ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ಮರಣವು 185 ಳಾಗಿ ಬಿದ್ದು ಮರ್ಲೆಹೊಂದಿ ಹಿತೋಪಚಾರಗಳಿಂದೆದ್ದು ಕುಳಿತು ನಿಜಪತಿಯಾದ ರಾವಣನ ಲೋಕೋತ್ತರ ಶೌರ್ಯ ಧೈರ್ಯ ಪರಾಕ್ರಮಗಳನ್ನು ನೆನೆ ನೆನೆದು ಹಂಬ ಲಿಸಿ ರೋದಿಸಿ ಬಾಯಾರಿ ಕಂಗೆಟ್ಟು ಸರ್ವಾ೦ತಃಪುರಸ್ತ್ರೀಯರೊಡನೆ ಹೊರಟು ರಣ ಭೂಮಿಗೆ ಬಂದು ರಾವಣನ ಹೆಣದ ಮೇಲೆ ಬಿದ್ದು ಹೊರಳುತ್ತ ಕಲ್ಮರಗಳು ಕರಗು ವಂತೆ ಕೊರಗಿ ಮೊರೆಯಿಡುತ್ತ-ಹಾ ! ಕಾಂತನೇ, ಮಡಿದಿಯಾ ! ವೀರಪತ್ನಿಯೆಂಬ ಬಿರುದು ನಿನಗಿಂದು ಹೋಯಿತೇ ? ಅಂತಃಪುರಸ್ಕಿಯಾದ ನನ್ನನ್ನು ತಿರಸ್ಕರಿಸಿ ವೀರಲ ಕ್ಷ್ಮಿಯನ್ನು ವರಿಸಿದಿಯಾ ? ಸರ್ವಕಾಲದಲ್ಲೂ ಸರ್ವಾವಸ್ಥೆಗಳಲ್ಲೂ ನಿನ್ನೆ ನೆನಹನ್ನು ಬಿಟ್ಟ ರಿಯದ ನನ್ನಲ್ಲಿ ಅಪರಾಧವೇನಿರುವುದು ? ಅಜ್ಞಾನಿಯಾದ ನನಗೆ ವಿವೇಕವನ್ನು ಬೋಧಿಸುವುದು ಸರ್ವಜ್ಞನಾದ ನಿನಗೆ ಧರ್ಮವಲ್ಲ ವೇ ? ಸತ್ಯಪೂರ್ವಕವಾಗಿ ಮಹಾ ತ್ಯನಾದ ನಿನ್ನ ಕೈ ಹಿಡಿದು ಬಾಳುತ್ತಿದ್ದ ನನ್ನನ್ನು ಬಿಟ್ಟು ಪರಲೋಕವಾಸಿಯಾಗು ವದು ನಿನ್ನ ಂಥವರಿಗೆ ವಿಹಿತವೇ ? ನಿಷ್ಕಾರಣವಾಗಿ ನನ್ನನ್ನು ಅನಾಥೆಯನ್ನು ಮಾಡ ಬಹುದೇ ? ಅವಲಂಬನವೃಕ್ಷವಿಲ್ಲದ ಬಳ್ಳಿಯಂತಾದೆನಲ್ಲಾ ? ಎಂದು ವಿವಿಧವಾಗಿ ನಿಜವಲ್ಲಭನ ಗುಣಾವಳಿಗಳನ್ನು ಹೊಗಳಿಕೊಂಡು ಮರ್ಛಹೊಂದುತ್ರ ಎಚೇಳುತ್ತ ದುಃಖಿಸುತ್ತ ಸಂಕಟಪಡುತ್ತಿದ್ದಳು. ಅನಂತರದಲ್ಲಿ ಲೋಕಮಾನ್ಯ ಯಶಸ್ಕನಾದ ಶ್ರೀರಾಮನು ವಿಭೀಷಣ ನನ್ನು ನೋಡಿ-ಎಲೈ ರಾಕ್ಷಸರಾಜೇಂದ್ರನೇ, ವಿಧಿಯ ನಿಯಮವನ್ನು ಮಾರಿ ನಡೆ ವುದಕ್ಕೆ ಯಾರಿಂದಲೂ ಆಗದು. ನೀನು ಹೋಗಿ ಜಗದೇಕವೀರನಾದ ರಾವಣನ ಪಟ್ಟ ಮಹಿಷಿಯ ಮಹಾ ಪತಿವ್ರತೆಯ ಆದ ಮಂಡೋದರಿಯನ್ನು ಮೃದುಮಧುರವ ಚನಗಳಿಂದ ಸಮಾಧಾನಪಡಿಸಿ ನಿನ್ನಣ್ಣನಾದ ರಾವಣನೇ ಮೊದಲಾದವರಿಗೆ ಉತ್ತರ ಕ್ರಿಯಾದಿಗಳನ್ನು ನೆರವೇರಿಸು ಎಂದು ಅಪ್ಪಣೆಯನ್ನು ಕೊಡಲು ; ಆಗ ವಿಭೀ ಷಣನು ಶ್ರೀ ರಾಮನನ್ನು ಕುರಿತು-ಜೀಯಾ, ಜಗತ್ತೂಜ್ಯನೇ, ನನ್ನ ಬಿನ್ನಪವನ್ನು ಲಾಲಿಸಬೇಕು. ಮೊದಲು ಕುಬೇರನು ಈ ರಾವಣನನ್ನು ಕುರಿತು-ನೀನು ಬ್ರಹ್ಮ ವಂಶಸಂಭೂತನಾಗಿರುವುದರಿಂದ ದುರ್ಮಾರ್ಗಿಯಾಗಿರದೆ ಸುಮಾರ್ಗದಲ್ಲಿ ನಡೆ ಎಂದು ಹಿತವಾದವನ್ನು ತಿಳಿಸಿದುದಕ್ಕೆ ಆಗ್ರಹೋದಗ್ರನಾಗಿ ಹೋಗಿ ತನಗಣ್ಣ ನಾದ ಕುಬೇರನೊಡನೆ ಕಠಿಣವಾಗಿ ಯುದ್ಧ ಮಾಡಿ ಆತನ ಪುಷ್ಪಕವಿಮಾನವನ್ನು ಕಿತ್ತು ಕೊಂಡು ಭ್ರಾತೃದ್ರೋಹವನ್ನು ಸಂಪಾದಿಸಿಕೊಂಡನು ಅದಲ್ಲದೆ ಇಂದ್ರಾದಿ ದೇವ ತೆಗಳಿಗೆ ನಿಷ್ಕಾರಣವಾಗಿ ನಾನಾವಿಧವಾದ ಹಿಂಸೆಗಳನ್ನುಂಟುಮಾಡಿ ದೇವದ್ರೋಹಿ ಯಾದನು, ಮತ್ತು ಜ್ಞಾನನಿಷ್ಠರಾಗಿ ತಪೋವನದಲ್ಲಿ ಇತರರಿಗೆ ತೊಂದರೆಯಿಲ್ಲ ದಂತೆ ತಪಸ್ಸು ಮಾಡಿ ಕೊಂಡಿದ್ದ ಮುನಿಗಳ ಯಜ್ಞಾದಿ ಸತ್ಕರ್ಮಗಳನ್ನು ಭಂಗಪಡಿಸಿ ಬ್ರಹ್ಮ ದ್ರೋಹಕ್ಕೆ ಪಾತ್ರನಾದನು. ಜಗದೇಕವೀರನಾದ ರಾಜನೂ ಧರ್ಮಸಂಸ್ಥಾಪಕನೂ ಆದ ನಿನ್ನ ಡಿದಾವರೆಗಳಿಗೆ ಅಪರಾಧವನ್ನು ಮಾಡಿ ರಾಜದ್ರೋಹಕ್ಕೆ ಗುರಿಯಾದನು. ಮತ್ತು ನಾನು ಇವನನ್ನು ಕುರಿತು-ಇಂಥ ದುರಾಲೋಚನೆಗಳನ್ನೂ ದುಷ್ಕೃತ್ಯಗ ಳನ್ನೂ ಮಾಡಿ ಕೆಡಬೇಡವೆಂದು ಹಿತವಚನಗಳನ್ನು ಹೇಳಿದುದಕ್ಕೆ ನಿರಪರಾಧಿಯಾದ