ಇಂದ್ರಜಿತ್ಸಂಹಾರ 155 ಮನಿಗೆ ಅಪಮಾನವನ್ನೂ ನಿಮ್ಮೆಲ್ಲರಿಗೂ ಅಪಾರಶ್ರಮವನ್ನೂ ಉಂಟುಮಾಡಿ ಈಗ ಮೃತ್ಯುವಿನ ಬಾಯನ್ನು ಪ್ರವೇಶಿಸುತ್ತಿದ್ದೇನೆ, ಇನ್ನು ನೀವು ಯಾರಿಗಾಗಿ ಯುದ್ಧ ಮಾಡುವಿರಿ ? ಈ ಕಾಳೆತದ ಖಳನ ಕೈಯಲ್ಲಿ ಸಿಕ್ಕಿ ನನ್ನ ಬಾಳು ಹಾಳಾಯಿತು. ಪೂರ್ವದಲ್ಲಿ ನನ್ನ ಪತಿಯ ಅತ್ತೆಯ ಹಿತಚಿಂತಕರಾದ ಇನ್ನೂ ಇತರರೂ ಕಾಡಿಗೆ ಹೋಗಬೇಡವೆಂದು ಎಷ್ಟು ವಿಧವಾಗಿ ಹೇಳಿದರೂ ಅವರ ಮಾತುಗಳೊಂದನ್ನೂ ಕೇಳದೆ ಮರ್ಖಳಾದ ನಾನು ನನ್ನಿಂದಲೇ ಕೆಟ್ಟೆನು, ಅಯ್ಯೋ ! ಶ್ರೀರಾಮನ ಕೋಮಲ ಬಾಹುಗಳ ಆಲಿಂಗನದಿಂದ ಉಬ್ಬುತ್ತಿದ್ದ ದೇಹವೇ, ಈ ಪಾಪಿಯ ಕೈಗತ್ತಿಗೆ ಗುರಿಯಾದಿಯಾ ! ಮಹಾತ್ಮನಾದ ಜನಕರಾಜನ ಕುಲದಲ್ಲಿ ಹುಟ್ಟಿ ಸೂರ್ಯವಂಶದಲ್ಲಿ ಲೋಕರಕ್ಷಣಾರ್ಥವಾಗಿ ಅವತರಿಸಿದ ಶ್ರೀರಾಮನನ್ನು ಕೈಹಿಡಿದು ಕಡೆಗೆ ನನಗಿಂಥ ದುರವಸ್ಥೆಯು ಅನುಭವಕ್ಕೆ ಬಂದಿತು ! ನೋಡಯ್ಯಾ, ಮಾರು ಆಯೇ, ಇದು ನನ್ನ ಹಿಂದಣ ಯಾವ ಜನ್ಮದ ದುರಿತತತಿಯೋ ? ಮಹಾತ್ಮರಾದ ಯಾವ ದಂಪತಿಗಳ ಸಂತೋಷಾನುಭವಕ್ಕೆ ಕಂಟಕಳಾಗಿದ್ದೆನೋ ? ಆ ದುಷ್ಕೃತ ಫಲವು ಈಗ ನನಗೆ ಅನುಭವಾಭಿಮುಖವಾಯಿತು. ನೀನು ಇನ್ನಿಲ್ಲಿ ನಿಲ್ಲದೆ ನನ್ನ ಆಶೆಯನ್ನು ತೊರೆದು ಲಕ್ಷ್ಮಣಸಹಿತವಾಗಿ ಶ್ರೀರಾಮಚಂದ್ರನನ್ನು ಅಯೋಧ್ಯಾ ನಗರಕ್ಕೆ ಹೋಗಿ ಸುಖವಾಗಿ ಬದುಕ ಹೇಳು. ಈ ನೀಚನ ಕೈಗತ್ತಿಯಿಂದ ಕಡಿಯ ಲ್ಪಟ್ಟು ತುಂಡಾದ ನನ್ನ ದೇಹವನ್ನು ತೆಗೆದು ಕೊಂಡು ಹೋಗಿ ಶ್ರೀರಾಮಚಂದ್ರನಿಗೆ ತೋರಿಸು, ಈ ವಿಧವಾದ ನನ್ನ ಮಾತುಗಳನ್ನು ಅಣುಮತ್ರವಾದರೂ ವಿಾರಿ ನಡೆಯದಿರು. ಈ ನಿಶಾಚರರು ಮಹಾ ಮಾಯಿಗಳು. ಈಗ ಅನ್ಯಾಯವಾಗಿ ನನ್ನ ಪ್ರಾಣಗಳಿಗೆ ಮುನಿದ ಹಾಗೆ ಏನಾದರೂ ಉಪಾಯ ದಿಂದ ಲೋಕರಕ್ಷಕನಾದ ಶ್ರೀರಾಮನ ಪ್ರಾಣಗಳಿಗೂ ಮುನಿದಾರು, ಎಚ್ಚರಿಕೆಯಿಂದಿರಿ ! ಎಂದು ಹೇಳುತ್ತಿ ರಲು ; ಇಂದ್ರಜಿತ್ತು-ಹನುಮಂತನು ನೋಡುತ್ತಿರುವಾಗಲೇ ಆ ಮಾಯಾಸೀತೆಯ ತಲೆಯನ್ನು ಕಡಿದು ರುಂಡಮುಂಡಗಳನ್ನು ರಥದಿಂದ ಕೆಳಗೆ ಬೀಸಾಡಿಬಿಟ್ಟನು. ಆಗ ಆಂಜನೇಯನು ಕೋಪಸಂತಾಪಾಶ್ವರ್ಯಮಿಶ್ರವಾದ ಭಾವಯುಕ್ತನಾಗಿ ವೇಗ ದಿಂದ ಹೋಗಿ ಆ ರಾವಣಿಯ ರಥವನ್ನು ಒದೆಯಲು ; ಅದು ಪುಡಿಪುಡಿಯಾತು ಕಪಟಿಯಾದ ಇಂದ್ರಜಿತ್ತು ಮಾಯಾಬಲದಿಂದ ತನ್ನನ್ನು ಮರಿಸಿಕೊಂಡು ಓಡಿಹೋಗಿ ಲಂಕೆಯನ್ನು ಸೇರಿದನು. ಅನಂತರದಲ್ಲಿ ಆಂಜನೇಯನು ಅತಿಕರ್ತವ್ಯ ತಾಜ್ಞಾನವಿಲ್ಲ ದವನಾಗಿ ಹಿಂದಿರುಗಿ ಬಂದು ಆ ಮಾಯಾ ಭೂಮಿಜೆಯ ಕಡಿಯಲ್ಪಟ್ಟು ಬಿದ್ದಿರುವ ತಲೆಯಟ್ಟೆ ಗಳನ್ನು ನೋಡಿ-ಹಾ ! ಜನಕರಾಜನಂದಿನಿ ! ಎಂದು ಹಂಬಲಿಸಿ ಹಮ್ಮ ಡಗಿ ಮರ್ಛಿತನಾಗಿ ನೆಲದಲ್ಲಿ ಬಿದ್ದಿರಲು ; ಇತ್ರ ಶ್ರೀರಾಮಚಂದ್ರನು-ಈ ಲಂಕಾನಗರದ ಪಶ್ಚಿಮದಿಗ್ವಾರದಲ್ಲಿ ಧೀರನಾದ ವಾಯುಕುಮಾರನ ಸಿಂಹನಾದವು ಈ ವರೆಗೂ ಕೇಳಿಸುತ್ತಿದ್ದಿತು. ಈಗ ಅದು ಅಡಗಿದೆ. ಎಲ್ಲಿ ನೋಡಿದರೂ ರಾಕ್ಷಸರ ಬಿರುಗೂಗುಗಳೇ ತುಂಬಿವೆ. ಇದಕ್ಕೆ ಕಾರಣವೇನಿರುವುದೋ ತಿಳಿಯುವುದಿಲ್ಲ, ಅದು ಕಾರಣ ಅಯ್ಯಾ ಜಾಂಬವಂತರೇ,
ಪುಟ:ಕಥಾ ಸಂಗ್ರಹ - ಭಾಗ ೨.djvu/೧೬೫
ಗೋಚರ