ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂದ್ರಜಿತ್ಸಂಹಾರ 151 ಮದ್ದಲೆಗಳನ್ನು ಬಾರಿಸಿಕೊಂಡು ಹಾಡುತ್ತಿದ್ದುವು. ಇನ್ನು ಕೆಲವು ಆನೆಗಳ ಸೊಂಡಿ ಲುಗಳನ್ನು ತೆಗೆದು ಕೊಂಬೂದಿಕೊಂಡು ಮೆರೆಯುತ್ತಿದ್ದುವು, ಮತ್ತು ಕೆಲವು ಕುದುರೆಗಳ ಕಾಲ್ಗೊರಸುಗಳನ್ನು ತೆಗೆದು ಕೊಂಡು ತಾಳವನ್ನು ಹೊಡೆಯುತ್ತಿದ್ದುವು. ಕೆಲವು ಹಾಡುಗಳನ್ನು ಹಾಡಿ ನಲಿಯುತ್ತಿದ್ದುವು. ಮತ್ತೆ ಕೆಲವು ಕುಣಿದು ಕುಪ್ಪಳಿ ಸುತ್ತ ರಾವಣಿಯನ್ನು ಹರಸುತ್ತಿದ್ದುವು. ಒಹ್ಮರಕ್ಷಸ್ಸುಗಳು ಕಪಿಬಾಲಗಳನ್ನು ತೆಗೆದು ಕೊಂಡು ಉಡಿದಾರಗಳನ್ನು ಕಟ್ಟಿಕೊಂಡು ನಿಡುಗರುಳ್ಳ ಯಜ್ಞಸೂತ್ರಗ ಇನ್ನು ಧರಿಸಿ ತಲೆಬುರಡೆಗಳ ಮಾಲೆಗಳನ್ನು ಕತ್ತುಗಳಿಗೆ ಹಾಕಿಕೊಂಡು ಕೈಗಳಲ್ಲಿ ತಲೆಯೋಡುಗಳನ್ನು ಹಿಡಿದು ರಣಾಂಗಣದಲ್ಲೆಲ್ಲಾ ತಿರುಗುತ್ತ--ಲೋಕದಲ್ಲಿ ವೈರವು ಪ್ರಬಲಿಸಲಿ ; ಯುದ್ದವು ಹೆಚ್ಚಲಿ; ಪ್ರಾಣಿ ಜಾಲವು ಮಡಿಯಲಿ ಎಂದು ಹರಸುತ್ತ ಬರುತ್ತಿದ್ದುವು. ವಿಭೀಷಣನು ಅದನ್ನೆಲ್ಲಾ ನೋಡುತ್ತ ಎಲ್ಲಿ ನೋಡಿದರೂ ಮಜ್ಯ ಮಾಂಸ ನೆಣ ನರ ಎಲುವು ಕೊಬ್ಬು ರಕ್ತ ಇವುಗಳಿಂದ ಕೆಸರಾಗಿದ್ದುದರಿಂದ ಭೂಮಿ ಯಲ್ಲಿ ಕಾಲಿಕ್ಕಿದ ಕೂಡಲೆ ಸೊಂಟದ ವರೆಗೂ ಹೂತುಹೋಯಿತು. ಗದೆಯನ್ನೂರಿ ಕೊಂಡು ಮೆಲ್ಲನೆ ಮೇಲೆದ್ದು ಎಚ್ಚರಿಕೆಯಿಂದಲೂ ಪ್ರಯಾಸದಿಂದಲೂ ಹೆಜ್ಜೆಯಿ ಡುತ್ತ ಬಂದು ರಾಮಲಕ್ಷ್ಮಣರ ಇರುವಿಕೆಯನ್ನು ನೋಡಿ ಅಗಾಧವಾದ ಶೋಕಾಂ ಬುಧಿಯಲ್ಲಿ ಒಡಲನ್ನಿಡಾಡಿ-ವನಜನಾಭನೇ, ಮುಕುಂದನೇ, ಅಪಾರ ಮಹಿಮಾ ರಾಜಿತನೇ, ನೃತ್ಯನಾದ ನನಗೆ ತಿಳಿಸದೆ ಈ ವಿಧವಾದ ದುರವಸ್ಥೆ ಗೊಳಗಾಗಬಹುದೇ? ಯಾವಾಗಲೂ ಮಾಯೆಯು ನಿನ್ನ ಧೀನವಲ್ಲವೇ ? ಇಂಥ ಮರವೆಯು ನಿನಗೆ ಹೇಗೆ ಬಂದಿತು ? ನಿಜದಾಸನಾದ ನನಗೆ ಕೊಟ್ಟ ಭಾಷೆಯನ್ನು ಮರೆತು ಅನಾಥನಾದ ನನ್ನನ್ನು ಬಿಟ್ಟು ವೈಕುಂಠಲೋಕಕ್ಕೆ ತೆರಳಬಹುದೇ ? ನೀನು ಈ ವಿಧವಾಗಿ ನರನಾಟ ಕವನ್ನು ನಟಿಸಿ ಪ್ರಾಣಗಳನ್ನು ಬಿಟ್ಟರೆ ಇನ್ನು ದೀನನಾದ ನಾನು ಯಾರನ್ನು ಮರೆ ಹೊಗಬಲ್ಲೆನು ? ಒಡೆಯನಾದ ನೀನಿಂತಾದುದರಿಂದ ನಾನು ನಡುಗಾಡಿನಲ್ಲಿ ಕಣ್ಣು ಕಟ್ಟಿ ಬಿಡಲ್ಪಟ್ಟವನಂತೆ ನಿರಾಶ್ರಯನಾಗಿ ಹೋದೆನಲ್ಲಾ! ನಾನು ಬದುಕುವ ಬಟ್ಟೆ ಯಾವುದು ?*ಹೇಳ್ಮೆ, ಕರುಣಾರಸತರಂಗಿತ ಕಟಾಕ್ಷನೇ, ಶರಣಾಗತರಕ್ಷಕನೆಂಬ ಅಸಾಧಾರಣವಾದ ಬಿರುದು ನಿನಗಿರುವುದಷ್ಟೆ? ನೀನು ಬಿಜಯಮಾಡುವ ಸಮಯ ದಲ್ಲಿ ನನ್ನನ್ನು ಎಚ್ಚರಿಸದೆ ಇರಬಹುದೇ ? ಇನ್ನು ಮೇಲೆ ನಾನು ಕೃಪಣನಾಗಿ ಈ ಪ್ರಾಣಗಳನ್ನು ಹಿಡಿದಿರುವುದರಿಂದ ಪ್ರಯೋಜನವೇನು ? ಎಂದು ಬಹು ವಿಧವಾಗಿ ಹಂಬಲಿಸಿ ಎದೆಹೊಯ್ದು ಬಾಯ್ಯಡಿದು ಅತ್ತು ಮೂರ್ಛಿತನಾಗಿ ಸ್ವಲ್ಪ ಕಾಲದಲ್ಲಿ ಚೇತರಿಸಿಕೊಂಡದ್ದು ವಿಚಾರದಿಂದ ಧೈರ್ಯವನ್ನು ತಂದು ಕೊಂಡು-ಆಗಲಿ, ಮುಂದೆ ಹನುಮಂತನ ಆಗುಹೋಗುಗಳು ಏನಾಗಿರುವುವೋ ನೋಡಬೇಕು, ಆತನು ಬ್ರಹ್ಮಾ ಸ್ತ್ರಕ್ಕೆ ಒಳಗಾಗತಕ್ಕವನಲ್ಲ; ಅತಿಬಲಿಷ್ಠನು ; ವಜ್ರದೇಹಿಯು ಮತ್ತು ಹರಿಭ್ರತ್ಯನು ಎಂದು ಅರಸುತ್ತ ಬರುತ್ತಿರುವಾಗ್ಗೆ ಮಿಡುಕಾಡುತ್ತಿರುವ ಜೀವವುಳ್ಳ ಜಾಂಬವಂತ ನನ್ನು ಕಂಡು ನಮಸ್ಕರಿಸಲು; ಆ ಜಾಂಬವಂತನು ಮೆಲ್ಲನೆ- ಎಲೈ ವಿಭೀಷಣನೇ, ಹತ್ತಿರಕ್ಕೆ ಬಾ ಎಂದು ಕರೆದು ಕುಳ್ಳಿರಿಸಿಕೊಂಡು=ರಣದಲ್ಲಿ ಯಾರು ಯಾರು