ಪುಟ:ಕಥಾ ಸಂಗ್ರಹ - ಭಾಗ ೨.djvu/೧೫೭

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂದ್ರಜಿತ್ಸಂಹಾರ 147 ಆತನೆದ್ದು ಕೈಮುಗಿದು ನಿಂತು-ಜೀಯಾ, ನಾನು ಏನು ಹೇಳಲಿ ? ಈ ದಿವಸ ಯುದ್ಧ ದಲ್ಲಿ ನಮಗೆ ಜಯವುಂಟಾಗುವುದೆಂದು ಹೇಳುವುದಕ್ಕಾಗುವುದಿಲ್ಲ, ನಮ್ಮ ಬಲಕ್ಕೆ ಮರಣವು ತಪ್ಪದು ಎಂದು ಹೇಳಿ ಸುಗ್ರೀವನನ್ನು ಕರೆದು ಏಕಾಂತದಲ್ಲಿಈ ದಿವಸ ನಮಗೆ ಅಪಜಯವೂ ಮರಣವೂ ಬಾರದೆ ಇರಲಾರದು. ಅದು ಕಾರಣ ಈ ಅಪಾಯ ನಿವಾರಣೆಗೆ ಸಾಧ್ಯವಾದ ಪ್ರಯತ್ನವನ್ನು ಮಾಡು ಎಂದು ಹೇಳಿದನು. ಸುಗ್ರೀವನು ಆ ಮಾತುಗಳನ್ನು ಕೇಳಿ ಯುಕ್ತವೆಂದು ಭಾವಿಸಿ ಕೂಡಲೆ ರಾಮನ ಸವಿಾಪದಲ್ಲಿ ಸುಷೇಣಾಂಜನೇಯರನ್ನು ಇರಿಸಿ ಕಪಿಗಳ ಪಡೆಯ ಒಡ್ಡಿನ ಮಡಣ ಕಡೆಯಲ್ಲಿ ಶತಬಲಿವಿಭೀಷಣರನ್ನು ನೇಮಿಸಿ, ಗವಾಕ್ಷಶರಭಮೈಂಧದ್ವಿವಿದರನ್ನು ಬಲದ ಪಶ್ಚಿಮಭಾಗದ ಕಾವಲಿಗೆ ನಿಲ್ಲಿಸಿ ತಾನು ಯುದ್ಧಕ್ಕೆ ಸನ್ನದ್ಧನಾಗಿ ನಿಂತು ನೀಲನನ್ನು ಕರೆದು-ಕಪಿವೀರ ಪರಿವಾರವೆಲ್ಲವೂ ಯುದ್ಧಕ್ಕೆ ನಡೆಯಲಿ ಎಂದು ತಿಳಿಸಲು ; ಆ ಕೂಡಲೆ ಸರ್ವಸೇನಾನಾಯಕನಾದ ನೀಲನ' ಆಜ್ಞಾನುಸಾರವಾಗಿ. ಕಪಿವಾಹಿನೀಪತಿಗಳು ತಮ್ಮ ತಮ್ಮ ಬಲದೊಡನೆ ಗಿರಿತರು ಶಿಲಾದ್ಯಾಯುಧಗಳನ್ನು ತೆಗೆದು ಕೊಂಡು ದಿಗ್ವಿತಿಗಳೊಡೆಯುವಂತೆ ಆರ್ಭಟಿಸುತ್ತ ಕಾಳೆಗದ ಕಣದಲ್ಲಿ ಬಂದು. ನಿಂತರು. ಆ ಮೇಲೆ ಪ್ರಳಯ ಕಾಲದಲ್ಲಿ ಮಹಾಸಾಗರಗಳು ಬಂದು ಒಂದ ನ್ಯೂ ಂದು ತಾಗಿ ಅಪ್ಪಳಿಸಿ ಬೆರೆಯುವಂತೆ ವಾನರ ನಿಶಾಚರ ಬಲಗಳ ಚಣಿಗಾಳೆ ಗವು ಕಂಗೊಳಿಸಿತು, ಕಪಿರಾಕ್ಷಸರ ಬಡಿದಾಟದಲ್ಲಿ ಎಸೆಯುವ ಗಿರಿತರುಗಳಿಂದಲೂ ಪ್ರಯೋಗಿಸುವ ಬಾಣಗಳಿಂದಲೂ ಅಂಬರತಳವು ಮುಚ್ಚಿ ಸೂರ್ಯರಶ್ಮಿಯ ಸಂಚಾ ರಕ್ಕೆ ತಡೆಯಾಯಿತು, ಕಪಿವೀರರು ರಾಕ್ಷಸವೀರರನ್ನು ತಿರಸ್ಕರಿಸಿ ಎಸೆದರು. ರಾಕ್ಷಸ ವೀರರು ಕಪಿವೀರರನ್ನು ಬೀಳ್ಳಡಿದು ಬೊಬ್ಬರಿದರು. ಕಡೆಗೆ ಕಪಿವಾಹಿನಿಯ ಪರಾಕ್ರ ಮಾಗ್ನಿ ಯು ಕಲ್ಪಾಂತ ಕಾಲಾಗ್ನಿಯನ್ನು ಪಳಿದು ನಿಶಾಚರವ್ಯೂಹವನ್ನು ದಹಿಸುತ್ತಿ ರಲು ; ಆಗ ವೀರರಸತರಂಗಿತತಾಮಾಕ್ಷನಾದ ಇಂದ್ರಜಿತ್ತು ಮಾಯಾಶಕ್ತಿಯನ್ನ ವ ಲಂಬಿಸಿ ವಾನರವ್ಯೂಹದೊಳಗೆ ಮೈದೋರಿ ಸಂಹಾರೋದ್ಯುಕ್ತನಾಗಲು ; ಆ ಮೇಲೆ ಮಾಯಾ ವಿದ್ಯಾ ಪ್ರಚಾರದಲ್ಲಿ ಪ್ರಸಿದ್ದ ನಾದ ಶಂಬರನೋ ? ಮಾರೀಚನೋ ? ವಿದ್ಯು ಜೈ ಹೈನೋ ? ಪ್ರಳಯ ಕಾಲದಲ್ಲಿ ಮುನಿದು ಅಖಿಲಭುವನಾವಳಿಯ ಕೊಲೆಗೆಲಸಕ್ಕೆ ನುಗ್ಗಿದ ಫಾಲಾಂಕನೋ ? ಎಂಬ ಭ್ರಾಂತಿಯುಂಟಾಯಿತು. ಪಾಕಶಾಸನ ವೈರಿಯು ಮಹಾಶಾಂಬರಿಯನು ಬೆಳಿಸಿ ಪ್ರಂಖಾನುಪುಂಖವಾಗಿ ಪ್ರಯೋಗಿಸುತ್ತಿರುವ ಬಾಣ ಗಳು ಕಣೆಗಳು ಗರಗಸಗಳು ಡೊಂಕಣಿಗಳು ಪರಿಘಗಳು ಪರಶು ಗಳು ಮುಸುಂಡಿ ಗಳು ಕುಂತಗಳು ಖಡ್ಡ ಗಳು ಅಡಾಯುಧಗಳು ಗದೆಗಳು ಎಂಬ ಈ ಮೊದಲಾದ ನಾನಾ ವಿಧಾಯುಧಗಳ ರೂಪವನ್ನು ಧರಿಸಿ ಬಂದು ಕಪಿಬಲವನ್ನು ಹೊಕ್ಕು ಸವರಿ ದುವು, ಕೊಚ್ಚಿದುವು, ಚುಚ್ಚಿದುವು ನುಗ್ಗಿದುವು. ಕಡಿದುವು. ಮೇಲೆ ಬಿದ್ದುವ ಕೆತ್ತಿ ದುವು. ಕೊರೆದುವು. ಹಾರಿಸಿದುವು. ಹೋಳುಮಾಡಿದುವು. ಬೀಳಿಸಿದುವು. ಮೈಮರಿಸಿ ದುವು, ಮತ್ತು ಕೆಲವು ಮಹಾ ಪರ್ವತಗಳಾಗಿ ಬಿದ್ದು ವಾನರವೀರರನ್ನು ಭೂಗತ ಮಾ ಡಿದುವು. ಇನ್ನು ಕೆಲವು ಹುಲಿಗಳಾಗಿ ಬಂದು ಕುತ್ತಿಗೆಗಳನ್ನು ಹಿಡಿದು ರಕ್ತಗಳನ್ನು