ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
4
ಕಥಾಸಂಗ್ರಹ-೪ ನೆಯ ಭಾಗ

 ಆಗ ಭೂಮ್ಯಾಕಾಶಗಳಲ್ಲಿ ಭಯಂಕರವಾದ ಉತ್ಪಾತಗಳಾದುವು, ಇಂದ್ರಾದಿದೇವ ತೆಗಳೆಲ್ಲಾ ಗಡಗಡನೆ ನಡುಗಿದರು, ಮೇಘಗಳು ರಕ್ತವೃಷ್ಟಿಯನ್ನು ಸುರಿಸಿದುವು. ನಕ್ಷತ್ರಗಳು ಭೂಮಿಗೆ ಉದುರಿದುವು. ಇಂದ್ರಧನುಸ್ಸು ಮೂಡಿ ಆಕಾಶದಲ್ಲಿ ಕವಿ ಯಿತು, ಆ ಮೇಲೆ ವಿಶ್ರವಸ್ಸು ಅನ್ವರ್ಥವಾಗಿ ಆ ಶಿಶುವಿಗೆ ದಶಮುಖನೆಂದು ನಾಮ ಧೇಯವನ್ನಿಟ್ಟನು. ಅನಂತರದಲ್ಲಿ ಮತ್ತೂ ಕೆಲವು ದಿನಗಳು ಗತಿಸಲು ; ಈ ಲೋಕಗಳನ್ನೆಲ್ಲಾ ಒಂದೇ ತುತ್ತು ಮಾಡಿ ನುಂಗುವ ದ್ವಿತೀಯ ಯಮನಂತಿರುವ ಕರಾಳಾಕಾರನಾದ ಮತ್ತೊಬ್ಬ ಮಗನನ್ನು ಕೈಕಸೆಯು ಹೆತ್ತಳು, ಅವನ ಕಿವಿಗಳು ಬಾನೆಗಳಿಗಿಂತ ದೊಡ್ಡವುಗಳಾಗಿದ್ದುದರಿಂದ ಅವನ ತಂದೆಯು ಅವನನ್ನು ಕುಂಭಕರ್ಣನೆಂದು ಕರೆದನು, ಮತ್ತು ಕೆಲವು ದಿವಸಗಳು ಕಳೆದ ಮೇಲೆ ಆ ಕೈಕಸೆಯು ಸೌಮ್ಯಾಕಾರವೂ ಹುಣ್ಣಿಮೆಯ ಚಂದ್ರನಂತೆ ಮುಖವೂ ಕಮಲದೆಸಳುಗಳಂತಿರುವ ಕಣ್ಣಗಳೂ ವಿಸ್ತಾರವಾದ ವಕ್ಷಸ್ಥಲವೂ ತೋರವಾದ ತಲೆಯ ನೀಳವಾದ ತೋಳುಗಳೂ ಆನೆಗಳ ಸೊಂಡಿಲುಗಳಂತಿರುವ ತೊಡೆಗಳೂ ಉಳ್ಳವನಾಗಿ ಸೂರ್ಯನಂತೆ ತೇಜಸ್ಸಿನಿಂದ ಪ್ರಕಾಶಿಸುತ್ತಿರುವವನಾದ ಇನ್ನೊಬ್ಬ ಸುಕುಮಾರನನ್ನು ಹೆತ್ತಳು. ಆ ಮುನಿಯು ಆ ಮಗನನ್ನು ನೋಡಿ ಬಹಳವಾಗಿ ಸಂತೋಷಿಸಿ ಅವನಿಗೆ ವಿಭೀಷಣನೆಂದು ನಾಮವನಿಟ್ಟನು, ಮತ್ತು ಕೆಲವು ದಿನಗಳು ಗತಿಸಿದ ಮೇಲೆ ಮೊರದೋಪಾದಿಯಲ್ಲಿ ಉಗುರುಗಳುಳ್ಳವಳೂ ವಿಕಾರವಾದ ಒಡಲುಳ್ಳವಳೂ ಆದ ಒಬ್ಬ ಮಗಳನ್ನು ಹೆತ್ತಳು, ಮುನಿಯು ಅವಳಿಗೆ ಶೂರ್ಪನಖಿ ಎಂದು ಹೆಸರಿಟ್ಟನು.” ಈ ನಾಲ್ಕು ಮಂದಿಗಳಲ್ಲಿ ದಶಮುಖ ಕುಂಭಕರ್ಣರೆಂಬವರೇ ಮೊದಲು ವೈಕುಂಠದ್ವಾರಪಾಲಕರಾಗಿದ್ದು ಮುನಿಶಾಪದಿಂದ ಎರಡನೆಯ ಜನ್ಮದಲ್ಲಿರುವ ಜಯವಿಜಯರು.

