ಪುಟ:ಕಥಾ ಸಂಗ್ರಹ - ಭಾಗ ೨.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಂಭಕರ್ಣಸಂಹಾರ 129 ಜರಿದುವು. ದಿಗ್ಗಜಗಳ ಕಿವಿಗಳು ಕಿವುಡಾದುವು. ಇಷ್ಟಾದರೂ ಆ ಕುಂಭಕರ್ಣನಿಗೆ ಎಚ್ಚರ ತೋರದಿರಲು ; ಕೆಲವರು ಉಕ್ಕಿನ ದಡಿಗಳನ್ನು ತೆಗೆದು ಕೊಂಡು ಅವುಗಳಿಂದ ಬಡಿದರು. ಕೆಲವರು ಕಬ್ಬಿಣದ ಚಮ್ಮಟಿಗೆಗಳನ್ನು ತೆಗೆದು ಕೊಂಡು ಬಂದು ಹೊಯ್ದರು. ಕಲ್ಕುಟಿಗರು ಉಕ್ಕಿನ ಉಳಿಗಳನ್ನು ತೆಗೆದು ಕೊಂಡು ಬಂದು ಕಬ್ಬೆಟ್ಟದಂತೆ ಬಿದ್ದಿರುವ ಅವನ ಮೈ ಮೇಲಿಟ್ಟು ಕಬ್ಬಿಣದ ಕೊಡತಿಗಳಿಂದ ಕುಟ್ಟಿದರು, “ಕುಂಭಕರ್ಣನಿಗೆ ಆ ಪೆಟ್ಟು ಗಳೆಲ್ಲಾ ಮಲಗುವವರ ಮೈತಟ್ಟಿದಂತೆ ಹಿತವಾಗಿ ಮತ್ತೂ ನಿದ್ರಾಭಾರವು ಹೆಚ್ಚಾಯಿತು. ಆ ಮೇಲೆ ಅವನ ಕೈಕಾಲುಗಳ ಉಗುರು ಕಣ್ಣುಗಳಲ್ಲಿ ಉಕ್ಕಿನ ಮೊನೆ ಯಾದ ಶಲಾಕೆಗಳನ್ನು ಕಾಯ್ದಿಟ್ಟು ಕೊಡತಿಗಳಿಂದ ಜಡಿದರು, ಮತ್ತು ಗದ್ದದಲ್ಲಿ ಅಲಗುಗಳನ್ನು ಬಡಿದರು. ಸಬಳಗಳಿಂದ ಅಳ್ಳೆಗಳನ್ನು ಕುತ್ತಿದರು, ಕೋಡುಗಲ್ಲು ಗಳನ್ನು ತಂದು ಬಾಯಿಯ ಇಪ್ಪಕ್ಕಗಳಲ್ಲಿರುವ ಕೋರೆದಾಡೆಗಳನ್ನು ಬಡಿದು ಮುರಿ ದರು. ಆಗ ಬಹು ಕಾರ್ಯಾಸಕ್ತತೆಯಿಂದ ಕುಂಭಕರ್ಣಾಸುರನ ಸರ್ವಾಂಗಗಳಲ್ಲೂ ಓಡಿಯಾಡುತ್ತಿರುವ ರಾಕ್ಷಸರು ನೀಲಾಚಲದ ಮೇಲಾಡುತ್ತಿರುವ ಮೃಗಗಳಂತೆಯ ಕುಂಭಕರ್ಣನಿಗೆ ಅವರು ಮಾಡುವ ನಿರ್ಬಂಧಗಳು ಆ ಗಿರಿಯನ್ನು ಮೃಗಗಳು ಉಗುರುಗಳಿಂದ ಪರಚಿದಂತೆಯ ಗಣ್ಯವಾಗಲಿಲ್ಲ. ಆ ದಡಿಗ ರಕ್ಕಸನ ಮಗಿನಿಂದ ಹೊರಡುತ್ತಿದ್ದ ನಿಟ್ಟುಸಿರುಗಳ ವೈಹಾಳಿಯಲ್ಲಿ ಸಿಕ್ಕಿ ಲಕ್ಷಾಂತರ ಜನ ರಾಕ್ಷಸರು ತರಗೆಲೆಗಳಂತೆ ಆಕಾಶಮಂಡಲಕ್ಕೆ ಹಾರಿ ಹೋಗುತ್ತಿದ್ದರು, ಅವನ ನಿದ್ರಾಲಯ ವನ್ನು ಪ್ರವೇಶಿಸಿದ ಆಳುಗಳಲ್ಲಿ ಕೆಲವರು ಮೇಲೆ ಹಾರಿ ಭೂಮಿಯಲ್ಲಿ ಬಿದ್ದು ಪ್ರಾಣ ಗಳನ್ನು ನೀಗಿದರು, ಮತ್ತೆ ಕೆಲರು ಆ ನಿಶಾಚರನ ಕೈಕಾಲುಗಳ ನಿಗುರಾಟದಲ್ಲಿ ಸಿಕ್ಕಿ ಹೊಸಗಲ್ಪಟ್ಟು ಹಾಳಾದರು. ತಿರಿಗಿ ರಕ್ಕಸರು ಸಾವಿರಾರು ಕಬ್ಬಿಣದ ಇಕ್ಕಳ ಗಳನ್ನು ತೆಗೆದು ಕೊಂಡು ಬಂದು ಅವನ ಕಿವಿಗಳನ್ನು ಹಿಡಿದು ಕಿತ್ತೂರು, ಸುಣ್ಣವನ್ನೂ ಸಾಸಿವೆಯನ್ನೂ ಕೂಡಿಸಿ ಅರೆದು ಅವನ ಕಣ್ಣುಗಳಲ್ಲಿ ಹಾಕಿದರು. ಆ ಮೇಲೆ ನೂರಾರು ಪೆಟ್ಟೆ ಗಳ ಮೆಣಸಿನ ಕಾಯಿಗಳನ್ನು ಕುಟ್ಟಿ ಪುಡಿಮಾಡಿ ತಂದು ಅವನ ಮಗಿನ ರಂಧ್ರಗಳಲ್ಲಿ ಸುರಿದು ನೂಕಿದರು. ತವರಸೀಸಗಳನ್ನು ಕಾಯ್ದೆ ಕರಗಿಸಿ ಅವನ ಮೈ ಮೇಲೆ ಚೆಲ್ಲಿದರು, ಮಗಿನ ಸೊಳ್ಳೆಗಳಲ್ಲಿ ಸುರಿದಿದ್ದ ವೆಣಸಿನ ಕಾಯಿ ಗಳ ಪುಡಿಯು ಉಸಿರುಗಳ ತೀವ್ರಗತಿಯಿಂದ ಒಳಗೆ ಹೋಗಿ ನೆತ್ತಿಗೇರಿದು ದರಿಂದ ಸೀನಲು ; ಅದು ಜಗದಂತ್ಯ ಮೇಘಧ್ವನಿಯಂತೆ ಹೊರಟು ಬಂದು ಅಲ್ಲಿ ನೆರೆದಿದ್ದವ ರನ್ನು ಹೊಯ್ದಪ್ಪಳಿಸಿಕೊಂದಿತು. ಆಗ ಆ ರಾಕ್ಷಸಭೂತವೇನಾದರೂ ಎದ್ದರೆ ಈ ಊರನ್ನೇ ನುಂಗದೆ ಬಿಡದು, ಎದ್ದೋಡಿಯಾಡುವ ಈ ಮಾರಿಯ ಕಣ್ಣೆದುರಿಗೆ ಸಿಕ್ಕಿದ ಜೀವಿಗೆ ಭೂಲೋಕದ ಋಣವು ತೀರುವುದು, ಈ ಮಾತು ನನ್ನ ಜೀವದಾಣೆ ಸತ್ಯವು ಎಂದು ಕೆಲರು ರಕ್ಕಸರು ಭಯಕಂಪಿತಶರೀರರಾಗಿ ಆ ಪಟ್ಟಣವನ್ನು ಬಿಟ್ಟು ತಮ್ಮ ತಮ್ಮ ಹೆಂಡಿರ ಕಳೊಡನೆ ಹೊರಟು ತಿರಿಗಿ ನೋಡದೆ ಪರಸ್ಥಳಗಳಿಗೆ ಓಡಿದರು. ಇನ್ನು ಕೆಲವರು ತಮ್ಮ ಉತ್ಕೃಷ್ಟ ಪದಾರ್ಥಗಳನ್ನು ಒಟ್ಟುಗೂಡಿಸಿ ತೆಗೆದುಕೊಂಡು ಓಡಿ ಕಾಡುಮುಟ್ಟಿ ದರು. ಬಲು ನಿದ್ದೆಯಿಂದ ಬಿದ್ದಿರುವ ಅವನ ಬಾಯಾಕಳಿಕೆಯಿಂದ