ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

134 ಕಥಾಸಂಗ್ರಹ-೪ ನೆಯ ಭಾಗ ಕರಿಸು. ಯುದ್ಧದಿಂದ ಇಹಪರಗಳಲ್ಲಿ ಕೀರ್ತಿಮುಕ್ಕಿಗಳುಂಟಾಗುವುವೆಂದು ನಿಲ್ಲ ಯಿಸು. ನನ್ನ ದೃಢನಿಶ್ಚಯವನ್ನು ಕೇಳು, ಇಹಪರ ಸುಖಸಂಪಾದನೆಗೆ ಹಿಂದಿರುಗದೆ ಮಾಡುವ ಜಗಳವೇ ಸಾಧನವು ಎಂದು ನಾನು ನಿರ್ಧರಿಸಿರುವೆನು, ನೀನೂ ಅದೇ ರೀತಿ ಯಲ್ಲಿ ನಿಶ್ಚಯಿಸಿಕೊಂಡು ವಿರೋಧಿಗಳ ಪಡೆಯನ್ನು ಹೊಡೆದು ಕೆಡಹೆಂದು ವೀರೋ ಚಿತ ತಾಂಬೂಲವನ್ನು ಕೊಟ್ಟು ಅಪ್ಪಣೆಯನ್ನಿತ್ತನು. ಆಗ ಕುಂಭಕರ್ಣಾಸುರನು ತಾಂಬೂಲವನ್ನು ತೆಗೆದುಕೊಂಡು ಎದ್ದು ನಮಸ್ಕರಿಸಿ ರಾವಣನನ್ನು ಕುರಿತು ಎಲೇ ಅಣ್ಣಾ, ನನ್ನ ಮಾತನ್ನು ಕೇಳು. ಒಪ್ಪುತ್ತಿರುವ ಕಪಿಬಲಾಂಬುಧಿಯನ್ನು ಕುಡಿದು ಬರಿದುಮಾಡಿ ಆ ಕೋಡಗಗಳರಸನನ್ನು ಹಿಡಿದು ತಂದು ನಿನಗೊಪ್ಪಿಸುವೆನು. ಮೂರು ಲೋಕಗಳೂ ಮೆಚ್ಚಿ ಹೊಗಳುವಂತೆ ರಾಮನೊಡನೆ ಯುದ್ಧ ಮಾಡುವೆನು. ಮುಂದಾಗುವ ಜಯಾಪಜಯಗಳು ದೈವಾಧೀನವಾದುವುಗಳು, ಮತ್ತು ಅವು ನಿನ್ನ ಭಾಗ್ಯಾನುಸಾರವಾದುವುಗಳು ಎಂದು ಹೇಳಿ ಲೋಕವನ್ನೆಲ್ಲಾ ತೀರಿಸುವುದಕ್ಕಾಗಿ ಹೊರಟ ಅಂಜನಾಚಲದಂತಿರುವ ತಮ್ಮನನ್ನು ನೋಡಿ ರಾವಣನು ಸಂತೋಷಸಂಭ್ರ ಮಯುಕ್ತನಾಗಿ ರತ್ನ ಖಚಿತವಾದ ವಿವಿಧಾಭರಣಗಳನ್ನು ತರಿಸಿ ತಾನೇ ತೊಡಿಸಿ ದನು, ಆ ಮೇಲೆ ಅಂಜನಗಿರಿಯು ಮಂದರಗಿರಿಯನ್ನು ಧರಿಸಿತೋ ಎಂಬಂತೆ ಕುಂಭ ಕರ್ಣನ ತಲೆಯಲ್ಲಿ ರತ್ನ ಕಿರೀಟವು ಝಗಝಗಿಸಿತು, ಕಾರ್ಮುಗಿಲೆಡೆಯಲ್ಲಿ ಇಂದ್ರಧ ನುಸ್ಸು ಮಡಿದಂತೆ ಖಳನ ಗಳದಲ್ಲಿ ಪಂಚರತ್ನ ಗಳ ಪದಕವು ಥಳಥಳಿಸಿತು, ಮೇರು ಮಹೀಧರದ ಹಿಂದುಮುಂದೆಸೆಗಳಲ್ಲಿ ಪರಿಶೋಭಿಸುವ ನೈದಿಲಾವರೆಗಳ ಗೆಳೆಯರಂತೆ ಸುರವಿರೋಧಿಯ ಕಿವಿಗಳಲ್ಲಿ ಮಾಣಿಕ್ಯವಜ್ರ ಗಳ ಕಡುಕುಗಳು ಒಪ್ಪಿದುವು. ಸಮು ದ್ರಮಥನಕಾಲದಲ್ಲಿ ಮಂದರಗಿರಿಗೆ ಸುತ್ತಿದ ವಾಸುಕಿಯನ್ನು ಪಳಿಯುತ್ತಿರುವ ಕಾಲ್ಕಡಗಗಳು ರಕ್ಕಸನ ಕಾಲುಗಳಲ್ಲಿ ಮೆರೆದುವು. ಬಾನ್ಗಳದಲ್ಲಿ ಹೊಳೆಯುವ ಸಂಜೆ ಗೆಂಪಿನಂತೆ ಮೊಬ್ಬಿಗೆ ನುಡಿಯಲ್ಲಿ ಚಂದ್ರ ಗಾವಿಯ ವಸ್ತ್ರವು ಶೋಭಿಸಿತು. - ಆ ಬಳಿಕ ರಾವಣಾನುಜನು ಸಕಲ ವಾದ್ಯಗಳ ರಭಸದೊಡನೆ ಕೂಡಿ ರಾಜಾ ಲಯವನ್ನು ಬಿಟ್ಟು ಹೊರಡಲು ; ತತ್‌ಕ್ಷಣದಲ್ಲೇ ಅವನ ಮಹಾರಥವು ಬಂದು ಸಿದ್ದ ವಾಗಿ ನಿಂತಿತು. ಅದಕ್ಕೆ ಕಬ್ಬಿಣದ ಹೊರಜಿಗಳೂ ಉಕ್ಕಿನ ಅಚ್ಚು ಗಳೂ ಲೋಹದ ಗಾಲಿಗಳೂ ಅದ್ಭುತವಾದ ಧ್ವಜಪತಾಕೆಗಳೂ ಒಪ್ಪುತ್ತಿದ್ದುವು. ಅದರ ಸಂಗತಿ ಯನ್ನೆಲ್ಲಾ ವಿವರಿಸಿಹೇಳುವುದಕ್ಕೆ ಚತುರ್ಮುಖನೇ ಸಮರ್ಥನು, ಆ ರಥವನ್ನು ಎಳೆ ಯುವುದಕ್ಕಾಗಿ ಹದಿನೆಂಟುಸಾವಿರ ಮಹಾ ಗಜಗಳು ಕಟ್ಟಲ್ಪಟ್ಟಿದ್ದುವು. ಇಷ್ಟು ಹವ ಣಿಂದ ಬಂದು ನಿಂತಿರುವ ರಥವನ್ನು ನೋಡಿ ಕುಂಭಕರ್ಣನು ಸಂತೋಷಿಸಿ ಈ ರಥ ವನ್ನೇರಿದರೆ ಭೂಮಿಯು ನಡುಗಿ ನಗರದಲ್ಲಿ ವಿವಿಧವಾದ ಅಪಾಯಗಳುಂಟಾದಾವೆಂ ದು ತಾನು ರಥದೊಡನೆ ಕಾಲಿಂದ ನಡೆದು ಬರುತ್ತ ಪಟ್ಟಣದ ಏಳುಸುತ್ತಿನ ಕೋಟೆ ಯನ್ನು ದಾಟಿಬಂದು ಆ ರಥವನ್ನೇರಲು ; ಅದರ ತೊಂಭತ್ತಾರು ಗಾಲಿಗಳೂ ಚೀತ್ರ ರಿಸುತ್ತಿದ್ದುವು. ಆಗ ಆ ಖಳನೊಡನೆ ಎರಡು ಕೋಟಿ ಬ್ರಹ್ಮರಾಕ್ಷಸರ ಬಳಗವೂ ಹತ್ತು ಕೋಟಿ ಶಾಕಿನೀಡಾಕಿನಿಯರ ತಿಂತಿಣಿಯ ಅಸಂಖ್ಯಾತ ರಾಕ್ಷಸರ ಸಾಲೂ ಆನೆಗಳ