ಪುಟ:ಕಥಾ ಸಂಗ್ರಹ - ಭಾಗ ೨.djvu/೧೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


154 ಕಥಾಸಂಗ್ರಹ-೪ ನೆಯ ಭಾಗ ಚಂದ್ರನು ಸುಗ್ರೀವನನ್ನು ಸಮಾಧಾನಪಡಿಸಿ ನಿಲ್ಲಿಸಿ ತಾನೇ ಧನುರ್ಬಾಣಗಳನ್ನು ತೆಗೆದು ಕೊಂಡು ಪ್ರಳಯಾಂತಕನಂತೆ ಮಹಾ ಕೋಪವುಳ್ಳವನಾಗಿ ಕಣ್ಣುಗಳಲ್ಲಿ ಕಿಡಿಗಳನ್ನು ದುರಿಸುತ್ತ ಕೋದಂಡದಲ್ಲಿ ಅಕ್ಷಯಾಸ್ತ್ರವನ್ನು ಹೂಡಿ ರಾವಣಿಯ ಮೇಲೆ ಪ್ರಯೋಗಿಸಲು ; ಆ ಬಾಣಗಳು ಪಾರಂಪರ್ಯವಾಗಿ ಹೋಗಿ ಅವನ ರಥ ರಥಾಶ್ವಸಾರಥಿ ಧ್ವಜ ಬಿಲ್ಲು ಬತ್ತಳಿಕೆ ಪತಾಕೆ ಇವುಗಳನ್ನೆಲ್ಲಾ ಕ್ಷಣಕಾಲದಲ್ಲಿ ತರಿ ದೊಟ್ಟಿದುವು. - ಆಗ ಉಪಾಯದಲ್ಲಿ ಬಲ್ಲಿದನಾದ ಇಂದ್ರಜಿತ್ತು ರಾಮನಿರುವ ಬಡಗಣ ಬಾಗಿ ಲನ್ನು ಬಿಟ್ಟು ಶೀಘ್ರದಿಂದ ಲಂಕೆಯನ್ನು ಹೊಕ್ಕು ಹನುಮಂತನಿರುವ ಪಡುವಣ ಬಾಗಿಲಿಗೆ ಬಂದು ಅವನ ಸಹಾಯಕ್ಕಾಗಿ ಬಂದಿರುವ ವಾನರಬಲವನ್ನೆಲ್ಲಾ ಮಾಯಾ ಶಕ್ತಿಯಿಂದ ಸಂಹರಿಸಿದನು. ಉಳಿದ ಕಪಿಗಳೆಲ್ಲಾ ಅವನೊಡನೆ ಕಾಳೆಗಕ್ಕೆ ಅಂತು ನಿಲ್ಲಲಾರದೆ ಬೆಂಗೊಟ್ಟೂಡಿದುವು. ಆಗ ಧೀರನಾದ ಆಂಜನೇಯನೊಬ್ಬನೇ ಮಹಾ ಕೋಪದಿಂದ ಕಿಡಿಕಿಡಿಯಾಗಿ ಇಂದ್ರಜಿತ್ತಿನ ತೇರು ಬಿಟ್ಟು ಸರಳು ಕುದುರೆಗಳ ಸಪ್ಪಳ ನ್ನು ಕಿವಿಗೊಟ್ಟು ಕೇಳಿ ಜಾಡನ್ನು ಹಿಡಿದು ಹೋಗಿ ಅಟ್ಟಿ ಹೊಡೆಯುತ್ತ ಅಸಂಖ್ಯಾತರ ಳಾದ ತೇರಾನೆ ಕುದುರೆಯಾಳುಗಳನ್ನು ಸಂಹರಿಸುತ್ತ ಹಿಂದೆಗೆಯದೆ ಸೂರ್ಯಾಸ್ತಮಾ ನದ ವರೆಗೂ ಭಯಂಕರವಾಗಿ ಜಗಳವಾಡುತ್ತಿರಲು; ಆಗ ಕಾಪಟ್ಯ ವಿದ್ಯಾನಿಪುಣನಾದ ರಾಕ್ಷಸಪುತ್ರನು ತನ್ನ ಮಾಯಾಶಕ್ತಿಯಿಂದ ಕಪಟ ಸೀತೆಯನ್ನು ನಿರ್ಮಿಸಿ ತನ್ನ ರಥದ ಮೇಲಿಟ್ಟು ಕೊಂಡು ಮೇಲೆತ್ತಿ ಹನುಮಂತನಿಗೆ ತೋರಿಸಲು ; ಆಗಳಾಮಾಯೆಯು ಅಂಜನಾತ್ಮಜನನ್ನು ನೋಡಿ--ಅಯ್ಯಾ, ಸ್ವಾಮಿ ಕಾರ್ಯಧುರಂಧರನೂ ಸತ್ಯಸಂಧನೂ ಆದ ಆಂಜನೇಯನೇ, ಅಕಟಕಟಾ ! ಈ ದಾರುಣವಾದ ಹಿಂಸೆಯನ್ನು ಹೇಗೆ ಸಹಿಸಲಿ ? ನನ್ನನ್ನು ಕಾಪಾಡುವವರಾರೂ ಇಲ್ಲವಲ್ಲಾ! ಹಾ ! ವಿಧಿಯೇ, ಅಯ್ಯೋ ! ಕೆಟ್ಟೆ ನಲ್ಲಾ ಎಂದು ಗಿಳಿಮರಿಯಂತೆ ಬಾಯ್ದಿಡುತ್ತಿದ್ದಿತು. ಆಗ ಅಂಜನೆಯ ಮಗನು ತಾನು ಮೊದಲು ಶಿಂಶುಪ ವೃಕ್ಷದ ಕೆಳಗೆ ನೋಡಿದ್ದ ಸೀತೆಯಂತಿರುವ ಆ ಮಾಯೆ ಯನ್ನೂ ಅದರ ಕತ್ತಿಗೆ ತಗುಲಿಸಿರುವ ಇಂದ್ರಜಿತ್ತಿನ ಕತ್ತಿಯನ್ನೂ ನೋಡಿ ಮನಸ್ಸಿ ನಲ್ಲಿ ಮಹಾತಂಕಯುಕ್ತನಾಗಿ ದುಃಖದಿಂದ ಕಣ್ಣೀರುಗಳನ್ನು ಸುರಿಸುತ್ತಿರಲು ; ತಿರಿಗಿ ಆ ಮಾಯೆಯು ಮಾರುತಿಯನ್ನು ನೋಡಿ--ಅಯ್ಯಾ, ಮಗನೇ, ಮಾರು ತಿಯೇ, ನಾನು ನಿನ್ನೊಡೆಯನಾದ ಶ್ರೀರಾಮನ ಪ್ರಾಣಪ್ರಿಯೆಯಲ್ಲವೇ ? ಅನಾಥ ೪ಾಗಿ ಈ ಪಾಪಿಯ ಕೈಗತ್ತಿಗೆ ತನುವನ್ನು ತೆತ್ತಿರುವ ನನ್ನಲ್ಲಿ ಕರುಣವನ್ನಿಡಬಾರದೇ? ಹಾ ! ಸತ್ಯವೇ, ನಿನಗೆ ದಿಕ್ಕಿಲ್ಲವೇ ! ಎಲೈ ನೀತಿದೇವತೆಯೇ ! ನೀನು ಅನಾಥೆಯಾ ದೆಯಾ ! ಎಂದು ದುಃಖಿಸುತ್ತ-ಅಪ್ಪಾ! ಮಗನೇ, ಈ ಪಾಪಕಾರಿಣಿಯಾದ ನನಗೋಸ್ಕರ ಅನ್ಯಾಯವಾಗಿ ನೀನೇಕೆ ಕಷ್ಟವನ್ನನುಭವಿಸುತ್ತಿರುವಿ ? ಈ ಹಾಳಾದ ರಾಜಕಾರ್ಯಸ್ಥಿತಿಯನ್ನು ಶ್ರೀರಾಮನಿಗೆ ತಿಳಿಸು ಹೋಗು, ಕ್ಷಣಕಾಲವೂ ಸಾವ ಕಾಶಮಾಡಬೇಡ. ಇನ್ನು ಶ್ರೀರಾಮಚಂದ್ರನು ಯಾರಿಗಾಗಿ ಯುದ್ಧ ಮಾಡಬೇಕು ? ನೀವೆಲ್ಲರೂ ಏತಕ್ಕೆ ವೃಥಾ ಶ್ರಮಪಡಬೇಕು ? ಈ ಪಾಪಾತ್ಮಳಾದ ನಾನು ಶ್ರೀರಾ