕಪಿವೀರರೊಳಗೆ ರಾಮಲಕ್ಷ್ಮಣರ ಮೈಗಾವಲಿನಲ್ಲಿದ್ದ ಆಂಜನೇಯನ ಸಾಹಸವೆಷ್ಟು ಮಿಗಿಲಾದುದೋ ? ಆ ರಾವಣಿಯ ಕರಗತವಾದ ಬಿಲ್ಲನಿಯ ಜಾಡಿನಿಂದ ಅವನಿರುವ ಸ್ಥಾನವನ್ನರಿದು ಗರುಡ ಪಕ್ಷಿ ಯಂತೆ ಆಕಾಶಕ್ಕೆ ಹಾರಿ ಅವನನ್ನು ಒದೆಯಲು ; ರಾವಣನ ಮಗನು ಮಾಯಾಬಲ ದಿಂದ ರಥವನ್ನು ಬಿಟ್ಟು ಆಚೆಗೆ ಹಾರಿ ತಪ್ಪಿಸಿಕೊಂಡನು. ರಥವು ನುಚ್ಚು ನೂರಾಗಿ ಭೂಮಿಗುದುರಿತು. ಆಗ ಅರಿವೀರನು ಮತ್ತೊಂದು ರಥವನ್ನೇರಿ ಬಾಣಗಳನ್ನು ಪ್ರಯೋಗಿಸಿ ಹನುಮಂತನ ಮೈಯೊಳಗೆ ಎಡೆಯಿಲ್ಲದಂತೆ ತೂರಿಸಿ ತಿರಿಗಿ ರಾಮನ ಮೇಲೆ ಕಣೆಗಳನ್ನು ಸುರಿಸುತ್ತಿರಲು ; ಆಗ ರಾಮನು ಕೋದಂಡವನ್ನು ತೆಗೆದು ಕೊಂಡು ಹೆದೆಯಲ್ಲಿ ದಿವ್ಯಾಸ್ತಗಳನ್ನು ತೊಡಿಸಿ ಅರಿಬಾಣಗಳು ಬರುವ ಮಾರ್ಗ ದಲ್ಲಿಯೇ ಪ್ರಯೋಗಿಸಿ ಅವನ ರಥರಥಾಶ್ಯಸಾರಥಿಪತಾಕೆಗಳನ್ನು ಕತ್ತರಿಸಿ ಕೆಡಹಲು ; ಇದುವರೆಗೂ ನನ್ನೊಡನೆ ಯುದ್ಧ ಮಾಡಿದ ಸುರಾಸುರ ಯಕ್ಷಕಿನ್ನ ರಾದಿ ಮಹಾವೀರ ರಲ್ಲಿ ಈ ರಾಮನಿಗೆ ಸಮಾನನಾದ ಪರಾಕ್ರಮಶಾಲಿಯನ್ನು ನಾನು ಕಾಣೆನು. ಆದುದರಿಂದಲೇ ಪ್ರಚಂಡರಾದ ಖರದೂಷಣಾದಿ ರಾಕ್ಷಸವೀರರನ್ನೂ ಪ್ರಸಿದ್ದ ವೀರ ನಾದ ವಾಲಿಯನ್ನೂ ಕೊಂದನು ಎಂದು ಮನಸ್ಸಿನಲ್ಲಿ ರಾಮನನ್ನು ಹೊಗಳುತ್ತ ಮತ್ತೆ ರಾಮನ ಮೇಲೆ ಬಾಣವೃಷ್ಟಿಯನ್ನು ಕರೆಯಲು ; ಶ್ರೀರಾಮನು ತಿರಿಗಿ ದಿವ್ಯ ಮಾರ್ಗಣಗಳನ್ನು ಪ್ರಯೋಗಿಸಿದನು. ಆ ಬಾಣಗಳು ನಡುದಾರಿಯಲ್ಲೇ ರಾವಣಿಯ
ಪುಟ:ಕಥಾ ಸಂಗ್ರಹ - ಭಾಗ ೨.djvu/೧೩೫
ಗೋಚರ