ಅನಂತರದಲ್ಲಿ ಆ ಮುನಿಯು ಮೂರು ಮಂದಿ ಮಕ್ಕಳಿಗೂ ಚೌಲೋಪನಯನಾದಿ ಕರ್ಮಗಳನ್ನು ವಿಧ್ಯನುಸಾರವಾಗಿ ಮಾಡಿಸಿದನು, ಹಿರಿಯ ಮಗನಾದ ದಶಾ ನನನಿಗೆ ಲೋಕದ ಜನರಿಗೆ ತೊಂದರೆಯನ್ನೂ ಸಂಕಟವನ್ನೂ ಕೊಡುವುದೇ ಬಲುಗೆಲಸವಾಗಿದ್ದಿತ್ತು. ಎರಡನೆಯವನಾದ ಕುಂಭಕರ್ಣನಿಗೆ ಸಿಕ್ಕಿದ ಜನರನ್ನು ಹಿಡಿದು ಭಕ್ಷಿಸುವುದೇ ಮುಖ್ಯೋದ್ಯೋಗವಾಗಿದ್ದಿತ್ತು, ವೇದಶಾಸ್ತ್ರಗಮಾದಿಗಳ ವಿನೋದವು ವಿಭೀಷಣನ ಕೃತ್ಯವಾಯಿತು. ಹೀಗಿರಲು ಮತ್ತೊಂದು ದಿವಸ ಪಿತೃ ದರ್ಶನಾರ್ಥವಾಗಿ ಲಂಕಾನಗರದಿಂದ ಬಂದು ಹೋಗುತ್ತಿದ್ದ ವೈಶ್ರವಣನನ್ನು ನೋಡಿದ ಕೈಕಸೆಯು ತನ್ನ ಹಿರಿಯ ಮಗನನ್ನು ಕರೆದು--ಎಲೈ ದಶವದನನೇ ! ಬ್ರಹ್ಮಕುಲಸಂಜಾತನಾದುದಕ್ಕೆ ಈ ಕುಬೇರನಂತೆ ಪೂರ್ಣೆಶ್ವರ್ಯಸಂಪನ್ನನಾದರೆ ಸಾಫಲ್ಯವು. ಹಾಗಾಗದಿದ್ದರೆ ಯಲಹದ ಮರವು ಕಾಯಿಬಿಟ್ಟಂತಾಗುವುದು ಎನಲು ; ಆಗ ದಶ ಮುಖನು-ಎಲೈ ತಾಯಿಯೇ, ನಾನು ಹೆಚ್ಚಾಗಿ ಮಾತಾಡಿದರೆ ನನ್ನನ್ನು ಗಳಹುತವನೆನ್ನುವಿರಿ, ನಾನು ನಿಮ್ಮ ದಯೆಯಿಂದ ಇನ್ನು ಮೇಲೆ ತಪಸ್ಸನ್ನು ಮಾಡುವುದಕ್ಕೆ ಆರಂಭಿಸುವೆನು, ಅದರಿಂದ ನಮ್ಮ ಮುತ್ತಜ್ಜನಾದ ಬ್ರಹ್ಮದೇವರನ್ನು ಮೆಚ್ಚಿಸಿ ಬಹು ವಿಧವಾದ ವರಗಳನ್ನು ಪಡೆದು ನಮ್ಮಣ್ಣನಾದ ಈ ಕುಬೇರನ ಭಾಗ್ಯಕ್ಕಿಂತಲೂ