ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂದ್ರಜಿತ್ಸಂಹಾರ 153 ಆ ಕೂಡಲೆ ಆಂಜನೇಯನು ಮಹಾ ಪರ್ವತದಂತಿರುವ ಶರೀರವನ್ನು ಧರಿಸಿ ಜಾಂಬವಂತನಿಗೆ ನಮಸ್ಕಾರವನ್ನು ಮಾಡಿ ವಿಭೀಷಣನನ್ನು ಆಲಿಂಗಿಸಿ ಆಕಾಶಮಾರ್ಗ ಕೈ ಹಾರಿ ಅಸಂಖ್ಯಾತ ಕಲ್ಪಾಂತ ಘನಗರ್ಜಿತಗಳನ್ನು ಮಾರುವಂತೆ ಸಿಂಹನಾದವನ್ನು ಮಾಡಿದನು. ಆತನ ಮಹಾ ಧ್ವನಿಯನ್ನು ಕೇಳಿದ ಕೂಡಲೆ ಲಂಕಾಪಟ್ಟಣವೆಲ್ಲಾ ಬೆದರಿ ಕಂಪಿಸಿತು, ಅನಂತರದಲ್ಲಿ ಆಕಾಶಮಾರ್ಗದಲ್ಲೇ ಹೋಗುತ್ತ ನಾನಾ ದೇಶ, ಗಿರಿ, ನದೀ, ದುರ್ಗ, ವನಾದಿಗಳನ್ನು ಕಳೆದು ಬಂದು ಹಿಮವತ್ಪರ್ವತವನ್ನು ಸೇರಿ ಅದನ್ನು ದಾಟಿ ಓಷಧಿ ಪರ್ವತಕ್ಕೆ ಬಂದು ಅದರ ಶಿಖರದಲ್ಲಿ ಎಷ್ಟು ಪ್ರಯಾಸಪಟ್ಟು ಹುಡುಕಿದಾಗ ಆ ಓಷಧಿಗಳು ಸಿಕ್ಕದಿರಲು ; ಇವುಗಳನ್ನು ಹುಡುಕುತ್ತ ಸಾವಕಾ ಶ ಮಾಡುವುದಕ್ಕೆ ಇದು ವೇಳೆಯಲ್ಲ, ಅದು ಕಾರಣ ಇದರ ಶಿಖರವನ್ನೇ ಕಿತ್ತು ಕೊಂಡು ಹೋಗಿ ಜಾಂಬವಂತನ ಮುಂದಿಳುಹುವೆನು, ಎಲ್ಲಿದ್ದರೂ ಅವನೇ ಹುಡುಕಿ ಕೊಳ್ಳಲಿ ಎಂದು ನಿಶ್ಚಯಿಸಿ ಆ ಪರ್ವತಶಿಖರವನ್ನು ಕಿತ್ತೆತ್ತಿ ಹೊತ್ತು ಕೊಂಡು ಎರಡ ನೆಯ ಸೂರ್ಯನಂತೆ ಗಗನಮಾರ್ಗದಲ್ಲಿ ಬಂದು ಕಪಿವಾಹಿನಿಯ ಮಧ್ಯದಲ್ಲಿಳಿಯು ತಿರಲು ; ಆ ಶಿಖರಸ್ಥವಾದ ಓಷಧಿಗಳ ಸಂಸ್ಪರ್ಶದಿಂದ ಬಂದ ವಾಯುವನ್ನು ಆಘ್ರಾಣಿಸಿದ ಮಾತ್ರದಿಂದಲೇ ಮಲಗಿದ್ದವರೆದ್ದಂತೆ ರಾಮಲಕ್ಷ್ಮಣಾದಿ ಸರ್ವರ್ ಎದ್ದರು. ಆಗ ಸುರಲೋಕದಲ್ಲಿ ಸುರದುಂದುಭಿಗಳು ಮೊಳಗಿದುವು, ಸುರರೆಲ್ಲರೂ ಕಪಿಸೇನೆಯ ಮೇಲೆ ಹೂಮಳೆಗರೆದು ಹರಸಿದರು, ಆಗ ವೀರಾಗ್ರೇಸರನಾದ ಸುಗ್ರೀ ವನು ವಿಲಯ ಕಾಲದ ರುದ್ರನಂತೆ ಆಸಮಾನ ಕೋಪವಿಜೃಂಭಿತನಾಗಿ ಹೊರಟು ಅಂಕಾನಗರಕ್ಕೆ ಲಗ್ಗೆ ಹತ್ತಿದನು. ಈ ಸಂಗತಿಯನ್ನು ರಾವಣನು ಕೇಳಿ--ಅಯ್ಯೋ ! ಇಂದ್ರಜಿತ್ತಿನ ಬ್ರಹ್ಮಾಸ್ತ್ರವೂ ಕೂಡ ವ್ಯರ್ಥವಾಗಿ ಹೋಯಿತಲ್ಲಾ? ಅದರಿಂದಲೂ ವಿರೋಧಿಗಳಿಗೆ ವಿನಾಶವು ಸಂಭವಿಸದಿದ್ದ ಮೇಲೆ ಯಾರಿಂದೇನಾಗುವುದು ? ಆ ಅಸ್ತ್ರದ ಮಹಾಶಕ್ತಿಯನ್ನು ನಂಬಿ ಹಗೆಗಳನ್ನು ಗಣಿಸದೇ ಇದ್ದೆವಲ್ಲಾ? ಇನ್ನು ಈ ಪ್ರಚಂಡ ಕಪಿಬಲವನ್ನು ಜಯಿಸುವ ಬಗೆ ಯಾವುದು ? ಇದಕ್ಕೆ ಉಪಾಯವು ತೋರುವುದಿಲ್ಲ ವಲ್ಲಾ ! ಎಂದು ಬಹುವಾಗಿ ಚಿಂತಿಸುತ್ತಿರಲು ; ಈ ಸಂಗತಿಯನ್ನು ತಿಳಿದು ಇ೦ದ್ರ ಜಿತ್ತು ತ್ವರಿತದಿಂದ ತಂದೆಯ ಬಳಿಗೆ ಬಂದು ನಮಸ್ಕರಿಸಿ ಬೇಯಾ, ಹಗೆಗಳ ಪಡೆಗೆ ಯಮನಾದ ನಾನಿರುವಲ್ಲಿ ನೀನು ಚಿಂತಿಸುವುದು ಉಚಿತವೇ ? ಎಂದು ಹೇಳಿ ಆತನ ಪ್ಪಣೆಯನ್ನು ತೆಗೆದು ಕೊಳ್ಳದೆಯೇ ಹೊರಟು ಸೇನೆಯನ್ನೊಡಗೊಂಡು ರಥಾ ರೂಢನಾಗಿ ಬರುತ್ತಿರಲು ; ಅವನ ತೇರ್ಗಾಲಿಗಳ ಧ್ವನಿಯನ್ನು ಕೇಳಿ-ಹೋ ! ದುಷ್ಟನಾದ ಇಂದ್ರಜಿತ್ತು ಮತ್ತೆ ಕಾಳೆಗಕ್ಕೆ ಬಂದನೆಂದು ನಿಶ್ಚಯಿಸಿ ಸುಗ್ರೀವನುಲಂಕಾದುರ್ಗದ ಪಡುವಣ ಬಾಗಿಲಿಗೆ ಹನುಮಂತನನ್ನೂ ಅವನ ಸಹಾಯಕ್ಕೆ ಅನೇಕ ಬಲವನ್ನೂ ತೆಂಕಣ ದೆಸೆಗೆ ಸೇನೆ ಸಹಿತ ಯುವರಾಜನಾದ ಅಂಗದನನ್ನೂ ಮಡಣ ಕಡೆಗೆ ಸೇನೆಯೊಡನೆ ನೀಲನನ್ನೂ ಎಚ್ಚರಿಕೆಯಿಂದ ಕಾದುವಂತೆ ನೇಮಿಸಿ ತಾನು ರಾಮಲಕ್ಷ್ಮಣರೊಡನೆ ನಿಂತು ಮಧ್ಯದಲ್ಲಿ ವಿಭೀಷಣನನ್ನಿಟ್ಟು ಗಿರಿತರುಗಳನ್ನು ತೆಗೆ ದು ಕೊಂಡು ರಾವಣಿಯನ್ನು ಅಟ್ಟಿ ಕೊಂಡು ಹೋಗುತ್ತಿರಲು ; ಆಗ ಶ್ರೀರಾಮ