ಮಿಗಿಲಾದ ಭಾಗ್ಯವುಳ್ಳವನೆಂಬ ಪ್ರಖ್ಯಾತಿಯನ್ನು ಹೊಂದುವೆನು ಎಂಬುದಾಗಿ ಹೇಳಿ ಸಹೋದರರೊಡನೆ ಹೊರಟು ಪಡುವಣ ಕಡಲ ದಡದಲ್ಲಿರುವ ಗೋಕರ್ಣವೆಂಬ ಮಹಾ ಪುಣ್ಯಕ್ಷೇತ್ರಕ್ಕೆ ಬಂದನು, ಆ ಪ್ರದೇಶದಲ್ಲಿ ತಪೋಯೋಗ್ಯವಾದ ಆಶ್ರಮ ವನ್ನು ಮಾಡಿಕೊಂಡು ಅಲ್ಲಿ ಶಾಸ್ತ್ರೋಕ್ತವಾದ ವಿಧಿವಿಧಾನಗಳಿಂದಲೂ ನೇಮನಿಷ್ಠೆಗ ೪೦ದಲೂ ಕೂಡಿದವರಾದ ಮೂರು ಮಂದಿ ಸಹೋದರರೂ ನಿಶ್ಚಲಚಿತ್ತರಾಗಿಯೂ ತ್ವಕ್ಕು ಚಕ್ಷುಸ್ಸು ಶ್ರೋತ್ರ ಜಿಹ್ವಾ ಘ್ರಾಣಗಳೆಂಬ ಪಂಚೇಂದ್ರಿಯಗಳಿಗೆ ಸ್ಪರ್ಶ ರೂಪ ಶಬ್ದ ರಸ ಗಂಧಗಳೆಂಬ ವಿಷಯಗಳೊಡನೆ ಸಂಬಂಧವಿಲ್ಲದವರಾಗಿಯ ನಿರಾ ಹಾರಿಗಳಾಗಿಯೂ ಇದ್ದುಕೊಂಡು ಚಿತ್ತೈಕಾಗ್ರತೆಯನ್ನು ಹೊಂದಿ ಅತ್ಯುಗ್ರವಾದ ತಪಸ್ಸನ್ನು ಮಾಡಲಾರಂಭಿಸಿದರು, ಅವರೊಳಗೆ ಮೊದಲನೆಯವನಾದ ದಶಮುಖನು ಮಳೆ ಚಳಿಗಾಲಗಳಲ್ಲಿ ಬೆಟ್ಟದ ತಪ್ಪಲುಗಳಲ್ಲಿರುವ ಹೊಳೆಗಳಲ್ಲಿಯ ಬೇಸಿಗೆಯ ಕಾಲದಲ್ಲಿ ಪಂಚಾಗ್ನಿಗಳ ಮಧ್ಯದಲ್ಲಿಯೂ ನಿಂತು ಘೋರವಾದ ತಪಸ್ಸನ್ನು ಮಾಡುತ್ತಿದ್ದನು, ಕುಂಭಕರ್ಣನು ಒಂದೇ ಕಾಲಿನಿಂದ ನಿಂತು ತಪಸ್ಸನ್ನು ಮಾಡುತ್ತಿದ್ದನು. ವಿಭೀಷಣನು ಊರ್ಧ್ವಮುಖಿಯಾಗಿ ನಿಂತು ಸೂರ್ಯನನ್ನು ನೋಡುತ್ತಾ ತಪಸ್ಸನ್ನು ಮಾಡುತ್ತಿದ್ದನು.
