ಪುಟ:ಕಥಾ ಸಂಗ್ರಹ - ಭಾಗ ೨.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ಮರಣವು 181 ನೃಪನೇ, ಮನಸ್ಕರಿಸು, ಇಂದ್ರಾದೃಷ್ಟದಿಕ್ಖಾಲಕರೂ ನನ್ನನ್ನು ನಿನ್ನ ಬಳಿಗೆ ಕಳುಹಿ ಸಿದರು. ಈಗ ನಾವು ಸಂತೋಷದಿಂದ ಕಳುಹಿಸಿರುವ ರಥದ ಮೇಲೆ ನೀನು ಕುಳಿತು ಕೊಂಡು ಯುದ್ಧ ಮಾಡುವುದನ್ನು ನೋಡಬೇಕೆಂಬ ಕುತೂಹಲವು ನಮ್ಮೆಲ್ಲರಿಗೂ ಬಹಳವಾಗಿದೆ. ಅದು ಕಾರಣ ಈ ನಮ್ಮ ಕೋರಿಕೆಯನ್ನು ಕೃಪೆಮಾಡಿ ನೆರವೇರಿಸ. ಬೇಕೆಂದು ಪ್ರಾರ್ಥಿಸುತ್ತಾರೆ, ಸರ್ವಜ್ಞನಾದ ನೀನು ಅವರ ಪ್ರಾರ್ಥನೆಯನ್ನು ನೆರವೇ ರಿಸಬೇಕೆಂದು ಬಹು ವಿಧದಿಂದ ಹೇಳಲು; ಶ್ರೀರಾಮನು ಆ ಮಾತುಗಳಿಗೆ ಒಡಂ ಬಟ್ಟು ಇ೦ದ್ರನ ರಥವನ್ನೇರಿದನು. ಆಗ ವೀರನಾದ ಆಂಜನೇಯನು ಎದ್ದು ಬೊಬ್ಬಿರಿದು ಹೋಗಿ ಆ ದಿವ್ಯ ರಥದ ಧ್ವಜದಂಡಾಗ್ರದಲ್ಲಿ ಕುಳಿತನು, ಸುರರಾಜನ ಸಾರಥಿಯಾದ ಮಾತಲಿಯು ರಾಮನ ಅಡಿದಾವರೆಗಳಿಗೆ ನಮಸ್ಕರಿಸಿ ರಥದ ಮೇಲೆ ಹತ್ತಿ ಕುದುರೆಗಳ ಕಡಿವಾಣಗಳನ್ನು ಹಿಡಿದು ಅವುಗಳ ಕುತ್ತಿಗೆಗಳ ಇಕ್ಕೆಲಗಳನ್ನೂ ತಟ್ಟಿ ಮೈದಡವಿ ಎದುರಿಗಿರುವ ಹಗೆಯ ಸಾರಥಿಯನ್ನು ಮೂದಲಿಸಿ ಕುದುರೆಗಳನ್ನು ಮುಂದಕ್ಕೆ ನಡಿಸಿದನು. ಆಗ ದೇವತೆಗಳು ಸಂತೋಷದಿಂದ ಶ್ರೀ ರಾಮನ ಮೇಲೆ ಹೂಮಳೆಗರೆದು ( ವಿಜಯಾ ಭವ! ?” ಎಂದು ಹರಸಿ ದೇವದುಂದುಭಿಗಳನ್ನು ತಾಡಿಸಿದರು. ಕೂಡಲೆ ರಾಮ ರಾವ ಣರ ರಥಗಳೆರಡೂ ಸಮಾರಂಗಣದಲ್ಲಿ ಎದುರೆದುರಾಗಿ ನಿಂತವು. ಆಗ ರಥಿಕರಿಬ್ಬರ ಸಿಂಹನಾದಗಳೂ ಸಾರಥಿಗಳಿಬ್ಬರ ಚಪ್ಪರಣೆಯ ಮಹಾ ವೀರರಾದ ರಾಮ ರಾವ ಣರ ಉದ್ದಂಡ ಧನುಷ್ಠಾ೦ಡಗಳ ಮೌರ್ವೀನಿನಾದಗಳೂ ಎರಡು ರಥಚಕ್ರಗಳ ಚೀತ್ಕಾರ ಧ್ವನಿಗಳೂ ಅವರೀರೂ ಪ್ರಯೋಗಿಸುತ್ತಿರುವ ಬಾಣಗಳ ಭೀಂಕೃತಿ ಭೀಕ ರಧ್ಯಾನವೂ ಒಟ್ಟಾಗಿ ಸೇರಿ ಮೊದಲು ದೇವಾಸುರರ ದೋರ್ದಂಡಾಭಿಘಾತದಿಂದ ಪ್ರಮಥಿತವಾದ ಮಹಾ ಸಮುದ್ರಸಂಭೂತವಾದ ಕೋಲಾಹಲಧನಿಗಿಂತಲೂ ಮಿಗಿ ಲಾಗಿ ಲೋಕತ್ರಯವನ್ನೂ ತುಂಬಿ ಕಿವುಡುಮಾಡಿತು, ಕಲಹವು ಬಲವಾಗಲು ; ಆಗ ಕುಪಿತನಾದ ದಶಾನನನು ರಾಮನನ್ನು ಕುರಿತು-ಎಲೈ ರಾಮನೇ, ಕೇಳು. ನಿನಗಿನ್ನೇಕೆ ಸೀತಾಪೇಕ್ಷೆಯು ? ನೀನು ಶುದ್ದ ಮಢನೆಲಾ ! ಇಂದ್ರಪ್ರೇಮಿತವಾದ ರಥದ ಬಲವನ್ನು ನಂಬಿ ಬೆರೆತಿರುವಿಯೋ ? ನಾನು ಬ್ರಹೇಂದ್ರಾದಿ ಸುರಸಂಕು ಲವು ಸಮರ ಭೂಮಿಯಲ್ಲಿ ಎದುರಾದಾಗ ಅವರೆಲ್ಲರನ್ನೂ ಒಂದು ತೃಣಕ್ಕಾದರೂ ಸಮಾನವಾಗಿ ಬಗೆಯುವವನಲ್ಲ. ಈ ನನ್ನ ಶೌರ್ಯಾಗ್ನಿಯಿಂದ ಕಣಕಾಲದಲ್ಲಿ ಮರು ಲೋಕಗಳನ್ನೂ ಸುಟ್ಟು ಬೂದಿಮಾಡಿಬಿಡಬಲ್ಲೆನು, ನನ್ನ ಮನೋನಿಶ್ನ ಯವು ಹೀಗಿರುವಲ್ಲಿ ನೀನು ದುರಾಶಾಪಾಶಬದ್ದನಾಗಿ ವ್ಯರ್ಥಾಯಾಸದಿಂದ ಬಳಲಿ ಕೆಡುತ್ತಿರುವಿಯಲ್ಲಾ ! ಅಂದನು. ಆಗ ಸಂಗ್ರಿರಥನಂದನನು--ಎಲಾ ರಣಮರ್ಖ ನಾದ ರಾವಣನೇ, ಕೇಳು, ನಿನಗಿರುವ ದುರ್ಗವ್ರವೆಂಬ ಹುಚ್ಚು ನಿನ್ನ ತಲೆಗೇರಿರು ವುದು, ಸನ್ನಿಪಾತಜ್ವರಪೀಡಿತನು ತನ್ನ ಯುಕ್ತಾಯುಕ್ತವನ್ನು ಹೇಗೆ ತಿಳಿಯನೋ ಹಾಗೆ ಉನ್ಮತ್ತನಾದ ನಿನಗೆ ನಿನ್ನ ಹಿತಾಹಿತವು ತಿಳಿಯದು, ದುರಾಶಾಪಾಶಬದ್ಧ ನಾಗಿ ಮೃತ್ಯುದೇವತೆಗೆ ಮುಂದಲೆಯನ್ನು ಕೊಟ್ಟಿ ರುವವನು ನೀನು. ಲೋಕದಲ್ಲಿ