ಪುಟ:ಕಥಾ ಸಂಗ್ರಹ - ಭಾಗ ೨.djvu/೧೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


158 ಕಥಾಸಂಗ್ರಹ-೪ ನೆಯ ಭಾಗ ದಾದಿಗಳು ವಿಭೀಷಣನನ್ನು ಅಪಾರವಾಗಿ ಹೊಗಳಿದರು. ಕಪಿಕಟಕವೆಲ್ಲಾ ಸಂತೋ ಪಾತಿಶಯದಿಂದ ಮೈಯುಬ್ಬಿ ನಲಿದಾಡಿತು, ಆಗ ವಿಭೀಷಣನು ಶ್ರೀರಾಮಚಂದ್ರ ನಿಗೆ ದೀರ್ಘದಂಡನಮಸ್ಕಾರವನ್ನು ಮಾಡಿ ಎದ್ದು ನಿಂತು ಕೈಮುಗಿದು-ಎಲೆ, ಸತ್ಯಾರಾಮನಾದ ಶ್ರೀರಾಮಚಂದ್ರನೇ, ಮಾಯಾಶಕ್ತಿಯಿಂದ ದುಷ್ಕಾರ್ಯದಕ್ಷ ನಾದ ರಾವಣಿಯು ಮೊದಲು ತನ್ನ ತಂದೆಯ ಬಳಿಯಲ್ಲಿ..-ನಿನ್ನನ್ನು ಜಯಿಸುವೆ ನೆಂದು ಸಭಾಜನರೆದುರಿಗೆ ಬಹು ಅಟ್ಟಹಾಸದಿಂದ ಪ್ರತಿಜ್ಞೆಯನ್ನು ಮಾಡಿ ಭಾಷೆ ಕೊಟ್ಟು ಮಹಾಗರ್ವದಿಂದ ಬಂದು ಯುದ್ಧಕ್ಕೆ ತೊಡಗಿದನು. ಯುದ್ದ ಕಾರ್ಯ ನಿರ್ವಾಹವು ತನಗೆ ಅಸಾಧ್ಯವಾದುದರಿಂದ ಗರ್ವಹೀನನಾಗಿ ನಾಚಿಕೊಂಡು ಮಾಯೆಯನ್ನವಲಂಬಿಸಿ ಈ ಕಪಟ ಸೀತೆಯನ್ನು ಮಾಡಿಕೊಂಡು ಕಡಿದು ಬಿಸುಟು ನಿಮ್ಮೆಲ್ಲರನ್ನೂ ದುಃಖಸಾಗರದಲ್ಲಿ ಮುಳುಗಿಸಿ ಬಾಹ್ಯವ್ಯಾಪಾರವನ್ನು ಮರಿಸಿ ತಾನು ತಪ್ಪಿಸಿಕೊಂಡು ಓಡಿಹೋಗಿ ನಮ್ಮ ಕುಲದೇವತೆಯಿರುವ ನಿಕುಂಭಳಾವನದಲ್ಲಿ ಶತ್ರುವಿನಾಶಾರ್ಥವಾಗಿ ಮಾರಣಯ ಜ್ಞವನ್ನು ಮಾಡುವುದಕ್ಕೆ ಪ್ರಾರಂಭಿಸಿದ್ದಾನೆ. ಆ ಯಜ್ಞವು ನಿರ್ವಿಘ್ನವಾಗಿ ಮುಗಿದರೆ ಅನಂತರದಲ್ಲಿ ಹಗೆಯನ್ನು ಜಯಿಸುವುದು ಅಸಾಧ್ಯವು, ಅದು ಈ ರಾತ್ರಿಯಲ್ಲೇ ಮುಗಿಯುತ್ತದೆ. ನಾವು ಈಗಲೇ ಹೋಗಿ ಅದು ಸಾಂಗವಾಗಿ ಸಾಗದಂತೆ ಭಂಗಪಡಿಸಿಬಿಡಬೇಕು. ಅದು ಕಾರಣ ಲಕ್ಷಣ ನನ್ನೂ ಆಂಜನೇಯಾದಿ ಶೂರ ಕಪಿಭಟರನ್ನೂ ಶೀಘ್ರವಾಗಿ ನನ್ನ ಸಂಗಡ ಕಳುಹಿಸಿ ಕೊಡು, ನಾನು ಈಗಲೇ ಹೋಗಿ ಅವನ ಯಜ್ಞವನ್ನೆಲ್ಲಾ ಕೆಡಿಸಿ ಹಾಳುಮಾಡಿ ಅವನನ್ನು ಯಮಾಲಯಕ್ಕೆ ಅತಿಥಿಯನ್ನಾಗಿ ಮಾಡಿ ನಿನ್ನ ಸನ್ನಿಧಿಗೆ ಬರುವೆನು. ತಡಮಾಡದೆ ಬೇಗನೆ ಅಪ್ಪಣೆಯನ್ನು ಕೊಡು ಎನ್ನಲು ; ಆಗ ಶ್ರೀರಾಮನು ಇಂದ್ರ ಜಿನ ಅತುಲಪರಾಕ್ರಮವನ್ನು ನೆನೆದು ತನ್ನ ಬಹಿಃಪ್ರಾಣಪ್ರಾಯನಾದ ಸುಮಿ ತಾತ್ಮಜಾತನನ್ನು ಇಂದ್ರಜಿತ್ತಿನೊಡನೆ ಯುದ್ಧಕ್ಕೆ ಕಳುಹಿಸುವುದಕ್ಕಾಗಿ ಶಂಕಾತ೦ ಕಿತ ಚಿತ್ರ ವೃತ್ತಿ ಯುಳ್ಳವನಾಗಿ ಯೋಚಿಸುತ್ತಿರಲು ; ಆಗ ಅರಿಭಯಂಕರನಾದ ಲಕ್ಷ್ಮಣನು ಉಕ್ಕಿನ ಕವಚವನ್ನು ತೊಟ್ಟು ಉಡುವಿನ ತೊಗಲಿನ ಕೈಯಂಗಿಯನ್ನು ಹಾಕಿಕೊಂಡು ತಲೆಗೆ ಸೀಸಕವನ್ನಳವಡಿಸಿಕೊಂಡು ಬೆನ್ನಿಗೆ ಅಕ್ಷಯ ನಿಷಂಗವನ್ನು ಬಿಗಿದು ಬಿಲ್ಡರಳುಗಳನ್ನು ತೆಗೆದು ಕೊಂಡು ಬಂದು ರಾಮನ ಪಾದಗಳಿಗೆ ನಮಸ್ಕ ರಿಸಿ-ಎಲೈ, ಮಹಾತ್ಮನಾದ ಅಣ್ಣನೇ, ಪೂಜ್ಯನಾದ ನಿನ್ನ ಅನುಗ್ರಹವಿರುವಲ್ಲಿ ನನಗೆ ಈ ಹಗೆಗಳ ಜಯವು ಎಷ್ಟು ಮಾತ್ರವು ? ಕಪಟಿಯ ಮಾನಹೀನನೂ ಆದ ಆ ರಕ್ಕಸರು ವರನ ತಲೆಗಡಿದು ಅವನ ಸರ್ವಾಂಗಗಳನ್ನೂ ಖಂಡಿಸಿ ಮರುಳಳ ಬಳಗಕ್ಕೆ ಉಣಬಡಿಸುವೆನು. ನನಗೆ ಶೀಘ್ರವಾಗಿ ಅನುಜ್ಞೆಯನ್ನು ದಯಪಾಲಿಸು ಎಂದು ಕೇಳಿಕೊಂಡನು. ಆಗ ಶ್ರೀರಾಮನು ಅಂಜುತ್ತ ತಮ್ಮನ ಬೆಂಬಲಕ್ಕೆ ಅಂಗದ ಆಂಜನೇಯ ಅಗ್ನಿನಂದನ ಅಜಕುಮಾರಾದಿಗಳನ್ನೂ ಅಪರಿಮಿತ ಕಪಿವಾಹಿನಿಯನ್ನೂ ಕಳುಹಿಸಿಕೊಟ್ಟು ಯುದ್ಧದಲ್ಲಿ ಶತ್ರುವನ್ನು ಜಯಿಸಿ ವಿಜಯಸಂಪನ್ನನಾಗಿ ಬರುವವ ನಾಗು ಎಂದು ಆಶೀರ್ವಾದವನ್ನು ಮಾಡಿ ಅಪ್ಪಣೆ ಕೊಟ್ಟು ಕಳುಹಿಸಿದನು.