ರಾವಣನ ಮರಣವು 189 ಅಬಲೆಯಾದ ನನ್ನಲ್ಲಿ ಕರುಣೆಯನ್ನಿಡದೆ ಕಲ್ಲೆದೆಯುಳ್ಳವನಾಗಿ ಇಂಥ ನಿರ್ದಯೋಕ್ತಿ ಗಳೆಂಬ ಕೂರಲಗುಗಳಿಂದ ನನ್ನೆದೆಯನ್ನು ಸೀಳುವುದು ಸರ್ವಪ್ರಾಣಿಹಿತನಾದ ನಿನಗೆ ಧರ್ಮವೇ ? ನನ್ನ ಪ್ರಾಣೇಶನಾದ ನೀನು ನನ್ನನ್ನು ಇಷ್ಟು ಕಠಿಣೋಕ್ಕಿಗಳಿಂದ ನಿಂದಿಸಿ ನುಡಿದ ಮೇಲೆ ಕ್ಷಣಿಕವಾದ ಈ ಪ್ರಾಣಗಳೊಡನೆ ಇರಬೇಕೆಂಬ ಅಪೇ ಕೈಯು ನನಗೆ ಲೆ: ಶವಾದರೂ ಇರುವುದಿಲ್ಲ, ನಿರಪರಾಧಿನಿಯಾದ ನಾನು ನಿನ್ನ ವಾಗ್ದಾಣಗಳಿಂದ ಹತಳಾಗಿ ಮೃತಳಾದರೆ ನಿನಗೆ ಸೀಹತ್ಯಾದೋಷವು ಸಂಭವಿಸುವು ದಿಲ್ಲ ವೆಂದು ಬಗೆದಿರುವಿಯಾ ? ಲೋಕದಲ್ಲಿ ಮಹಾತ್ಮರಾದವರಿಗೆ ಕಠಿಣಬುದ್ದಿ ಯು ಉಂಟಾಗುವುದೇ ಇಲ್ಲ, ಒಂದು ವೇಳೆ ಉಂಟಾದರೆ ಅದು ಶ್ರೇಯಸ್ಕೂಚಕವೆಂದು ಹೇಳುವುದಕ್ಕೆ ಆಗವುದೇ ಇಲ್ಲ, ಅದು ಹೇಗಾದರೂ ಇರಲಿ, ಇಹದಲ್ಲೂ ಪರ ದಲ್ಲೂ ನನಗೆ ಗತಿದಾಯಕನೂ ಆಶ್ರಯನೂ ಆದ ನಿನ್ನ ಆಜ್ಞೆಯನ್ನು ತಿರಸ್ಕರಿಸದೆ ಇರುವುದೇ ನನ್ನ ನಿಜಧರ್ಮವು, ನಾನು ನಿನ್ನನ್ನು ಬಿಟ್ಟಿರಬೇಕೆಂಬುದೇ ನಿನ್ನ ಆಜ್ಞಾ ವಚನವು, ನಿನ್ನನ್ನಗಲಿದ ಮೇಲೆ ನಾನು ನನ್ನ ತಂದೆಯ ಮನೆಯಲ್ಲೂ ಇರುವು ದಿಲ್ಲ, ಇನ್ನೆಲ್ಲಿಗೂ ಹೋಗುವುದಿಲ್ಲ, ನಿನ್ನ ಸನ್ನಿಧಿಯಲ್ಲೇ ಅಗ್ನಿ ಪ್ರವೇಶವನ್ನು ಮಾಡಿ ಈ ದೇಹವನ್ನು ಪರಿತ್ಯಜಿಸುವೆನು ಲೋಕದಲ್ಲಿ ಸರ್ವಪ್ರಾಣಿಗಳ ಬಾಹ್ಯಾ ಭ್ಯಂತರವೃತ್ತಗಳನ್ನು ತಿಳಿಯುವ ದಿವಾಕರನಿಶಾಕರರೂ ವಾಯ್ಸಗ್ನಿಗಳೂ ಆಕಾ ಶವೂ ಭೂಮಿಯ ನೀರೂ ಹೃದಯವೂ ಯಮನೂ ಅಹೋರಾತ್ರಿಗಳೂ ಉಭಯ ಸಂಧ್ಯೆಗಳೂ ಧರ್ಮಪುರುಷನೂ ನನ್ನ ಸರ್ವವೃತ್ತಕ್ಕೂ ಸಾಕ್ಷಿಗಳಾಗಿದ್ದಾರೆ. ಇದ ರಲ್ಲಿ ಯಾವ ಸಂದೇಹವೂ ಅಣುಮಾತ್ರವೂ ಇಲ್ಲವು ಎಂದು ಹೇಳಿ ಮೈದುನನಾದ ಲಕ್ಷ್ಮಣನನ್ನು ನೋಡಿ-ಎಲೈ ಲಕ್ಷ್ಮಣನೇ, ಬೇಗನೆ ಚಿತಾಗ್ನಿಯನ್ನು ಸಿದ್ಧ ಮಾಡಿ ಉರಿಸು ಎನ್ನಲು ; ಆಗ ಲಕ್ಷ್ಮಣನು ಸಂದೇಹಯುಕ್ತನಾಗಿ ಅಣ್ಣನ ಮುಖವನ್ನು ನೋಡಲು ; ಆತನು ಹಾಗೆ ಮಾಡಬಹುದೆಂದು ಅಪ್ಪಣೆಯನ್ನು ಕೊಟ್ಟನು. ಅನಂತ ರದಲ್ಲಿ ಲಕ್ಷ್ಮಣನು ಕ್ಷಣಮಾತ್ರದಲ್ಲಿ ದೊಡ್ಡವುಗಳಾದ ಒಣಗಿದ ಕೊರಡುಗಳನ್ನು ತರಿಸೊಟ್ಟಿ, ಬೆಂಕಿಯನ್ನು ಹಾಕಿ ಹೊತ್ತಿಸಲು ; ಕೂಡಲೆ ಉರಿಯು ಆಕಾಶದ ವರೆ ಗೂ ವ್ಯಾಪಿಸಿತು, ಆಗ ವಿಭೀಷಣ ಸುಗ್ರೀವಾದಿಗಳು ರಾಮನ ಮನಃಕಾಠಿಣ್ಯವನ್ನೂ ದೃಢನಿಶ್ಚಯವನ್ನೂ ನೋಡಿ ಬೆರಗಾಗಿ ನಿರ್ಜೀವಿಗಳಾದ ಚಿತ್ರ ಪುತ್ಥಳಿಗಳಂತೆ ನಿಂತಿ ದ್ದರು.” ವಾಯುಮಾರ್ಗದಲ್ಲಿ ದೇವತೆಗಳು-ಕುಸುಮ ಕೋಮಲವಾದ ಶ್ರೀರಾ ಮನ ಮನಸ್ಸು ಈ ರೀತಿಯಾಗಿ ವಜ್ರಕಾಠಿಣ್ಯವನ್ನು ಧರಿಸಬಹುದೇ ; ಅಯ್ಯೋ ! ಎಂದು ಮರುಗುತ್ತಿದ್ದರು, ಮತ್ತು ದೇವೇಂದ್ರನ ಪತ್ನಿಯಾದ ಶಚೀದೇವಿಯ ಇನ್ನೂ ಇತರರಾದ ದೇವಸಮೂಹವೂ ಈ ಸ್ಥಿತಿಯನ್ನೆಲ್ಲಾ ನೋಡಿ ಮಹಾ ಶಂಕಾತಂಕಿ ತಮನಸ್ಕರಾಗಿ-ಲೋಕದಲ್ಲಿ ಪುರುಷರಿಗೆ ಸಮಾನರಾದ ಕಠಿಣಹೃದಯವುಳ್ಳವರು ಯಾರೂ ಇಲ್ಲ, ಸರ್ವಜ್ಞನೂ ಲೋಕಾಭಿರಾಮನೂ ಆದ ರಾಮಚಂದ್ರನ ಮನಸ್ಸು ಇಂಥ ಮಹಾ ಪತಿವ್ರತೆಯಾದ ಸೀತೆಯಲ್ಲಿ ಇಷ್ಟು ಕಾಠಿಣ್ಯವುಳ್ಳುದಾದ ಮೇಲೆ ಸಾಧಾರಣರಾದ ಇತರ ಪುರುಷರನ್ನು ಮೆಚ್ಚಿಸುವುದು ಹೇಗೆ ? ಸತ್ಯದಿಂದ ಪುರುಷ
ಪುಟ:ಕಥಾ ಸಂಗ್ರಹ - ಭಾಗ ೨.djvu/೧೯೯
ಗೋಚರ