ಹೀಗಿರಲು ದಶಮುಖನು ತನ್ನ ತಪಸ್ಸಿನಲ್ಲಿ ಕಳೆದುಹೋಗುತ್ತಿರುವ ಪ್ರತಿಸಂವತ್ಸರದ ಕಡೆಯ ದಿನದಲ್ಲಿ ಕ್ರಮವಾಗಿ ತನ್ನದೊಂದೊಂದು ತಲೆಯನ್ನು ಕಡಿದು ಅಗ್ನಿಯಲ್ಲಿ ಹೋಮಮಾಡುತ್ತ ಬಂದು ಹತ್ತನೆಯ ಸಂವತ್ಸರದ ಕಡೆಯಲ್ಲಿ ಎಂದಿನಂತೆ ತನ್ನ ಹತ್ತನೆಯ ತಲೆಯನ್ನು ಕತ್ತರಿಸುವುದಕ್ಕೆ ಪ್ರಯತ್ನಿಸಲು ; ಆಗ ಬ್ರಹ್ಮದೇವನು ಅವನ ಬಳಿಗೆ ಬಂದು--ಎಲೈ ಮಗನಾದ ದಶಮುಖನೇ, ನೀನು ಬಹಳವಾಗಿ ಬಳಲಿದೆ. ನಿನಗೆ ಬೇಕಾದ ವರಗಳನ್ನು ಕೇಳು, ಕೊಡುವೆನೆನಲು ; ಆಗ ದಶಮುಖನು ಕಣ್ಣೆರೆದು ತನ್ನ ಮುತ್ತಜ್ಜನನ್ನು ನೋಡಿ, ಅತಿ ಭಯಭಕ್ತಿಯಿಂದ ಆತನ ಪಾದಗಳಿಗೆ ವಂದಿಸಿ ಎದ್ದು ಕೈಮುಗಿದುಕೊಂಡು ನಿಂತು-ಎಲೈ ಜಗಜ್ಜನಕನಾದ ಕರುಣಾಳುವೇ, ಸುರಾಸುರೋರಗ ಯಕ್ಷರಾಕ್ಷಸ ಗರುಡ ಗಂಧರ್ವ ಸಿದ್ಧ ಸಾಧ್ಯಾದಿಗಳೊಳಗೆ ಯಾರಿಂದಲೂ ಮರಣವು ಸಂಭವಿಸಿದಂತೆ ನನಗೆ ವರವನ್ನು ಕೊಡು, ಉಳಿದ ಮನುಷ್ಯರೂ ಮೃಗಪಕ್ಷಿಗಳೂ ನನಗೆ ಗಣನೆಯಿಲ್ಲವೆಂದು ಹೇಳಲು; ಚತುರ್ಮುಖನು-ಹಾಗೆಯೇ ಆಗಲಿ ಎಂದು ಹರಸಿ ವರವನ್ನು ಕೊಟ್ಟು--ನೀನು ಮೊದಲು ಕಡಿದು ಹೋಮಮಾಡಿದ ತಲೆಗಳೆಲ್ಲಾ ತಿರುಗಿ ಹುಟ್ಟಲಿ, ಇನ್ನು ಮೇಲೆ ನಿನ್ನ ತಲೆಯನ್ನು ಯಾರು ಕಡಿದಾಗ್ಗೂ ಯಥಾವತ್ತಾಗಿ ಮೂಡುತ್ತಿರಲಿ ಎಂದು ಸಂತೋಷದಿಂದ ತಾನಾಗಿಯೇ ಎರಡು ವರಗಳನ್ನು ಕೊಟ್ಟು ಅಲ್ಲಿಂದ ಹೊರಟು ವಿಭೀಷಣನಿದ್ದ ಸ್ಥಳಕ್ಕೆ ಬಂದು-ಮಗನಾದ ಎಲೈ ವಿಭೀಷಣನೇ, ತಪಸ್ಸಿನಿಂದ ಬಹಳವಾಗಿ ಬಳಲಿದೆಯಲ್ಲಾ! ಕಂದಾ, ಕುಲಶಿರೂಮಣಿಯೇ! ನಿನಗಿಷ್ಟವಾದ ವರಗಳನ್ನು ಬೇಡು ಎನಲು; ಅವನು ತನ್ನ ಮುತ್ತಾತನಿಗೆ ಸಾಷ್ಟಾಂಗನಮಸ್ಕಾರವನ್ನು ಮಾಡಿ, ಕೈಗಳನ್ನು ಜೋಡಿಸಿ, ನಿಂತುಕೊಂಡು--ಎಲೈ ಮಹಾತ್ಮನಾದ ಮುತ್ತಜ್ಜನೇ, ನಾನು ನಿನ್ನ ಪಾದಕಮಲಗಳನ್ನು ಕಂಡುದರಿಂದ ಕೃತ